ಗೋಕಾಕ: ದೈಹಿಕವಾಗಿ ಸದೃಢವಾಗಿ ಉಳಿಯಲು ವ್ಯಾಯಾಮ ಮುಖ್ಯವಾಗಿದ್ದು, ಪ್ರಾಚೀನ ಕಾಲದ ವೈಭವ ಮತ್ತೆ ಮರುಕಳಿಸಲು ಕುಸ್ತಿಯಂತಹ ಆಟಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ರಾಜ ಮಹಾರಾಜರ ಕಾಲದಲ್ಲಿಕುಸ್ತಿಗೆ ಭಾರೀ ಮಹತ್ವವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆಗಳಲ್ಲಿ ಮಾತ್ರ ನಾವು ಕುಸ್ತಿ ಆಟವನ್ನು ನೋಡುವಂತಾಗಿದೆ ಎಂದು ಹೇಳಿದರು.
ಗ್ರಾಮೀಣ ಕ್ರೀಡೆಗಳನ್ನು ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು.ಭಾರತೀಯ ಇತಿಹಾಸ ಮತ್ತು ಸಂಸ್ಕೃತಿವೈಭವೀಕರಿಸಲು ಕುಸ್ತಿ, ಕಬಡ್ಡಿಯಂತಹದೇಶಿ ಆಟಗಳನ್ನು ಪೊÅàತ್ಸಾಹಿಸಬೇಕಾಗಿದೆ.ಈ ನಿಟ್ಟಿನಲ್ಲಿ ಹಡಗಿನಾಳ ಗ್ರಾಮದಲ್ಲಿ ಗರಡಿ ಮನೆ ನಿರ್ಮಿಸಲು 15 ಲಕ್ಷ ರೂ.ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಕೊರೋನಾ ನಿರ್ಲಕ್ಷಿಸಬೇಡಿ: ಅನ್‌ಲಾಕ್ ನಂತರ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಪಾಲಿಸುತ್ತಿಲ್ಲ. ಕೊರೊನಾ ನಿಯಮಗಳನ್ನುಕಟ್ಟುನಿಟ್ಟಾಗಿ ಪಾಲಿಸಬೇಕು. ಈಗಾಗಲೇಕೊರೊನಾ ಬಗ್ಗೆ ಎಲ್ಲೆಡೆ ಜಾಗೃತಿಮೂಡಿಸಲಾಗುತ್ತಿದ್ದು, ಕೋವಿಡ್ ಲಸಿಕೆಹಾಕಿಸಿಕೊಳ್ಳಬೇಕು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು.
ಗುದ್ದಲಿಪೂಜೆ: ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 15 ಲಕ್ಷ ರೂ. ವೆಚ್ಚದ ಗರಡಿ ಮನೆ ನಿರ್ಮಾಣ,ಮುತ್ತೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮತ್ತು ಮೋಟ್ ಬಸಪ್ಪ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಿದರು.
ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರಸಣ್ಣಕ್ಕಿ, ಉದಗಟ್ಟಿ ಗ್ರಾಪಂ ಅಧ್ಯಕ್ಷಪಾಂಡುರಂಗ ದೊಡಮನಿ, ತಾಪಂ ಮಾಜಿಸದಸ್ಯ ನಾಗಪ್ಪ ಮಂಗಿ, ಮುಖಂಡರಾದಮುತ್ತೇನಗೌಡ ಪಾಟೀಲ, ಮುದಕಪ್ಪತಳವಾರ, ಬಾಳಪ್ಪ ಕಲ್ಲೋಳಿ, ಮುತ್ತೆಪ್ಪ ಆಡಿನ,ಬಸಪ್ಪ ಶೀಗಿಹಳ್ಳಿ, ಯಲ್ಲಪ್ಪಸ್ವಾಮಿ ವಡೇರ,ರಾಮಚಂದ್ರ ಪತ್ತಾರ, ಕಾಮಪ್ಪ ಚಿಗಡೊಳ್ಳಿ ಮುಂತಾದವರು ಉಪಸ್ಥಿತರಿದ್ದರು