Advertisement
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವೈದೇಹಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು.
Related Articles
Advertisement
ಸಮ್ಮೇಳನದ ಉಪ ವೇದಿಕೆಯಲ್ಲಿ ಯುವ ಕವಿಗಳಿಂದ ಕವಿಗೋಷ್ಠಿ, ಮರೆಯಲಾಗದ ಮಹನೀಯರು ವಿಚಾರಗೋಷ್ಠಿ, ಯಕ್ಷಗಾನದ ಸ್ಥಿತ್ಯಂತರ ಗಳ ಕುರಿತು ವಿಚಾರ ವಿನಿಮಯ, ಮಹಿಳೆ ಮತ್ತು ಸಾಮಾಜಿಕ ಸವಾಲುಗಳು ಎನ್ನುವ ವಿಚಾರದ ಕುರಿತು ಚರ್ಚೆ ಹಾಗೂ ವೈದೇಹಿಯವರ ಬರಹದಲ್ಲಿ ಮಹಿಳಾ ಪ್ರಜ್ಞೆ ವಿಚಾರ ವಿನಿಮಯ ನಡೆಯಿತು.
ಉದಯವಾಣಿ ಕುರಿತು ಪ್ರಸ್ತಾವ :
ಸಮ್ಮೇಳನಾಧ್ಯಕ್ಷೆ ಲೇಖಕಿ ವೈದೇಹಿ ಯವರನ್ನು ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು ಎನ್ನುವ ಆಶಯ ವ್ಯಕ್ತಪಡಿಸಿರುವುದು ಅವರಲ್ಲಿನ ಸ್ತ್ರೀಪರ ಚಿಂತನೆಗಳು ವ್ಯಕ್ತವಾಗುತ್ತವೆ ಮತ್ತು ಸಂದರ್ಶನ ಉತ್ತಮವಾಗಿದ್ದು ಮನದ ಮಾತುಗಳು ದಾಖಲಾಗಿವೆ ಎಂದು ಸಮ್ಮೇಳನ ಉದ್ಘಾಟಿಸಿದ ಜಾನಕಿ ಹಂದೆ ತಿಳಿಸಿದರು.
ಸರಳ ಮೆರವಣಿಗೆ :
ಈ ಹಿಂದಿನ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆ ಕೇವಲ ಚೆಂಡೆ ನಿನಾದ, ಮಂಗಳವಾದ್ಯದೊಂದಿಗೆ, ಸಮ್ಮೇಳನದ ವಠಾರ ದಲ್ಲಿ ಸರಳವಾಗಿ ನಡೆಯಿತು.
ವ್ಯವಸ್ಥಿತ ಊಟೋಪಚಾರ : ಸಮ್ಮೇಳಕ್ಕೆ ಆಗಮಿಸಿದವರಿಗೆ ಬೆಳಗ್ಗೆ ಉಪಹಾರ, ಅಪರಾಹ್ನ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಕೈಗೊಳ್ಳಲಾಗಿತ್ತು. ಊಟೋಪಚಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.