Advertisement

ಪರಿಸರ ಸಂರಕ್ಷಣೆ ಮಾಡುವವರಿಗೆ ಪ್ರೋತ್ಸಾಹ ನೀಡಿರಿ; ಭಾರತಿ

05:46 PM Jun 06, 2022 | Team Udayavani |

ಚಾಮರಾಜನಗರ: ಪರಿಸರ ರಕ್ಷಣೆ, ನಮ್ಮ ದೇಶದ ರಕ್ಷಣೆ, ಪರಿಸರ ನಾಶ ಜೀವ ಕುಲ ನಾಶ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ, ಜಿಪಂ, ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಕೆಡಿಪಿ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಕೆಲಸ ಕೆಡಿಸಬೇಡಿ: ಪರಿಸವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜೋಡಿಸಬೇಕು, ಒಬ್ಬ ವ್ಯಕ್ತಿ ಸಸಿ ನೆಡುವುದರ ಮೂಲಕ ಪರಿಸರ ರಕ್ಷಣೆ ಮಾಡಿದರೆ, ಅವರ ಜೊತೆಗೆ ಸುತ್ತಮುತ್ತ  ಲಿನವರು ಜೊತೆಗೂಡಿ ಅವರಿಗೆ ಉತ್ತೇಜನ ನೀಡಬೇಕು. ಅವರು ಮಾಡಿರುವ ಉತ್ತಮ ಕೆಲಸ ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.

ವರ್ಷ ಪೂರ್ತಿ ಪರಿಸರ ರಕ್ಷಿಸಿ: ಸುಂದರವಾದ ಪರಿಸರ ಮನುಷ್ಯನ ಆರೋಗ್ಯವನ್ನು ಚೆನ್ನಾಗಿ ಡುತ್ತದೆ. ಶಾಲಾ ಮಕ್ಕಳಿಂದ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ. ಆ ಮಗು ಉತ್ತಮ ವ್ಯಕ್ತಿಯಾಗಿ ಪರಿಸರ ಬೆಳೆಸುವ ಕೆಲಸ ಮಾಡುತ್ತಾನೆ. ಪರಿಸರ ದಿನಾಚರಣೆ ದಿನ ಮಾತ್ರವಲ್ಲ, ವರ್ಷ ಪೂರ್ತಿ ಪರಿಸರ ರಕ್ಷಣೆ ಮಾಡಬೇಕು ಎಂದು ಹೇಳಿದರು.

ವಿದ್ಯಾವಂತರಿಂದಲೇ ಪರಿಸರ ನಾಶ:
ದೀನಬಂಧು ಸಂಸ್ಥೆಯ ಸಂಸ್ಥಾಪಕ ಜಿ.ಎಸ್‌. ಜಯದೇವ ಮಾತನಾಡಿ, ಅನಕ್ಷರತೆ ಇರುವ ವ್ಯಕ್ತಿಗಿಂತ ವಿದ್ಯಾವಂತ ಮನುಷ್ಯನಿಂದ ಪರಿಸರ ನಾಶವಾಗುತ್ತಿದೆ. ಕಾರ್ಖಾನೆಗಳು ಉಗುಳುವ ಕೆಟ್ಟ ಅನಿಲಗಳು ಪರಿಸರವನ್ನು ಕೆಟ್ಟ ರೀತಿಗೆ ತರುತ್ತದೆ. ಒಂದು ಗಿಡವನ್ನು ನೆಡುವುದರಿಂದ ಉತ್ತಮಗಾಳಿ ನೀಡುತ್ತದೆ. ಎಷ್ಟೋ ದೇಶಗಳು ಪರಿಸರದಿಂದ ನಾಶವಾಗಿದೆ ಎಂದು ವಿವರಿಸಿದರು.

Advertisement

ಮತದಾನ ಮಾಡಿ, ಪರಿಸರವೂ ಉಳಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಅದರ ಜೊತೆಗೆ ಮರಗಳನ್ನು ಉಳಿಸಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಸರದ ಬಗ್ಗೆ ನಡೆದಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಹೊನ್ನಸ್ವಾಮಿ, ಸಾಮಾಜಿಕ ಅರಣ್ಯ ಯೋಜನೆ ಡಿ.ಸಿ.ಎಫ್ ರಾಜು, ಅಪರ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎನ್‌.ಮಂಜುನಾಥ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌, ನಗರಸಭೆ ಪೌರಾಯುಕ್ತ ಕರಿಬಸವಯ್ಯ, ಶಾಲಾ ಮಕ್ಕಳು, ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ಮೊದಲಿಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next