Advertisement

ಒಂದೋ ಉಗ್ರರ ಹುಟ್ಟಡಗಿಸಿ, ಇಲ್ಲವೇ ಕಠಿಣ ಕ್ರಮ ಎದುರಿಸಿ; ಪಾಕ್ ಗೆ FATF ಎಚ್ಚರಿಕೆ

11:43 AM Oct 19, 2019 | Nagendra Trasi |

ವಾಷಿಂಗ್ಟನ್: ಒಂದೋ 2020ರ ಫೆಬ್ರುವರಿಯೊಳಗೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ಮಟ್ಟಹಾಕಬೇಕು, ಇಲ್ಲದಿದ್ದರೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಜಾಗತಿಕ ಭಯೋತ್ಪಾದನಾ ಚಟುವಟಿಕೆ ಮೇಲೆ ನಿಗಾವಹಿಸುವ ಹಣಕಾಸು ಕಾರ್ಯಪಡೆ(ಎಫ್ ಎಟಿಎಫ್) ಪಾಕಿಸ್ತಾನಕ್ಕೆ ನೇರವಾಗಿ ರವಾನಿಸಿರುವ ಎಚ್ಚರಿಕೆಯ ಸಂದೇಶ ಇದಾಗಿದೆ.

Advertisement

ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಎಫ್ ಎಟಿಎಫ್ ನ ನಿರ್ದೇಶನದಂತೆ ನೀಡಲಾಗಿದ್ದ 27 ಕಾರ್ಯಸೂಚಿಗಳಲ್ಲಿ 22 ಷರತ್ತುಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಈ ನಿಟ್ಟಿನಲ್ಲಿ ಗ್ಲೋಬಲ್ ವಾಚ್ ಡಾಗ್ ಇಸ್ಲಾಮಾಬಾದ್ ಗೆ ಎಚ್ಚರಿಕೆಯನ್ನು ನೀಡಿದೆ.

ಫೆಬ್ರುವರಿ 2020ರೊಳಗೆ ತ್ವರಿತವಾಗಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಫ್ ಎಟಿಎಫ್ ಪಾಕಿಸ್ತಾನಕ್ಕೆ ಒತ್ತಾಯಿಸಿದ್ದು, ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೊಸ ಪ್ರಕಟಣೆಯಲ್ಲಿ ತಿಳಿಸಿದೆ.

ಹಣಕಾಸು ಅವ್ಯವಹಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ವಿಫಲವಾಗಿರುವ ಪಾಕಿಸ್ತಾನವನ್ನು ಎಫ್ ಎಟಿಎಫ್ ಈಗಾಗಲೇ ಗ್ರೇ ಪಟ್ಟಿಗೆ ಸೇರಿಸಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಈ ಬಾರಿ ಉಗ್ರರ ದಮನಕ್ಕೆ ಮುಂದಾಗದೇ ಇದ್ದರೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ಯಾರೀಸ್ ಮೂಲದ ಹಣಕಾಸು ಕಾರ್ಯಪಡೆ(ಎಫ್ ಎಟಿಎಫ್) ಪಾಕ್ ವಿರುದ್ಧ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next