Advertisement

ಎನ್‌ಕೌಂಟರ್‌: 6 ಉಗ್ರರ ಹತ್ಯೆ

09:04 AM May 18, 2019 | mahesh |

ಶ್ರೀನಗರ: ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಜೈಶ್‌- ಎ- ಮೊಹಮ್ಮದ್‌ ಸಂಘಟನೆಗೆ ಸೇರಿದ ಆರು ಉಗ್ರರನ್ನು ಸದೆ ಬಡಿಯಲಾಗಿದೆ.

Advertisement

ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಒಬ್ಬ ನಾಗರಿಕ ಕೂಡ ಮೃತಪಟ್ಟಿ ದ್ದಾರೆ. ಪುಲ್ವಾಮಾ ಜಿಲ್ಲೆಯ ಡೆಲಿಪೋರಾ ಪ್ರಾಂತ್ಯ ದಲ್ಲಿನ ಮನೆ ಯೊಂದ ರಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ತೆರಳಿದ್ದ ಭದ್ರತಾ ಪಡೆಗಳು, ಮನೆಯ ಸುತ್ತಲಿದ್ದ ಇತರ ಮನೆಗಳಿಂದ ನಿವಾಸಿಗಳನ್ನು ತೆರವುಗೊಳಿಸುತ್ತಿದ್ದರು.

ಸಂದೀಪ್‌ ಎಂಬ ಯೋಧ ಸಹ ಇದೇ ಕಾರ್ಯದಲ್ಲಿ ನಿರತರಾಗಿದ್ದಾಗ, ಉಗ್ರರು ಸಂದೀಪ್‌ ಮೇಲೆ ಗುಂಡಿನ ದಾಳಿ ನಡೆಸಿದರು. ಆಗ, ಸಂದೀಪ್‌ ಹಾಗೂ ಮನೆಯ ಸದಸ್ಯರೊಬ್ಬರಾದ ರಯೀಸ್‌ ದರ್‌ ಎಂಬವರಿಗೆ ಗುಂಡುತಾಗಿ ಇಬ್ಬರೂ ಮೃತಪಟ್ಟರು.

ತಕ್ಷಣವೇ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆ ದುರುಳಿಸಿತು. ಬಳಿಕ ಶೋಪಿಯಾನ್‌ನಲ್ಲೂ ಪ್ರತ್ಯೇಕ ಎನ್‌ಕೌಂಟರ್‌ ನಡೆದು 3 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next