Advertisement

Kannur ಪೊಲೀಸರು- ನಕ್ಸಲರ ನಡುವೆ ಗುಂಡಿನ ಕಾಳಗ

11:57 PM Nov 13, 2023 | Team Udayavani |

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಉರುಪ್ಪುಂಕುಟ್ಟಿ ಕಾಡಿನಲ್ಲಿ ಸೋಮವಾರ ಕೇರಳ ಪೊಲೀಸ್‌ ಕಮಾಂಡೋ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.

Advertisement

ಕಣ್ಣೂರು ಜಿಲ್ಲೆಯ ಕರಿಕೊಟ್ಟಕರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಉರುಪ್ಪುಂಕುಟ್ಟಿ ಕಾಡಿನಲ್ಲಿ ಕೇರಳ ಪೊಲೀಸ್‌ನ ಎಲೈಟ್‌ ಥಂಡರ್‌ಬೋಲ್ಟ್ ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ ಕಮಾಂಡೊಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಮಾಂಡೊಗಳು ಗುಂಡಿನ ಮಳೆಗೆರೆದಿದ್ದಾರೆ. ಕೆಲವು ತಾಸು ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ.

ಸ್ಥಳದಿಂದ ಮೂರು ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿ ರಕ್ತದ ಕಲೆಗಳಿದ್ದು, ನಕ್ಸಲರು ಗಾಯಗೊಂಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ವಶಕ್ಕೆ
ಕಳೆದ ಬುಧವಾರ ಪೊಲೀಸರ ವಶ ವಾಗಿದ್ದ ನಕ್ಸಲರಾದ ಶೃಂಗೇರಿಯ ಶ್ರೀಮತಿ ಅಲಿಯಾಸ್‌ ಉಣ್ಣಿಮಾಯ ಹಾಗೂ ತಮಿಳುನಾಡಿನ ಚಂದ್ರು ಅವರನ್ನು ಸೋಮವಾರ ನಡೆದ ವಿಚಾರಣೆ ವೇಳೆ ಕಲ್ಪೆಟ್ಟಾದ ಜಿಲ್ಲಾ ಸೆಶನ್ಸ್‌ ನ್ಯಾಯಾಲಯವು ನ. 22ರ ವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next