Advertisement

ಎನ್ ಕೌಂಟರ್ ನಲ್ಲಿ ಉಗ್ರನ ಹೊಡೆದುರುಳಿಸಿದ ಸೇನೆ: ಭಾರಿ ಶಸ್ತ್ರಾಸ್ತ್ರ ವಶ

10:46 AM Oct 09, 2019 | keerthan |

ಶ್ರಿನಗರ: ಜಮ್ಮು ಕಾಶ್ಮೀರದ ಆವಂತೀಪೊರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಉಗ್ರನೋರ್ವನನ್ನು ಹೊಡೆದುರುಳಿಸಿವೆ. ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಕಾಶ್ಮೀರ ಜೋನ್ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದು, ಆವಂತಿಪೊರಾ ಪಟ್ಟಣದ ಹೊರವಲಯದಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು ಒಬ್ಬನನ್ನು ಕೊಲ್ಲಲಾಗಿದೆ. ಆತನ ಗುರುತು ಮತ್ತು ಆತನ ಹಿನ್ನಲೆಯನ್ನು ಪತ್ತೆ ಮಾಡಲಾಗುತ್ತಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next