Advertisement
8 ರನ್ನುಗಳ ಅಲ್ಪ ಮುನ್ನಡೆ ಬಳಿಕ ದ್ವಿತೀಯ ಸರದಿ ಆರಂಭಿಸಿದ ಇಂಗ್ಲೆಂಡ್ 5 ವಿಕೆಟಿಗೆ 258 ರನ್ ಗಳಿಸಿ ಡಿಕ್ಲೇರ್ ಮಾಡಿತು. 267 ರನ್ನುಗಳ ಗುರಿ ಪಡೆದ ಆಸ್ಟ್ರೇಲಿಯ ಪಂದ್ಯ ಮುಗಿಯುವಾಗ 6 ವಿಕೆಟ್ ಕಳೆದುಕೊಂಡು 154 ರನ್ ಮಾಡಿತ್ತು. ಸ್ಟೀವನ್ ಸ್ಮಿತ್ ಗಾಯಾಳಾಗಿ ಹೊರಗುಳಿದದ್ದು ಆಸೀಸ್ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿತು. ಇಂಗ್ಲೆಂಡಿಗೆ ಸರಣಿ ಸಮಬಲದ ಅವಕಾಶ ತಪ್ಪಿಹೋಯಿತು. ಇದು 1997ರ ಬಳಿಕ ಲಾರ್ಡ್ಸ್‌ನಲ್ಲಿ ಡ್ರಾಗೊಂಡ ಮೊದಲ ಆ್ಯಶಸ್ ಟೆಸ್ಟ್ ಆಗಿದೆ.
ವಾರ್ನರ್ (5), ಖ್ವಾಜಾ (2), ಬಾನ್‌ಕ್ರಾಫ್ಟ್ (16) ವಿಕೆಟ್‌ಗಳು 47 ರನ್ನಿಗೆ ಉರುಳಿದ ಬಳಿಕ ಮಾರ್ನಸ್ ಲಬುಶೇನ್ (59) ಮತ್ತು ಟ್ರ್ಯಾವಿಸ್ ಹೆಡ್ (ಔಟಾಗದೆ 42) ತಂಡದ ನೆರವಿಗೆ ನಿಂತರು. 4ನೇ ವಿಕೆಟಿಗೆ 85 ರನ್ ಒಟ್ಟುಗೂಡಿಸಿದರು. ಆದರೆ ಕೊನೆಯಲ್ಲಿ 17 ರನ್ ಅಂತರದಲ್ಲಿ ಮತ್ತೆ 3 ವಿಕೆಟ್‌ಗಳು ಉರುಳಿದಾಗ ಆಸೀಸ್ ಆತಂಕಕ್ಕೆ ಸಿಲುಕಿತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ 251 ರನ್ನುಗಳಿಂದ ಗೆದ್ದಿತ್ತು. ಸರಣಿಯ 3ನೇ ಟೆಸ್ಟ್ ಆ. 22ರಿಂದ ಲೀಡ್ಸ್‌ನಲ್ಲಿ ಆರಂಭವಾಗಲಿದೆ.ಉರುಳಿದ 6 ವಿಕೆಟ್‌ಗಳನ್ನು ಜೋಫÅ ಆರ್ಚರ್, ಜಾಕ್ ಲೀಚ್ ಹಂಚಿಕೊಂಡರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 115 ರನ್‌ಗೆ ಬಾರಿಸಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Related Articles
ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್.
Advertisement
“ಲೈಕ್ ಫಾರ್ ಲೈಕ್’ನೂತನ ನಿಯಮದನ್ವಯ, 143 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ “ಲೈಕ್ ಫಾರ್ ಲೈಕ್’ ಬದಲಿ ಕ್ರಿಕೆಟಿಗನಾಗಿ ಬ್ಯಾಟ್ ಹಿಡಿದು ಬಂದದ್ದು ಮಾರ್ನಸ್ ಲಬುಶೇನ್ ಪಾಲಿನ ಹೆಗ್ಗಳಿಕೆ. ಸ್ಮಿತ್ ಹೊರಬಿದ್ದುದರಿಂದ ಲಬುಶೇನ್‌ಗೆ ಈ ಅವಕಾಶ ಲಭಿಸಿತ್ತು. ಮೊದಲಾದರೆ ಕೀಪಿಂಗ್ ಹಾಗೂ ಗ್ರೌಂಡ್ ಫೀಲ್ಡಿಂಗ್ ಹೊರತುಪಡಿಸಿ ಬೇರೆ ಯಾವುದೇ ವಿಭಾಗಗಳಲ್ಲಿ ಬದಲಿ ಆಟಗಾರನಿಗೆ ಅವಕಾಶ ಇರಲಿಲ್ಲ.