ಕೆ.ಆರ್.ನಗರ: ಸಮಾಜ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಪೋ›ತ್ಸಾಹಿಸುವ ಕೆಲಸ ಮಾಡಿದರೆ ಪ್ರತಿಭಾವಂತ ವಿದ್ಯಾರ್ಥಿ ಗಳು ಮತ್ತಷ್ಟು ಸಾಧನೆ ಮಾಡಲು ಸಹಕಾರಿ ಯಾಗಲಿದೆ ಎಂದು ಮಿರ್ಲೆ ಕ್ಷೇತ್ರದ ಜಿಪಂ ಸದಸ್ಯ ಸಾ.ರಾ. ನಂದೀಶ್ ಹೇಳಿದರು.
ತಾಲೂಕಿನ ಶೀಗವಾಳು ಗ್ರಾಮದ ಶ್ರೀ ಸೀತಾರಾಮಾಂಜನೇಯ ಸೇವಾಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಸಾಕಷ್ಟು ಪ್ರತಿಭಾನ್ವಿತರಿದ್ದು, ಪ್ರತಿಭೆಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಪೋ›ತ್ಸಾಹಿಸಬೇಕಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಇತರ ಸೇವಾ ವಲಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜಮುಖೀ ಕೆಲಸ ಮಾಡುತ್ತಿರುವ ಶ್ರೀ ಸೀತಾರಾಮಾಂಜನೇಯ ಸೇವಾಟ್ರಸ್ಟ್‌ನ ಸೇವೆ ಶ್ಲಾಘನೀಯ. ಟ್ರಸ್ಟ್‌ಗೆ ವೈಯಕ್ತಿಕವಾಗಿ 25 ಸಾವಿರ ರೂ. ಧನಸಹಾಯ ನೀಡಿದರು.
ಮೇಲುಕೋಟೆ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿ, ಶ್ರೀ ಸೀತಾರಾಮಾ ಂಜನೇಯ ಸೇವಾಟ್ರಸ್ಟ್ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಮೂಲಕ ನೆರವು ನೀಡುತ್ತಿದೆ.
ಇದಲ್ಲದೆ ಆರೋಗ್ಯ ಶಿಬಿರದಂತ ಅನೇಕ ಸಮಾಜಮುಖೀ ಸೇವೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಸರಕಾರಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು. ಗ್ರಾಪಂ ವ್ಯಾಪ್ತಿಯ ಶೀಗವಾಳು, ಕಾಳಮ್ಮನ ಕೊಪ್ಪಲು, ಬೆಟ್ಟಹಳ್ಳಿ, ಮಲುಗನಹಳ್ಳಿ ಹಾಗೂ ಕುಲುಮೆ ಹೊಸೂರು ಗ್ರಾಮಗಳ ಆರು ಸರಕಾರಿ ಶಾಲೆಗಳ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸ ಲಾಯಿತು.
ಟ್ರಸ್ಟ್‌ನ ಅಧ್ಯಕ್ಷ ಎಂ. ಶ್ರೀನಿವಾಸ ಅಯ್ಯಂಗಾರ್, ಪದಾಧಿಕಾರಿಗಳಾದ ರಾಮಪ್ರಸಾದ್, ಗೋಧಾ ರಾಮಪ್ರಸಾದ್, ಪ್ರಭಾಕರ್, ಸುದರ್ಶನ್, ಮಧುಸೂಧನ್, ರವಿಪ್ರಕಾಶ್, ಗ್ರಾಪಂ ಅಧ್ಯಕ್ಷೆ ಕುಸುಮಾ ಮಂಜುನಾಥ್, ಉಪಾಧ್ಯಕ್ಷ ಕೋಮಾಲಚಾರಿ, ಸದಸ್ಯರಾದ ತುಳಸೀರಾವ್, ಪ್ರಭಾಹರೀಶ್ ಇತರರು ಹಾಜರಿದ್ದರು.