ಶ್ರೀನಗರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಕಲಾಕೋಟೆ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ನಡೆದಿದೆ.
ಸೋಮವಾರ ಸಂಜೆ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯಿತು ಎಂದು ಅಡೈಕ್ರಿಗಳು ಹೇಳಿದ್ದಾರೆ.
ಜಮ್ಮು ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್, “ಭಯೋತ್ಪಾದಕರ ಮೇಲೆ ನಿಗಾ ಇಡಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಸ್ತುತ, ತೀವ್ರ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ಹೇಳಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ನೀಡಿದ ಬಳಿಕ ಸೋಮವಾರ ಮುಂಜಾನೆ ಕಲಕೋಟೆ ಪ್ರದೇಶದಲ್ಲಿನ ಬ್ರೋಹ್ ಮತ್ತು ಸೂಮ್ ಅರಣ್ಯ ವಲಯವನ್ನು ಸೇನೆಯು ಪೊಲೀಸರೊಂದಿಗೆ ಸುತ್ತುವರೆದಿದೆ ಎಂದು ಅವರು ಹೇಳಿದರು.
ಶೋಧ ಕಾರ್ಯಾಚರಣೆಯು ಸಂಜೆ ತಡವಾಗಿ ಎನ್‌ಕೌಂಟರ್‌ಗೆ ತಿರುಗಿತು, ಈ ಪ್ರದೇಶದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಕಾರ್ಡನ್ ಮುರಿಯುವ ಪ್ರಯತ್ನದಲ್ಲಿ ಪಡೆಗಳ ಮೇಲೆ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Daily Horoscope: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ, ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