Advertisement

ಅಳಿವಿನಂಚಿನಲ್ಲಿರುವ ಸಸ್ಯ, ವೃಕ್ಷ ಸಂರಕ್ಷಣೆ ಅಗತ್ಯ; ಮಾಜಿ ಸಚಿವ ವಿಜಯಶಂಕರ್‌

05:48 PM Aug 19, 2022 | Team Udayavani |

ಮೈಸೂರು: ಅಳಿವಿನಂಚಿನಲ್ಲಿರುವ ಸಸ್ಯ ಹಾಗೂ ವೃಕ್ಷದ ತಳಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವ ಸಿ. ಎಚ್‌.ವಿಜಯಶಂಕರ್‌ ಹೇಳಿದರು.

Advertisement

ಸರ್ಕಾರಿ ಆಯುರ್ವೆದ ಸಂಶೋಧನಾ ಕೇಂದ್ರ ಹಾಗೂ ಸರ್ಕಾರಿ ಆಯುರ್ವೆದ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಬುಧವಾರ ಆಯೋಜಿಸಿದ್ದ “ಗಿಡಮೂಲಿಕೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂಲ ಅರಣ್ಯದ ವೃಕ್ಷಗಳ ಪಟ್ಟಿಯಲ್ಲಿ ಸೇರಿಸಿದ್ದ 603 ಬಗೆಯ ವೃಕ್ಷ ತಳಿಗಳ ಪೈಕಿ 350 ತಳಿ ನಾಶವಾಗಿದ್ದು, ಇನ್ನಷ್ಟು ತಳಿ ಅವನತಿಯತ್ತ ಸಾಗಿವೆ. ಆದ್ದರಿಂದ ಅಳಿವಿನಂಚಿನಲ್ಲಿರುವ ಸಸ್ಯ ಹಾಗೂ ವೃಕ್ಷಗಳ ತಳಿಗಳನ್ನು ರಕ್ಷಿಸುವ ಸಂಬಂಧದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಗಿಡ-ಮರಗಳ ಮಹತ್ವ ತಿಳಿಸುವ ನಿಟ್ಟಿನಲ್ಲಿ ಶ್ರೀಕೃಷ್ಣನೇ ಮೂಲ ರೂವಾರಿ ಎಂದರೆ ತಪ್ಪಾಗಲಾರದು. ಔಷಧ ಗುಣವುಳ್ಳ ಸಸ್ಯಗಳು ಸೇರಿದಂತೆ ಗಿಡ-ಮರ ರಕ್ಷಣೆಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡುವ ಮೂಲಕ ಜಾಗೃತಿ ಮೂಡಿಸಿದರು ಎಂದರು.

ಹವಾಮಾನ ವೈಪರಿತ್ಯ: ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಭಾರಿ ಪ್ರಮಾಣದ ದೌರ್ಜನ್ಯ ನಡೆಯುತ್ತಿರುವುದರಿಂದ ಹವಾಮಾನದಲ್ಲಿ ಏರಿಳಿತ ಉಂಟಾಗುತ್ತಿದೆ. ಇಂಗ್ಲೆಂಡ್‌ನ‌ಲ್ಲಿ 500 ವರ್ಷದ ಇತಿಹಾಸಲ್ಲೇ ಮೊದಲ ಬಾರಿಗೆ ಕಂಡು ಕೇಳರಿಯದ ಭೀಕರ ಬರಗಾಲದ ಸ್ಥಿತಿ ತಲೆದೂರಿದೆ. ಮಳೆ ಇಲ್ಲದೇ ಇದ್ದ ಅರಬ್‌ ರಾಷ್ಟ್ರಗಳಲ್ಲಿ ಭೀಕರ ಮಳೆ, ಭಾರತದಲ್ಲೂ ಕಂಡು ಕೇಳರಿಯ ದಂತಹ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಇದಕ್ಕೆಲ್ಲಾ ಕಾರಣ ಪರಿಸರದ ಮೇಲೆ ಜನರು ವಿವಿಧ ಕಾರಣಗಳಿಂದ ದೌರ್ಜನ್ಯ ಎಸಗುತ್ತಿರುವುದೇ ಆಗಿದೆ ಎಂದರು.

Advertisement

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಈ ಹಿಂದೆಯೇ ಬರಗಾಲ ತಲೆದೂರಿದ್ದ ಸಂದರ್ಭದಲ್ಲಿ ವನಸ್ಪತಿ ದೇವರನ್ನು ಆರಾಧಿಸಿದ್ದ ನಿದರ್ಶನವಿದೆ. ಈ ಹಿನ್ನೆಲೆಯಲ್ಲಿ ಗಿಡಗಳನ್ನು ನೆಟ್ಟು, ಪೋಷಿಸಬೇಕು. ಯಾರು ಗಿಡವನ್ನು ನೆಟ್ಟು ಬೆಳೆಸುತ್ತಾರೋ ಅಂತಹವರನ್ನು ದೇವರು ಕಾಪಾಡುತ್ತಾರೆ. ನಾವು ಎಲ್ಲೋ ಇರುವ ದೇವರನ್ನು ಹುಡುಕುತ್ತೇವೆ. ಆದರೆ, ನಿಜವಾದ ದೇವರು ನಮ್ಮ ಸುತ್ತಮುತ್ತ ಇರುವ ಗಿಡ-ಮರಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಗಿಡ-ಮರಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ವಿವಿಧ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಟಿ-ಶರ್ಟ್‌ ವಿತರಿಸಲಾಯಿತು. ಸರ್ಕಾರಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಗಜಾನನ ಹೆಗಡೆ, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಎಸ್‌ಎಸ್‌ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ, ಆಯುಷ್‌ ಇಲಾಖೆ ಡಾ.ಎನ್‌. ಆಂಜನೇಯ ಮೂರ್ತಿ, ನಿವೃತ್ತ ಜಿಲ್ಲಾ ಆಯುಷ್‌ ಡಾ.ಎನ್‌.ನಾಗೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next