Advertisement

ಎಲ್ಲರ ಪ್ರೋತ್ಸಾಹ ಸಮಾಜ ಸೇವೆಗೆ ಪ್ರೇರಣೆ: ಚಂದ್ರಶೇಖರ್‌ ಪೂಜಾರಿ

04:36 PM Oct 25, 2019 | Suhan S |

ಮುಂಬಯಿ, ಅ. 24: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸಾಮಾನ್ಯ ಮತ್ತು ಸಹಾಯಕ ಉಪಸಮಿತಿಯ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಮಂಗಳೂರಿದ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ವಿಮಾನ ಎಂಬ ನಾಟಕವನ್ನು ಇತ್ತೀಚೆಗೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಜರಗಿತು.

Advertisement

ಈ ನಾಟಕದ ಸಭಾಧ್ಯಕ್ಷತೆಯನ್ನು ವಹಿಸಿದ ಅಸೋಸಿಯೇಶನ್‌ನ ಅಧ್ಯಕ್ಷರಾದ ಚಂದ್ರಶೇಖರ್‌ ಎಸ್‌. ಪೂಜಾರಿ ಅವರು ಮಾತನಾಡಿ, ನಮ್ಮ ಸಮಾಜ ಅನಾರೋಗ್ಯ ಪೀಡಿತರಿಗಾಗಿ ಹಮ್ಮಿಕೊಂಡತಹ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಕಲಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ತಾವು ನೀಡಿದ ದೇಣಿಗೆ ಅನಾರೋಗ್ಯದಿಂದ ಬಳಲುತ್ತಿರುವ ಸರ್ವ ಸಮಾಜದ ಒಂದು ಪರಿವಾರದ ಕಣ್ಣೀರನ್ನೊರೆಸಲು ಉಪಯೋಗಿಸುತ್ತೇವೆ. ನಿಮ್ಮ ನಿರಂತರ ಪ್ರೋತ್ಸಾಹ ನಮಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ನೀಡಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಾರತ್‌ ಬ್ಯಾಂಕಿನ ನಿರ್ದೇಶಕ ಭಾಸ್ಕರ್‌ ಸಾಲ್ಯಾನ್‌ ಅವರು ಮಾತನಾಡಿ, ಆರೋಗ್ಯ ನಿಧಿಯನ್ನು ಸ್ಥಾಪಿಸಿ ಅಸೋಸಿಯೇಶನ್‌ ಮುಂಬಯಿ ಮಹಾನಗರದ ಹಾಗೂ ಊರಿನಿಂದ ಬರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ನೀಡಿ ಸಹಕರಿಸುತ್ತಿದೆ. ಇಂದು ಮಹಾಮಾರಿ ಕ್ಯಾನ್ಸರ್‌ ನಂತಹ ಕಾಯಿಲೆಯಿಂದಾಗಿ ಇಡೀ ಪರಿವಾರ ಸಂಕಷ್ಟಕ್ಕೆ ಒಳಗಾಗುತ್ತಿದೆ. ನಾವು ರಕ್ತದಾನ ಶಿಬಿರವನ್ನು ಹಲವಾರು ವರ್ಷಗಳಿಂದ ಆಯೋಜಿಸುತ್ತಿದ್ದೇವೆ. ಕ್ಯಾನ್ಸರ್‌ ರೋಗಿಗಳಿಗೆ ಬಿಳಿರಕ್ತಕಣದ ಆವಶ್ಯಕತೆ ಇದೆ. ಅಂತಹ ಸಮಯದಲ್ಲಿ ನಾವು ಆರೋಗ್ಯವಂತರಿಂದ ಬಿಳಿ ರಕ್ತಕಣವನ್ನು ಪಡೆದು ಸಹಕರಿಸಬಹುದೆಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಭಾರತ್‌ ಬ್ಯಾಂಕಿನ ನಿರ್ದೇಶಕಿ ಶಾರದಾ ಎಸ್‌. ಕರ್ಕೇರ ಹಾಗೂ ಭಾರತ್‌ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ರಾಜಾ ವಿ. ಸಾಲ್ಯಾನ್‌ ಹಾಗೂ  ಅಸೋಸಿಯೇಶನಿನ ಉಪಾಧ್ಯಕ್ಷರಾದ ಶಂಕರ್‌ ಡಿ. ಪೂಜಾರಿ, ಹರೀಶ್‌ ಜಿ. ಅಮೀನ್‌, ದಯಾನಂದ್‌ ಆರ್‌.ಪೂಜಾರಿ, ಮಹಿಳಾವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್‌, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಸುದೇವ್‌ ಆರ್‌. ಕೋಟ್ಯಾನ್‌ ಅವರ ಧರ್ಮಪತ್ನಿ ಮೋಹಿನಿ ವಿ.ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು.

ಪರಿಸರ ಪ್ರೇಮಿ ಡಾ| ರಾಧಾಕೃಷ್ಣ ಕೆ. ನಾಯರ್‌ ಅವರನ್ನು ಅಸೋಸಿಯೇಶನ್‌ ಪರವಾಗಿ ಗೌರವಿಸಲಾಯಿತು. ತೆಳಿಕೆದಬೊಳ್ಳಿ ದೇವದಾಸ್‌ ಕಾಪಿಕಾಡ್‌ ಅವರನ್ನು ಗಣ್ಯರು ಸೇರಿ ಫಲಪುಷ್ಪ ನೀಡಿ ಗೌರವಿಸಿದರು. ಅಸೋಸಿಯೇಶನಿನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಎಸ್‌. ಕೋಟ್ಯಾನ್‌ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಮಾನ್ಯ ಸಹಾಯಕ ಉಪಸಮಿತಿಯ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್‌ ಸ್ವಾಗತಿಸಿದರು. ಕಾರ್ಯದರ್ಶಿ ಸದಾಶಿವ ಕರ್ಕೇರ ವಂದಿಸಿದರು. ಉತ್ತಮಸಂದೇಶ ನೀಡಿದ ಪುಷ್ಪಕ್ಕನ ವಿಮಾನ ನಾಟಕವು ಕಲಾಭಿಮಾನಿಗಳ ಮನಸೂರೆಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next