Advertisement
ಅಷ್ಟೇ ಅಲ್ಲ, ಸದ್ಯದಲ್ಲೇ ಉಕ್ರನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಮುಖಾಮುಖಿ ಭೇಟಿಯಾಗಿ ಈ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಲಿದ್ದಾರೆ ಎಂದು ಉಕ್ರೇನ್‌ನ ಸಂಧಾನ ಕಾರರೊಬ್ಬರು ತಿಳಿಸಿದ್ದಾರೆ. ಅವರ ಈ ಹೇಳಿ ಕೆಯು ಯುದ್ಧ ಮುಗಿಯುವ ಆಶಾಭಾವ ಮೂಡಿಸಿದೆ.
Related Articles
Advertisement
ಸೂಪರ್‌ಯಾಕ್ಟ್ ಜಪ್ತಿ: ಈ ಬೆಳವಣಿಗೆಯ ನಡುವೆಯೇ, ರಷ್ಯಾದ ಕೋಟ್ಯಧಿಪತಿ ಉದ್ಯಮಿಯ ಮಾಲಕತ್ವದ ಬೃಹತ್ ವಿಹಾರನೌಕೆಯೊಂದನ್ನು ಲಂಡನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮೇಲೆ ಯುಕೆ ಸರಕಾರ ಈಗಾಗಲೇ ನಿರ್ಬಂಧ ವಿಧಿಸಿದ್ದು, ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನೌಕೆ 38 ದಶಲಕ್ಷ ಪೌಂಡ್ ಮೌಲ್ಯದ್ದು. ಇನ್ನೊಂದೆಡೆ, ಬೇಹುಗಾರಿಕೆಯಲ್ಲಿ ತೊಡ ಗಿದ ಆರೋಪದ ಮೇರೆಗೆ ರಷ್ಯಾದ 21 ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ಬಿಟ್ಟು ಹೋಗುವಂತೆ ಬೆಲ್ಜಿಯಂ ಮಂಗಳವಾರ ಆದೇಶಿಸಿದೆ.
ಅತ್ಯಾಚಾರ ಆರೋಪ: ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಮೇಲೆ ಅತ್ಯಾ ಚಾರ ವೆಸಗುತ್ತಿರುವ ದೂರು ಗಳು ಕೇಳಿಬಂದಿವೆ. ಮಂಗಳವಾರ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದು, “ಮಾ.9ರಂದು ಮನೆಗೆ ನುಗ್ಗಿದ ಇಬ್ಬರು ಸೈನಿಕರು, ನಾವು ಸಾಕಿದ್ದ ನಾಯಿಯನ್ನು ಕೊಂದರು. ನಂತರ ನನ್ನ ಪತಿಯನ್ನು ಕೊಂದರು. ಆಮೇಲೆ ನನ್ನ ತಲೆಗೆ ಬಂದೂಕು ಇಟ್ಟು, ಬಟ್ಟೆ ಬಿಚ್ಚುವಂತೆ ಹೇಳಿ ಅತ್ಯಾಚಾರವೆಸಗಿದರು. ನನ್ನ 4 ವರ್ಷದ ಮಗ ಇನ್ನೊಂದು ರೂಮಿನಲ್ಲಿ ಅಳುತ್ತಾ ಕುಳಿತಿದ್ದ’ ಎಂದು ಆರೋಪಿಸಿದ್ದಾರೆ.
