Advertisement

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ: ಚೌಧರಿ

01:06 PM Aug 27, 2017 | |

ಸಿಂದಗಿ: ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವುದು ವಿಷಾದಕರ ಸಂಗತಿ. ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಅವುಗಳ ಅಸ್ತಿತ್ವ ಉಳಿಸಬೇಕು ಎಂದು ಕಸಾಪ ತಾಲೂಕಾಧ್ಯಕ್ಷ ಎಸ್‌.ಬಿ. ಚೌಧರಿ ಹೇಳಿದರು. ಪಟ್ಟಣದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ವಿಜಯಪುರ ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಗ್ರಾಮೀಣ ದಸರಾ ಹಾಗೂ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆತ್ಮಬಲ, ನಾಯಕತ್ವ, ಗುರಿ ಸಾಧಿಸುವ ಛಲ ನಮ್ಮಲ್ಲಿ ಬೆಳೆಯತ್ತದೆ. ಆದ್ದರಿಂದ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು. ಪ್ರತಿಯೊಬ್ಬ ಆಟಗಾರರು ಕ್ರೀಡಾ ನಿರ್ಣಾಯಕರ ನಿರ್ಣಯಕ್ಕೆ ತಲೆಬಾಗಬೇಕು ಎಂದರು. ಬಿಜೆಪಿ ತಾಲೂಕಾಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ, ಕ್ರೀಡೆಯಲ್ಲಿ ಸೊಲು-ಗೆಲುವು ಮಹತ್ವದಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ಮನಸ್ಸಿಗೆ ನೆಮ್ಮದಿ ಸಿಗುವುದು ಎಂದರು. ತಾಲೂಕಿನ ಕ್ರೀಡಾಧಿಕಾರಿ ಈಶ್ವರಕುಮಾರ
ಲಕ್ಕೊಂಡ ಮಾತನಾಡಿ, ಗ್ರಾಮೀಣ ಯುವಕ-ಯವತಿಯರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಿಸಲು ದಸರಾ ಹಾಗೂ ಮಹಿಳಾ ಕ್ರೀಡಾಕೂಟ ಸೂಕ್ತ ವೇದಿಕೆ ಮಾಡಲಾಗಿದೆ. ಕ್ರೀಡಾಕೂಟದ ಪ್ರಯೋಜನವನ್ನು ತಾಲೂಕಿನ ಗ್ರಾಮೀಣ ಕ್ರೀಡಾಪಟುಗಳು ಸದುಪಯೋಗ ಮಾಡಿಕೊಂಡಿದ್ದಾರೆ. ಕ್ರೀಡಾಕೂಟವು ತಾಲೂಕು, ಜಿಲ್ಲೆ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಕ್ರೀಡಾಕೂಟ ಆಯಯೋಜಿಸಲಾಗುವುದು. ಪ್ರತಿ ಹಂತದಲ್ಲಿ ವಿಜೇತ ಕ್ರೀಡಾಪಟುಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿ ಅಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು. ಎಪಿಎಂಸಿ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ, ತಾಪಂ ಸದಸ್ಯ ಎಂ.ಎನ್‌.ಕಿರಣರಾಜ, ಪತ್ರಕರ್ತ ಪಂಡಿತ ಯಂಪುರೆ, ಮಕ್ಕಳ ಕಲ್ಯಾಣ ಪ್ರತಿಷ್ಠಾನ ಅಧ್ಯಕ್ಷ ರಮೇಶ ಪೂಜಾರ, ಮಲ್ಲು ಪೂಜಾರಿ ವೇದಿಕೆಯಲ್ಲಿದ್ದರು. ಈ ವೇಳೆ ಇತ್ತೀಚೆಗೆ
ವಿಜಯಪುರದಲ್ಲಿ ಜರುಗಿದ ಮ್ಯಾರಥಾನ್‌ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಸಿಂದಗಿಯ ಯುವಕ ಮಲ್ಲಿಕಾರ್ಜುನ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕರಾದ ಎಂ.ಎಂ.ಆಳಂದ, ಎಂ.ಕೆ.ಬಿರಾದಾರ, ಎಸ್‌.ಜಿ.ಕುಲಕರ್ಣಿ, ಎಂ.ಬಿ.ಹೊಸೂರ, ಎನ್‌.ಎ.ಹಾವಿನಾಳ, ಎಸ್‌.ಎಸ್‌.ಮುರಾಳ, ಪಿ.ಆರ್‌.ಬಿರಾದಾರ, ಮಂಜುನಾಥ ಕುಂಬಾರ, ಸುಭಾಷ್‌ ಪಾಟೀಲ, ಎಂ.ಕೆ.ಬಿರಾದಾರ, ಸಿ.ಜಿ.ಜಹಾಗೀರದಾರ ಅವರು ನಿರ್ಣಯಕರಾಗಿ ಕಾರ್ಯ ನಿರ್ವಹಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ಯರಗಲ್‌ ಬಿ.ಕೆ, ಮೋರಟಗಿ, ಬಳಗಾನೂರ, ಚಿಕ್ಕಸಿಂದಗಿ, ರಾಂಪುರ ಪಿ.ಎ. ಗಣಿಹಾರ, ಚಾಂದಕವಠೆ, ಆಲಮೇಲ, ದೇವರಹಿಪ್ಪರಗಿ, ಮಲಘಾಣ ಸೇರಿದಂತೆ ವಿವಿಧ ಗ್ರಾಮಳಿಂದ ಆಗಮಿಸಿದ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next