Advertisement
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 11 ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ಇದಾಗಿದೆ. ಬಿಜಾಪುರ ಜಿಲ್ಲೆಯು ಬಸ್ತಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಎ. 19ರ ಮೊದಲ ಹಂತದಲ್ಲೇ ಇಲ್ಲಿ ಚುನಾವಣೆ ನಡೆಯಲಿದೆ.
Related Articles
Advertisement
ಬೇಸಗೆಯಲ್ಲೇ ಹೆಚ್ಚು ದಾಳಿ
ಗಮನಾರ್ಹ ಅಂಶವೆಂದರೆ ನಕ್ಸಲರು ಹೆಚ್ಚಾಗಿ ಕುಶಲ ಪ್ರತಿದಾಳಿ (ಟಿಸಿಒಸಿ)ಯನ್ನು ಪ್ರತೀ ಬಾರಿ ಬೇಸಗೆಯಲ್ಲಿ ಅಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಯಲ್ಲೇ ಕೈಗೊಳ್ಳುತ್ತಾರೆ. ಈ ಮೂಲಕ ತಮ್ಮ ಕಾರ್ಯಚಟುವಟಿಕೆಗಳಿಗೆ ವೇಗ ನೀಡುತ್ತಾರೆ. ಬಸ್ತಾರ್ ಪ್ರದೇಶದಲ್ಲಿ ಈವರೆಗೆ ಭದ್ರತಾಪಡೆಗಳ ಮೇಲೆ ಅತೀ ಹೆಚ್ಚಿನ ಸಂಖ್ಯೆಯ ದಾಳಿ ನಡೆದಿರುವುದು ಇದೇ ಅವಧಿಯಲ್ಲಿ.
ಬಸ್ತಾರ್: 3 ತಿಂಗಳಲ್ಲಿ 44 ನಕ್ಸಲರ ಹತ್ಯೆ
ಮಾ. 27ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 6 ಮಂದಿ ನಕ್ಸಲರು ಹತರಾಗಿದ್ದರು. ಮಂಗಳವಾರದ ಎನ್‌ಕೌಂಟರ್‌ನ ಸಾವು-ನೋವನ್ನೂ ಸೇರಿಸಿದರೆ ಪ್ರಸಕ್ತ ವರ್ಷ ಅಂದರೆ ಕೇವಲ 3 ತಿಂಗಳಲ್ಲಿ ಬಸ್ತಾರ್ ಪ್ರಾಂತ್ಯವೊಂದರಲ್ಲೇ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೀಡಾದ ನಕ್ಸಲರ ಸಂಖ್ಯೆ 44ಕ್ಕೇರಿದೆ.