Advertisement

‘ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು’

11:48 AM Jun 02, 2019 | Sriram |

ಕಟೀಲು: ನಾವು ಕಲಿತ ಶಾಲೆಯ ಮೇಲೆ ಅಭಿಮಾನ ಹಾಗೂ ಗೌರವ ಇಟ್ಟು ಕೊಂಡು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.


Advertisement

ಕಟೀಲು ನ್ಪೋರ್ಟ್ಸ್ ಮತ್ತು ಗೇಮ್ಸ್‌ ಕ್ಲಬ್‌ ವತಿಯಿಂದ ಕಟೀಲು ದೇವಳದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 23 ನೇ ವರ್ಷದ ಪುಸ್ತಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನೇಕ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ದಾನಿಗಳಾದ ಅಶೋಕ್‌ ಕೊಂಡೇಲ ಮಾತನಾಡಿ ಅನೇಕ ಮಕ್ಕಳು ಶಿಕ್ಷಣದ ಖರ್ಚು ವೆಚ್ಚ ಹೊಂದಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ ಅಂತಹ ಮಕ್ಕಳಿಗೆ ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತೇವೆ ಎಂದರು. ದಾನಿಗಳಾದ ಸುರೇಶ್‌ ಆಚಾರ್ಯ ಎಕ್ಕಾರು ಮಾತನಾಡಿ ಮಕ್ಕಳು ನಮ್ಮ ದೇಶದ ಮುಂದಿನ ಪ್ರಜೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಎಂದರು.

ಪುಸ್ತಕ ವಿತರಣೆ
ಕಾರ್ಯಕ್ರಮದಲ್ಲಿ 1 ನೇ ತರಗತಿಯಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

Advertisement

ಈ ಸಂದರ್ಭ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ, ಕಟೀಲು, ನ್ಪೋರ್ಟ್ಸ್ ಮತ್ತು ಗೇಮ್ಸ್‌ ಕ್ಲಬ್‌ ನ ವೆಂಕಟರಮಣ ಮಯ್ಯ, ಕಿಶೋರ್‌ ಎಕ್ಕಾರು, ಚಂದ್ರಹಾಸ್‌ ಕಟೀಲು, ಹರೀಶ್‌, ಅಜಯ್‌, ಪ್ರಸಾದ್‌, ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.

ಕ್ಲಬ್‌ ನ ಅಧ್ಯಕ್ಷ ಕೇಶವ ಕಟೀಲು ಸ್ವಾಗತಿಸಿ, ಕಿರಣ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next