Advertisement

ನನ್ನನ್ನು ಕೊಲ್ಲಲು ಎನ್‌ಕೌಂಟರ್‌ ಸಂಚು: ಪ್ರವೀಣ್ ತೊಗಾಡಿಯಾ

12:39 PM Jan 16, 2018 | Team Udayavani |

ಜೈಪುರ : ಹತ್ತು ವರ್ಷಗಳಷ್ಟು ಹಳೆಯ ಕೇಸೊಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಹೊಂದಿದ್ದಾರೆ ಎಂಬ ಬಗ್ಗೆ ಸುಳಿವು ಪಡೆದ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ ಎಂದು ವಿಶ್ವ ಹಿಂದು ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಪ್ರವೀಣ್‌ ತೊಗಾಡಿಯಾ ಅವರು ದೃಶ್ಯ ಮಾಧ್ಯಮದ ಮುಂದೆ ಕಣ್ಣೀರು ಸುರಿಸಿ ತಾವೆದುರಿಸುತ್ತಿರುವ ದಾರುಣ ಪರಿಸ್ಥಿತಿಯನ್ನು ವಿವರಿಸಿದರು. 

Advertisement

ಪ್ರವೀಣ್‌ ತೊಗಾಡಿಯಾಅವರು ನಿನ್ನೆ ಸೋಮವಾರ ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ  ಪತ್ತೆಯಾಗಿದ್ದರು. ಇಂದು ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿ ತಾವು ನಾಪತ್ತೆಯಾಗಬೇಕಾಗಿ ಬಂದ ಅನಿವಾರ್ಯ ಸ್ಥಿತಿಯನ್ನು ವಿವರಿಸಿದರು.

“ನನ್ನ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸುವ ಹುನ್ನಾರದ ಭಾಗವಾಗಿ ನನ್ನನ್ನು ರಾಜಸ್ಥಾನ್‌ ಪೊಲೀಸರು ಎನ್‌ಕೌಂಟರ್‌ ಮಾಡಿ ಮುಗಿಸಲಿದ್ದಾರೆ ಎಂದು ಯಾರೋ ಒಬ್ಬರು ನನಗೆ ತಿಳಿಸಿದರು; ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ನಾನು ನಾಪತ್ತೆಯಾಗಬೇಕಾಯಿತು” ಎಂದವರು ಹೇಳಿದರು. 

ನಾನು ಯಾವತ್ತೂ ರಾಮ ಮಂದಿರ, ಗೋ ಹತ್ಯಾ ನಿಷೇಧ ಕಾನೂನು, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಎನ್‌ಕೌಂಟರ್‌ ಮೂಲಕ ನನ್ನ ಧ್ವನಿಯನ್ನು ಅಡಗಿಸುವ ಯತ್ನ ನಡೆದಿದೆ’ ಎಂದು ತೊಗಾಡಿಯಾ ಹೇಳಿದರು.  

ವೈದ್ಯರ ಪ್ರಕಾರ ತೊಗಾಡಿಯಾ ಅವರ ಆರೋಗ್ಯ ಸುಧಾರಿಸಿದೆ; ಆದರೆ ತೊಗಾಡಿಯಾ ಅವರು ನನ್ನ ಆರೋಗ್ಯ ಪೂರ್ಣವಾಗಿ ಸುಧಾರಿಸುವ ತನಕ ನಾನು ಆಸ್ಪತ್ರೆಯಿಂದ ಹೋಗುವುದಿಲ್ಲ ಎಂದು ಹೇಳಿದರು. ತೊಗಾಡಿಯಾ ಅವರಿಗೆ ಝಡ್‌ ಪ್ಲಸ್‌ ಕೆಟಗರಿಯ ರಕ್ಷಣೆ ಇದೆ. 

Advertisement

ದಶಕದಷ್ಟು ಹಳೆಯ ಕೇಸಿಗೆ ಸಂಬಂಧಿಸಿ ರಾಜಸ್ಥಾನದ ಪೊಲೀಸರ ತಂಡ ನಗರದ ಪಾಲ್ಡಿ ಪ್ರದೇಶದಲ್ಲಿನ ವಿಶ್ವ ಹಿಂದು ಪ್ರಧಾನ ಕಾರ್ಯಾಲಯಕ್ಕೆ ತೊಗಾಡಿಯ ಅವರನ್ನು ಅರೆಸ್ಟ್‌ ಮಾಡಲು ನಿನ್ನೆ ಸೋಮವಾರ  ಬಂದಿದ್ದಾಗ ತೊಗಾಡಿಯಾ ವಿಎಚ್‌ಪಿ ಕಾರ್ಯಾಲಯದಿಂದ ಹೊರಬಿದ್ದು ನಾಪತ್ತೆಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next