ಬಸವನಬಾಗೇವಾಡಿ: ಭಜನೆ, ಡೊಳ್ಳು ಕುಣಿತ, ಚೌಡಕಿ ಪದ, ಹಂತಿಪದ ಸೇರಿದಂತೆ ಎಲ್ಲ ಜಾನಪದ ಕಲೆಗಳು ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ ಅವುಗಳು ಇಂದಿಗೂ ಜೀವಂತವಾಗಿವೆ ಎಂದು ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಗ್ರಾಮದ ಸೋಮೇಶ್ವರ ಭಜನಾ ಮಂಟಪದಲ್ಲಿ ಕನ್ನಡ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿದ್ದಾಗ ಮಾತ್ರ ಜಾನಪದ ಸಾಹಿತ್ಯ ಶ್ರೀಮಂತವಾಗುವುದು ಎಂದು ಹೇಳಿದರು.
ಸಾಹಿತಿ ಫ.ಗು. ಸಿದ್ದಾಪುರ ಮಾತನಾಡಿ, ಜನರು ತಮ್ಮ ದಣಿವು ಆರಿಸಿಕೊಳ್ಳಲು ಆನಂದ, ಸಂತೋಷಕ್ಕಾಗಿ ಜನರ ಹೃದಯಾಂತರಾಳದಿಂದ ಹುಟ್ಟಿಕೊಂಡ ಸಾಹಿತ್ಯವೇ ಜಾನಪದ ಸಾಹಿತ್ಯಎಂದರು.
ಕನ್ನಡ ಜಾನಪದ ಪರಿಷತ್ ವಲಯ ಘಟಕದ ಅಧ್ಯಕ್ಷ ಸಿದ್ರಾಮ ಬಿರಾದಾರ ಮಾತನಾಡಿ, ಜಾನಪದ ಕಲೆ ಉಳಿಸಿ ಬೆಳೆಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಸಂಗನಬಸವ ಶ್ರೀಗಳು, ಎಪಿಎಂಸಿ ನಿರ್ದೇಶಕ ವಿಶ್ವನಾಥಗೌಡ ಪಾಟೀಲ, ಭೀಮಗೊಂಡ ಹತ್ತರಕಿ, ಸಾಹಿತಿ ಶಂಕರ ಬೈಚಬಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ| ಸಿದ್ದಣ್ಣ ಉತ್ನಾಳ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಜಂಟಿ ಕಾರ್ಯದರ್ಶಿ ಈರಣ್ಣ ಹೊಸಟ್ಟಿ, ಕೊಲ್ಹಾರ ಕಸಾಪ ಅಧ್ಯಕ್ಷ ಅಶೋಕ ಆಸಂಗಿ, ಎಸ್.ಡಿ. ಕೃಷ್ಣಮೂರ್ತಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶ ಸಾಲಳ್ಳಿ, ರವೀಂದ್ರ ಉಗಾರ, ಸಿ.ಟಿ. ಮಾದರ, ದೇವೇಂದ್ರ ಗೋನಾಳ, ಎನ್.ಎಸ್. ಹೂಗಾರ, ಉದಯ ಕೊಟ್ಯಾಳ, ಎಸ್.ಎಂ. ದಳವಾಯಿ, ಗೊಳಪ್ಪ ಯರನಾಳ, ದಯಾನಂದ ಹಿರೇಮಠ, ಜಿ.ಎಂ. ಹಳ್ಳೂರ, ಸಿ.ಜಿ. ಹಿರೇಮಠ, ಮುತ್ತು ಹಾವಣ್ಣ, ಆನಂದ ನಲವಡೆ, ರಮೇಶ ವಡ್ಡೊಡಗಿ, ಸಂತೋಷ ಹಚಡದ, ಐ.ಬಿ. ಬಿರಾದಾರ ಸೇರಿದಂತೆ ಅನೇರಕು ಇದ್ದರು.