Advertisement

ಮಾಧ್ಯಮ ಮಿತ್ರರಿಗೆ ಪ್ರೋತ್ಸಾಹ ಧನ ನೀಡಲು ಆಗ್ರಹ

08:12 PM May 26, 2021 | Team Udayavani |

ಬೀದರ: ಕೋವಿಡ್‌ ಸಂದಿಗ್ಧ ಸ್ಥಿತಿಯಲ್ಲಿ ಮಾಧ್ಯಮ ಮಿತ್ರರಿಗೆ ತಲಾ 10 ಸಾವಿರ ರೂ. ಪೊÅàತ್ಸಾಹ ಧನ ಹಾಗೂ ಆಹಾರ ಸಾಮಗ್ರಿಯುಳ್ಳ ಕಿಟ್‌ ವಿತರಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಆಗ್ರಹಿಸಿದೆ.

Advertisement

ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಬಹುತೇಕ ಪತ್ರಕರ್ತರು ಬಡವರಾಗಿದ್ದು, ಕೋವಿಡ್‌ ಸಮಯದಲ್ಲಿ ಆದಾಯವಿಲ್ಲದೇ ಪರಿತಪಿಸುವಂತಾಗಿದೆ. ಅವರ ಜೀವನ ಮಟ್ಟ ಅತ್ಯಂತ ಶೋಚನಿಯ ಸ್ಥಿತಿಯಲ್ಲಿರುವ ಹಿನ್ನೆಲೆ ಎಲ್ಲ ತರಹದ ಪತ್ರಕರ್ತರು, ಛಾಯಾ ಗ್ರಾಹಕರು, ಪತ್ರಿಕಾ ಏಜೆಂಟರ್‌ ಗಳ ಕೈಹಿಡಿಯಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿದ್ದ ಮಾರುತಿರಾವ ತಾಂದಳೆ ಹಾಗೂ ಪತ್ರಕರ್ತ ಪಂಡರಿ ಎಲ್ಲನೋರ್‌ ಕೋವಿಡ್‌ನಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿ ಯಡಿ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಮಪುರ, ಕಾರ್ಯದರ್ಶಿಗಳಾದ ಶಿವಕುಮಾರ ಸ್ವಾಮಿ, ಸುನೀಲ ಕುಲಕರ್ಣಿ, ಕೋಶ್ಯಾಧ್ಯಕ್ಷ ಪ್ರಥÌರಾಜ್‌ ಎಸ್‌., ಕಾರ್ಯಕಾರಿ ಸದಸ್ಯ ಶಿವಕುಮಾರ ಸದಲಾಪುರೆ ಇದ್ದರು

 

Advertisement

Udayavani is now on Telegram. Click here to join our channel and stay updated with the latest news.

Next