ಏನೂ ತಿನ್ನದಿರಿ,ನೀರೂ ಮುಟ್ಟದಿರಿ!ರಷ್ಯಾದ ಕೋಟ್ಯಧಿಪತಿ ಉದ್ಯಮಿ ರೋಮನ್ ಅಬ್ರಮೋವಿಚ್ ಮತ್ತು ಉಕ್ರೇನ್‌ನ ಇಬ್ಬರು ಹಿರಿಯ ಸಂಧಾನಕಾರರಿಗೆ ಈ ತಿಂಗಳ ಆರಂಭದಲ್ಲಿ ರಷ್ಯಾ ವಿಷ ಹಾಕಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದ ಸಂಧಾನ ಸಭೆಯ ವೇಳೆ, “ನೀರು ಕುಡಿಯಬಾರದು, ಏನನ್ನೂ ತಿನ್ನಬಾರದು, ಯಾವುದೇ ಮೇಲ್ಮೈ ಯನ್ನೂ ಮುಟ್ಟಬಾರದು’ ಎಂದು ಸಂಧಾನಕಾರರಿಗೆ ಉಕ್ರೇನ್ ಸೂಚಿಸಿದೆ. ಈ ಹಿಂದೆ ಉಕ್ರೇನ್‌ನ ಕೋರಿಕೆಗೆ ಮಣಿದು ಉದ್ಯಮಿ ಅಬ್ರಮೋವಿಚ್ ಅವರು ಸಂಧಾನಕಾರರಾಗಲು ಒಪ್ಪಿದ್ದರು. ಇದು ರಷ್ಯಾದ ಕೋಪಕ್ಕೆ ಕಾರಣವಾಗಿತ್ತು. ಕೀವ್‌ನಲ್ಲಿ ಸಂಧಾನ ಮಾತುಕತೆಗೆಂದು ಹೋಗಿದ್ದಾಗ ಈ ಮೂವರಿಗೂ ರಷ್ಯಾ ವಿಷ ಹಾಕಿತ್ತು ಎಂದು ಹೇಳಲಾಗಿದೆ. ಪರಿಣಾಮ, ಮೂವರಿಗೂ ಕಣ್ಣುರಿ, ಮುಖ, ಕೈಗಳ ಚರ್ಮಕ್ಕೆ ಹಾನಿ ಮತ್ತಿತರ ಸಮಸ್ಯೆ ತಲೆದೋರಿತ್ತು. ಭಾರತಕ್ಕೆ ರಷ್ಯಾದಿಂದ 45,000 ಟನ್ ಅಡುಗೆ ಎಣ್ಣೆ
ರಷ್ಯಾ ತನ್ನ ವಿರುದ್ಧ ಯುದ್ಧ ಆರಂಭಿಸಿದ ಅನಂತರ ಉಕ್ರೇನ್ ಸೂರ್ಯಕಾಂತಿ ಎಣ್ಣೆ ರಫ¤ನ್ನು ನಿಲ್ಲಿಸಿದೆ. ಇದರ ಪರಿಣಾಮ ಭಾರತದ ಮೇಲಾಗಿ, ಸ್ಥಳೀಯ ಅಡುಗೆ ಎಣ್ಣೆಯ ಬೆಲೆ ತೀವ್ರವಾಗಿ ಏರಿದೆ. ಇದೇ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಎಪ್ರಿಲ್‌ನಲ್ಲಿ ದುಬಾರಿ ಬೆಲೆಗೆ 45,000 ಟನ್ ಸೂರ್ಯಕಾಂತಿ ಎಣ್ಣೆ ಭಾರತಕ್ಕೆ ಬರಲಿದೆ. ಹೀಗೆಂದು ದೇಶದ 5 ಉದ್ಯಮಗಳ ಮೂಲಗಳು ಮಾಹಿತಿ ನೀಡಿವೆ. ಸದ್ಯ ಇಂಡೋನೇಷ್ಯಾ ತನ್ನದೇ ಕಾರಣಗಳಿಗಾಗಿ ತಾಳೆ ಎಣ್ಣೆಯ ರಫ¤ನ್ನು ಕಡಿಮೆ ಮಾಡಿದೆ. ಮತ್ತೂಂದು ಕಡೆ ದ.ಅಮೆರಿಕದಲ್ಲಿ ಸೋಯಾಬೀನ್ ಬೆಳೆಯೂ ಕಡಿಮೆಯಾಗಿದೆ. ಒಟ್ಟಾರೆ ಈ ಎಲ್ಲದರ ಪರಿಣಾಮ ಜಗತ್ತಿನಲ್ಲೇ ಗರಿಷ್ಠ ಎಣ್ಣೆ ಆಮದುದಾರ ದೇಶವಾದ ಭಾರತದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.