Advertisement

ಅಬ್ಬರದ ಪ್ರಚಾರ ಭರಾಟೆ ಅಂತ್ಯ: ಇಂದು ಮತದಾನ

08:11 PM Apr 22, 2019 | sudhir |

ಕುಂಬಳೆ: ಹದಿನೇಳನೆಯ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಭರಾಟೆ ರವಿವಾರ ಸಂಜೆ ಅಂತ್ಯ ಗೊಂಡಿತು.

Advertisement

ಚುನಾವಣೆ ಘೋಷಣೆಯಾದ ಬಳಿಕ ಹಳ್ಳಿ, ಗಲ್ಲಿ ಕೇರಿಗಳಲ್ಲಿ ವಾಹನಗಳಿಗೆ ಮೈಕ್‌ ಕಟ್ಟಿ ಪಕ್ಷದ ಅಭ್ಯರ್ಥಿಗೆ ಮತಯಾಚಿಸುವ ಪ್ರಚಾರ ನಿರಂತರವಾಗಿ ನಡೆಯುತ್ತಿತ್ತು.ಬಹಿರಂಗ ಸಭೆ, ಕಾರ್ನರ್‌ ಮೀಟಿಂಗ್‌ಗಳು ಕ್ಷೇತ್ರದಾದ್ಯಂತ ನಡೆಯುತ್ತಿತ್ತು.

ಕುಂಬಳೆ, ಉಪ್ಪಳ ಮಂಜೇಶ್ವರ ಹೊಸಂಗಡಿಗಳಲ್ಲಿ ಎಡರಂಗ,ಐಕ್ಯರಂಗ, ಎನ್‌ಡಿ.ಎ ಪಕ್ಷಗಳ ಕಾರ್ಯಕರ್ತರು ಬಹಿರಂಗ ಪ್ರಚಾರದ ಕೊನೆಯ ದಿನದಂದು ಬ್ಯಾಂಡ್‌ ವಾದ್ಯಮೇಳದೊಂದಿಗೆ ಅಮಿತೋತ್ಸಾಹದಿಂದ ಪಾಲ್ಗೊಂಡರು. ಯುವಕರೇ ಹೆಚ್ಚಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪಕ್ಷದ ಯೂನಿಫಾರಂ ಮತ್ತು ಟೊಪ್ಪಿ ಧರಿಸಿ, ಪಕ್ಷದ ಧ್ವಜವನ್ನು ಮುಂಡಾಸು ಕಟ್ಟಿ ಸಂಭ್ರಮಿಸಿದರು.ವಾಹನಗಳ ಮೇಲೇರಿ ಭಾರೀಗಾತ್ರದ ಧ್ವಜ ಹಿಡಿದು ಅದನ್ನು ಸಾರ್ವಜನಿಕರತ್ತ ಬೀಸಿ ಜೈಕಾರ ಮೊಳಗಿಸಿ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಬಹಿರಂಗ ಪ್ರಚಾರದ ಬಳಿಕ ಚುನಾವಣೆ ನಡೆಯುವ ಎ. 23ರಂದು ಬೆಳಗ್ಗಿನ ತನಕ ಮತ ಯಾಚಿಸಲು ಕಾನೂನಿನ ಅಡ್ಡಿ ಇಲ್ಲ.ಈ ದಿನದಲ್ಲಿ ಕಾರ್ಯಕರ್ತರು ಹಗಲು ಹೊತ್ತಿನಲ್ಲಿ ಮತಕ್ಕಾಗಿ ಪ್ರಚಾರ ನಡೆಸಿದರೆ ಇನ್ನು ಕೆಲವರು ಕೆಲವೊಂದು ಕಡೆಗಳಿಗೆ ರಾತ್ರಿ ಕಾಲದಲ್ಲಿ ಕೆಲವು ಕಾಲನಿಗಳಲ್ಲಿ ಮತದಾರರನ್ನು ಗುಪ್ತವಾಗಿ ಭೇಟಿ ನೀಡಿದರು. ತಮ್ಮ ಪಕ್ಷಕ್ಕೆ ಖಂಡಿತಾ ಮತ ದೊರೆಯದೆಂಬವರನ್ನು ಅತ್ತಿ¤ತ್ತ ವಾಲುತ್ತಿರುವ ಕೆಲವರನ್ನು ಕಂಡು ಕೊಂಡು ಇವರಿಗೆ ಕೈಬಿಸಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತಗಳನ್ನು ಗಟ್ಟಿ ಮಾಡಿಸಿಕೊಂಡ ಗುಪ್ತ ಸಂಪರ್ಕವೂ ನಡೆದಿದೆ.

ಒಟ್ಟಿನಲ್ಲಿ ಬಿಸಿಲ ತಾಪಮಾನವನ್ನೂ ಲೆಕ್ಕಿಸದೆ ಕೊನೆಯ ದಿನಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಕಾಸರಗೋಡು ಲೋಕಸಭಾ ಕೇÒತ್ರದ 683 ಕೇಂದ್ರಗಳಲ್ಲಿ ಒಟ್ಟು 1,317 ಮತಕಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.

Advertisement

ಪ್ರಚಾರ ತಂದ ಕಿರಿಕಿರಿ
ಆದರೆ ಇವರ ಸಂಭ್ರಮಾ ಚರಣೆ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ರಾಜ್ಯದ ಕೆಲಕಡೆಗಳಲ್ಲಿ ಪರಸ್ಪರ ಹಲ್ಲೆ ನಡೆದಿದೆ. ವಾಹನಗಳ ಸಂಚಾರಕ್ಕೆ ರಸ್ತೆ ತಡೆ ಉಂಟಾ ಯಿತು. ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಜನರ ಸ್ವಾತಂತ್ರÂಕ್ಕೆ ತಡೆ ಉಂಟು ಮಾಡುವ ಈ ಪ್ರಚಾರ ಕಾರ್ಯಕ್ರಮವನ್ನು ನಿಬ‌ìಂಧಿಸಬೇಕೆಂಬ ಅಭಿಪ್ರಾಯ ಹೆಚ್ಚಿನವರಿಂದ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next