Advertisement

ಸಮಾಜಮುಖೀ ಚಿಂತಕರನ್ನು ಪ್ರೋತ್ಸಾಹಿಸಿ

12:53 PM Jan 24, 2022 | Team Udayavani |

ಆಳಂದ: ವಿವಿಧ ಕ್ಷೇತ್ರದ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಪ್ರತಿಭಾವಂತರು ನಮ್ಮ ಭಾಗದಲ್ಲಿದ್ದು, ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಸಾಧನೆ, ಕೊಡುಗೆಯನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ದೊಡ್ಡದು ಎಂದು ಲೇಖಕ, ಸಾಹಿತಿ ಬಿ.ಎಚ್‌. ನಿರಗುಡಿ ಹೇಳಿದರು.

Advertisement

ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ವಿವಿಧ ಮಹನೀಯರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಶಿಕ್ಷಣ ತಜ್ಞರು, ಅನುಭಾವಿಗಳ ಸಲಹೆ, ಸಹಕಾರ ನಮ್ಮ ಸಂಘಕ್ಕೆ ಅವಶ್ಯಕವಿದೆ. ಇಂತಹ ಮಹನೀಯರು ಮತ್ತು ತಾಲೂಕಿನ ಎಲ್ಲ ಶಿಕ್ಷಕರ ಸಹಕಾರದಿಂದ ರಾಜ್ಯದಲ್ಲಿಯೇ ಮಾದರಿ ಸಂಘ ಮಾಡಬೇಕು ಎಂಬುದು ನಮ್ಮ ಗುರಿಯಗಿದೆ ಎಂದರು.

ಲಕ್ಷ್ಮೀಕಾಂತ ಮೇತ್ರೆ, ಕಲ್ಲಪ್ಪ ಹತಗುಂದಿ, ಅಂಬಣ್ಣ ಜಮಾದಾರ ಅವರನ್ನು ಸತ್ಕರಿಸಲಾಯಿತು. ಪ್ರಮುಖರಾದ ಎಚ್‌.ಬಿ.ಪಾಟೀಲ್, ರಾಜಕುಮಾರ ಬಟಗೇರಿ, ಅಣ್ಣಾರಾಯ ಎಚ್‌.ಮಂಗಾಣೆ, ಶಿವಶರಣ ಉದನೂರ, ಸಿದ್ಧರಾಮ ಬೇತಾಳೆ, ವಿಕ್ರಮ ಗಂಗಾಣೆ, ವೀರೇಶ ಬೋಳಶೆಟ್ಟಿ ನರೋಣಾ, ರಾಜಶೇಖರ ಮೇಟೆಗಾರ, ಅಶೋಕ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next