Advertisement

ಇಂಡಿ ತಾಲೂಕಲ್ಲಿ ಮಾದರಿ ಆಸ್ಪತ್ರೆ

12:12 PM Dec 25, 2019 | Naveen |

„ಉಮೇಶ ಬಳಬಟ್ಟಿ
ಇಂಡಿ:
ಸರಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಸಾರ್ವಜನಿಕರ ಪ್ರೀತಿಗೆ ಸರಕಾರಿ ಆಸ್ಪತ್ರೆಯೊಂದು ಪಾತ್ರವಾಗಿ ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ. ಬಹುತೇಕ ಸರಕಾರಿ ಆಸ್ಪತ್ರೆ ಎಂದರೆ ಎಲ್ಲರಿಗೂ ಅಲರ್ಜಿ. ಅಲ್ಲಿ ಚಿಕಿತ್ಸೆ ಸರಿಯಾಗಿ ನೀಡಲ್ಲ. ಸರಕಾರಿ ಆಸ್ಪತ್ರೆ ವೈದ್ಯರು ಆಸ್ಪತ್ರೆಗೆ ಸರಿಯಾಗಿ ಬರಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಂದು ಸರಕಾರಿ ಆಸ್ಪತ್ರೆ ಈ ಎಲ್ಲವುಗಳಿಗೂ ಹೊರತಾಗಿ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ.

Advertisement

ಇಂಡಿ ತಾಲೂಕಿನ ತಡವಲಗಾ ಗ್ರಾಮದ ಸರಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚಿಗೆ ಜನರ ಪ್ರೀತಿ-ವಿಶ್ವಾಸ ಗಳಿಸಿದೆ. ತಾಲೂಕಿನಲ್ಲಿ ಇದೊಂದೇ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೇರಿಯನ್‌ ಮಾಡಲಾಗುತ್ತಿದೆ. ಇಂಡಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಸಿಜೇರಿಯನ್‌ ವ್ಯವಸ್ಥೆ ಇಲ್ಲ. ಹೀಗಾಗಿ ತಾಲೂಕಿನ ವಿವಿಧ ಭಾಗಗಳಿಂದ ಈ ಆಸ್ಪತ್ರೆಗೆ ಹೆರಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಾರೆ.

ಪ್ರತಿ ದಿನ 150ರಿಂದ 180 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಮವಾರ ಮತ್ತು ಗುರುವಾರ ಗ್ರಾಮದಲ್ಲಿ ಸಂತೆ ಇರುವುದರಿಂದ 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 40-50 ಸಹಜ ಹೆರಿಗೆಯಾದರೆ 10-15 ಸಿಜೇರಿಯನ್‌ ಹೆರಿಗೆಯಾಗುತ್ತಿವೆ. ಇದು 30 ಹಾಸಿಗೆ ಆಸ್ಪತ್ರೆಯಾಗಿದ್ದು ಇಲ್ಲಿ ರಾತ್ರಿ ಸಹ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಜನರಿಗೆ ರಾತ್ರಿಯಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸುತ್ತದೆ. ತುರ್ತು ಚಿಕಿತ್ಸಾ ಕೇಂದ್ರ ಸಹ ಇದ್ದು ಅಪಘಾತಕ್ಕೆ ಒಳಗಾದವರು ಸಹ ಇಂಡಿ ನಗರ ಆಸ್ಪತ್ರೆಗಿಂತ ಹೆಚ್ಚಾಗಿ ತಡವಲಗಾ ಗ್ರಾಮದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿ ಚಿಕ್ಕ ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಸೇರಿದಂತೆ ಆಯುರ್ವೇದಿಕ್‌ ವೈದ್ಯರು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಇಡಿ ತಾಲೂಕಿನಲ್ಲಿಯೇ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬೇರೆ ಆಸ್ಪತ್ರೆಗಳಿಗೆ ಮಾದರಿಯಾಗಿದೆ. ಬೇರೆ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಈ ಆಸ್ಪತ್ರೆಯಲ್ಲಿನಂತೆ ಕಾರ್ಯ ನಿರ್ವಹಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇಂಡಿ ತಾಲೂಕಿನ ತಡವಲಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲ ವೈದ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ತಡವಲಗಾ ಆಸ್ಪತ್ರೆಯಲ್ಲಿ ಮಾತ್ರ ಸಿಜೇರಿಯನ್‌ ವ್ಯವಸ್ಥೆ ಇದೆ. ಹೀಗಾಗಿ ಹೆಚ್ಚಿನ ಗರ್ಭಿಣಿಯರು ತಡವಲಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುತ್ತಾರೆ.
ಡಾ| ಅರ್ಚನಾ ಕುಲಕರ್ಣಿ
ತಾಲೂಕು ಆರೋಗ್ಯಾಧಿಕಾರಿ
ಇಂಡಿ

Advertisement

ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲ ವೈದ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ಜನರ ಸಹಕಾರ ಹಾಗೂ ನಮ್ಮ ಇಲಾಖೆ ಅಧಿಕಾರಿಗಳ ಸಹಕಾರದಿಂದ ನಮ್ಮ ಆರೋಗ್ಯ ಕೇಂದ್ರ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
ಡಾ| ಸಿ.ಐ. ರಾಠೊಡ
ಮುಖ್ಯ ಆಡಳಿತಾಧಿ ಕಾರಿ
ತಡವಲಗಾ ಸಮುದಾಯ ಆರೋಗ್ಯ ಕೇಂದ್ರ

ನಮ್ಮ ಗ್ರಾಮದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಸಿಜೇರಿಯನ್‌ ಸಹ ಮಾಡಲಾಗುತ್ತಿದ್ದು ಆಸ್ಪತ್ರೆಗೆ ಪ್ರತಿ ದಿನ ನೂರಾರು ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ಸಿಬ್ಬಂದಿ ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸಿಸರೆ ನಮ್ಮ ಸಮುದಾಯ ಆರೋಗ್ಯ ಕೇಂದ್ರ ಜಿಲ್ಲೆಗೆ ಮಾದರಿಯಾಗಲಿದೆ.
ಚಂದ್ರಕಾಂತ ರೂಗಿ,
ತಡವಲಗಾ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next