ಬಾಗೇಪಲ್ಲಿ: ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ನಿವೇಶನ ಜಮೀನನ್ನೇ ಅಕ್ರಮ ಖಾತೆ ಮಾಡಿಸಿಕೊಂಡು ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ವಿವಾದ?: ತಾಲೂಕಿನ ಕಸಬಾ ಹೋಬಳಿಯ ತೀಮಾಕಲಹಳ್ಳಿ (ಎಸ್‌ಬಿಐ ರಸ್ತೆ- ತೀಮಾಕಲಹಳ್ಳಿ ಮಾರ್ಗ) ಗ್ರಾಮದ ಸರ್ವೇ ನಂ 408 ಸುಮಾರು 21 ಎಕರೆ ಗೋಮಾಳ ಜಮೀನು ಇದೆ. ಸರ್ವೇ ನಂ 408ರ ಜಮೀನಿನಲ್ಲಿ ಎಸ್‌ಬಿಎಂ ಮುಖ್ಯ ರಸ್ತೆಗೆ ಅಂಟಿಕೊಂಡಿ ರುವಂತೆ 10 ಗುಂಟೆ ಜಮೀನನ್ನು ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟು 2017ರ ಮೇ 3ರಂದು ಜಿಲ್ಲಾಧಿಕಾರಿಗಳು ಬಿಸಿಎಂ ಇಲಾಖೆಗೆ ಅಧಿಕೃತ ಆದೇಶ ಪತ್ರ ಹೊರಡಿಸಿರುತ್ತಾರೆ.
ಸದರಿ 10 ಗುಂಟೆ ಸರ್ಕಾರಿ ಜಮೀ ನನ್ನು ಗುರುತಿಸಿ ಕೊಡುವಂತೆ ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ 2018ರ ನವಂಬರ್ 27 ರಂದು ತಾಲೂಕು ತಹಶೀಲ್ದಾರ್ ಕಚೇರಿಗೆ ಪತ್ರ ಬರೆದಿದ್ದು, ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾಧಿ ಕಾರಿಗಳ ಕಚೇರಿಯಿಂದ ಮಂಜೂರಾಗಿ ರುವ ಜಮೀನನ್ನು ಗುರುತಿಸಿ ಅಳತೆ ಮಾಡಿ ನಾಲ್ಕು ಮೂಲೆಗಳಲ್ಲಿ ಗುರುತಿನ ಕಲ್ಲುಗಳನ್ನು ನೆಟ್ಟು ಕೊಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಸರ್ವೇ ಇಲಾಖೆ ಹದ್ದು ಬಸ್ತ್ ಮಾಡಿಕೊಟ್ಟಿರುವ ಜಮೀನಿ ನಲ್ಲಿದ್ದ ಗಿಡ ಗಂಟಿಗಳನ್ನು ಸ್ವಚ್ಛ ಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ದ್ದಾರೆ.
ಬಿಸಿಎಂ ಇಲಾಖೆಯ ವಸತಿ ನಿಲಯ ಕಟ್ಟಡ ನಿರ್ಮಾಣದ ಸದರಿ ಜಮೀನು ನಮಗೆ ಸೇರಿದ್ದು ಎಂದು ಆರೋಪಿಸಿ ಬಿಸಿಎಂ ಇಲಾಖೆ ಅಧಿಕಾರಿಗಳು ಸ್ವಚ್ಛ ಗೊಳಿಸಿರುವ ನಿವೇಶನ ಜಮೀನಿನೊಳಗೆ ಅತಿಕ್ರಮ ಪ್ರವೇಶ ಮಾಡಿದ ಸಾರ್ವ ಜನಿಕರೊಬ್ಬರು ಕಲ್ಲು ಕೂಡ ಅಳವಡಿಸಿ ತಂತಿ ಬೇಲಿ ಹಾಕಿಕೊಂಡಿದ್ದಾರೆ.
ತಹಶೀಲ್ದಾರ್‌ಗೆ ದೂರು: ಬಿಸಿಎಂ ಇಲಾಖೆ ಅಧಿಕಾರಿಗಳು ತಂತಿ ಬೇಲಿ ಹಾಕಿರುವ ವಿಚಾರವಾಗಿ ಒತ್ತುವರಿದಾರ ರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಒತ್ತುವರಿ ದಾರರು ಉತ್ತರಿಸಿ ಕಂದಾಯ ಇಲಾಖೆ ನೌಕರರು ಇಲ್ಲಿ ಲೇಔಟ್ ನಿರ್ಮಿಸಿ 82 ನಿವೇಶನಗಳನ್ನು ಮಾಡಿ ಮಾರಾಟ ಮಾಡಿದ್ದಾರೆ. ಅವರು ನಿರ್ಮಿಸಿರುವ ಲೇಔಟ್‌ನಲ್ಲಿ ಕಾನೂನು ಬದ್ದವಾಗಿಯೇ ನಾವು ನಿವೇಶನ ಖರೀದಿಸಿದ್ದೇ ಎಂದು ಉಪನೋಂದಣಾಧಿಕಾರಿಗಳ ಕಚೇರಿ ಯಲ್ಲಿ ರಿಜಿಸ್ಟ್ರಾರ್ ಆಗಿರುವ ದಾಖಲೆ ಪತ್ರಗಳನ್ನು ಬಿಸಿಎಂ ಇಲಾಖೆ ಅಧಿಕಾರಿ ಗಳಿಗೆ ತೋರಿಸಿದ್ದಾರೆ.
ಆದ್ದರಿಂದ ಸರ್ವೆ ನಂ 408 ರಲ್ಲಿರುವ 10 ಗಂಟೆ ಸರ್ಕಾರಿ ಜಮೀನು ವಿವಾಧಿತ ಸ್ಥಳವಾಗಿದ್ದು, ಜಿಲ್ಲಾಧಿಕಾರಿ ಮಂಜೂರು ಮಾಡಿರುವ ವಸತಿ ನಿಲಯ ಕಟ್ಟಡದ ಸ್ಥಳವನ್ನು ಗುರುತಿಸಿಕೊಡುವಂತೆ ಬಿಸಿಎಂ ಇಲಾಖೆ ಅಧಿಕಾರಿಗಳು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ.