ರಬಕವಿ-ಬನಹಟ್ಟಿ: ಸಹಕಾರಿ ಸಂಘಗಳು ಬಡವರಿಗೆ, ಸಣ್ಣ ಸಣ್ಣ ಉದ್ಯೋಗದಾರರಿಗೆ ಸಾಲವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ ಎಂದು ಸಹಕಾರಿ ಸಂಘಗಳ ಬೆಳಗಾವಿ ವಿಭಾಗೀಯ ಜಂಟಿ ನಿಬಂಧಕ ಜಿ.ಎಂ.ಪಾಟೀಲ ಹೇಳಿದರು.
ನಗರದಲ್ಲಿ ಆರಂಭಗೊಂಡ ಕೊಣ್ಣೂರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಸಹಕಾರ ಮುಖ್ಯವಾಗಿದೆ. ಕುಟುಂಬಗಳ ನಿರ್ವಹಣೆ ಸಹಕಾರದಿಂದಲೇ ಸಾಧ್ಯ. ರಾಜ್ಯದ ಶೇ. 98 ಸಹಕಾರಿ ಸಂಘಗಳು ಪ್ರಾಮಾಣಿಕವಾಗಿ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಸಂಘಗಳ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಗುರಿ ಸ್ಥಿರವಾಗಿರಬೇಕು. ಗುರಿಗಳ ಬದಲಾವಣೆಯಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.
ಮುಧೋಳದ ಅರಳಿಕಟ್ಟಿ ಫೌಂಢೇಶನ್ ಸಂಸ್ಥಾಪಕ ಟಿ.ವಿ.ಅರಳಿಕಟ್ಟಿ ಮಾತನಾಡಿ, ಠೇವಣಿಗಳಿಗೆ ಸುರಕ್ಷತೆ ನೀಡುವುದರ ಜತೆಗೆ ಸಾಲ ನೀಡುವ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಮಾರಂಭದಲ್ಲಿ ನಿರಾಣಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಸುರೇಶ ಚಿಂಡಕ, ಡಾ| ಎಸ್. ಎಸ್.ಹೂಲಿ, ಡಾ| ಪದ್ಮಜೀತ ನಾಡಗೌಡ ಪಾಟೀಲ, ಸಿದ್ದು ಕೊಣ್ಣೂರ, ಮಲ್ಲಿಕಾರ್ಜುನ ಬಾಣಕಾರ ಮಾತನಾಡಿದರು. ಕಲ್ಲಪ್ಪ ಓಬಣ್ಣಗೋಳ, ಅರ್.ಎಂ.ಕೋಮಾರ, ಧರೆಪ್ಪ ಸಾಂಗ್ಲಿಕರ್, ಮುತ್ತಪ್ಪ ಕೋಮಾರ, ಸಂಜಯ ತೆಗ್ಗಿ, ಶಂಕರ ಬಟಕುರ್ಕಿ, ಗೋಪಾಲ ಭಟ್ಟಡ, ಬಸವರಾಜ ದಲಾಲ, ಧರೆಪ್ಪ ಉಳ್ಳಾಗಡ್ಡಿ, ಪರಪ್ಪ ಬಿಳ್ಳೂರ, ವಿಜಯ ಹೂಗಾರ, ವೆಂಕಟೇಶ ನಿಂಗಸಾನಿ, ಪ್ರಕಾಶ ಹೋಳಗಿ, ಎನ್.ಎಸ್.ದೇವರವರ, ಎಸ್.ಎಂ.ಜತ್ತಿ, ಡಾ.ಸೋನವಾಲಕರ್, ಶಂಕರ ಜಾಲಿಗಿಡದ, ರಾಜಶೇಖರ ಮಾಲಾಪುರ, ಪ್ರಕಾಶ ಮಂಡಿ, ಧರೆಪ್ಪ ವಾಲಿ, ವಿಜಯ ಕಟಗಿ, ವಿಜಯ ಪೂಜಾರಿ ಇದ್ದರು.