Advertisement

ಒತ್ತುವರಿ: ಸ್ಮಶಾನಕ್ಕೆ ಶವ ಕೊಂಡೊಯ್ಯಲು ಅಡ್ಡಿ

03:02 PM Jul 12, 2018 | Team Udayavani |

ಹೊಸಕೋಟೆ: ಮಾಲೂರು ರಸ್ತೆ ಹಿಂದೂ ಸ್ಮಶಾನದ ಪ್ರದೇಶ ಅತಿಕ್ರಮಣ ಮಾಡಿಕೊಂಡಿರುವ ಕಾರಣ ಪ್ರವೇಶಿಸಲು ಅಡ್ಡಿಯಾಗುತ್ತಿದ್ದು ಶವಸಂಸ್ಕಾರ ನೆರವೇರಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಗಡಿ ಗುರುತಿಸಲಾಗಿತ್ತು: ವರದಾಪುರಕ್ಕೆ ಹೊಂದಿ ಕೊಂಡಂತಿರುವ ಸ್ಮಶಾನ, ನಗರಸಭೆ ವಾರ್ಡ್‌ 22ರ ವ್ಯಾಪ್ತಿಗೆ ಒಳಪಟ್ಟಿದ್ದು ಅಂದಾಜು 10 ಲಕ್ಷ ರೂ.ಗಳ ವೆಚ್ಚದಲ್ಲಿ ಮುಂಭಾಗ ದಲ್ಲಿ ಇತ್ತೀಚೆಗೆ ಕಾಂಪೌಂಡ್‌ ನಿರ್ಮಿಸಲಾಗಿದೆ. ಅಳವಡಿಸಿರುವ ಗೇಟಿನ ಹಿಂಭಾಗದಲ್ಲಿಯೇ ಅಕ್ರಮವಾಗಿ 2 ಪೆಟ್ಟಿಗೆ ಅಂಗಡಿ ಇಟ್ಟಿರುವ ಕಾರಣ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ. ಇನ್ನು ಶವವನ್ನು ಕೊಂಡೊಯ್ಯುವುದು ದುಸ್ತರವಾಗಿದೆ. ಸ್ಮಶಾನಕ್ಕೆ ಬರುವವರ ಸಂಕಷ್ಟ ಅರಿತ ಪಕ್ಕದ ಜಮೀನಿನ ಮಾಲಿಕರು ನಿರ್ಮಿಸಿರುವ ಕಾಂಪೌಂ ಡಿನ ಸ್ವಲ್ಪ ಭಾಗ ಒಡೆದು ಅವಕಾಶ ಮಾಡಿಕೊಟ್ಟಿದ್ದಾರೆ. 

ಸ್ಮಶಾನದ ಜಾಗ ಒತ್ತುವರಿ ಬಗ್ಗೆ 7-8 ವರ್ಷಗಳ ಹಿಂದೆ ನೀಡಿದ್ದ ದೂರಿನಿಂದಾಗಿ ಅಳತೆ ಮಾಡಿ ನಿರ್ದಿಷ್ಟ ಗಡಿ ಗುರುತಿಸಲಾಗಿತ್ತು. ಆದರೆ, ಈ ಗಡಿ 2-3 ವರ್ಷಗಳಿಂದಲೂ ಕಾಂಪೌಂಡ್‌ ನಿರ್ಮಾಣಕ್ಕೆ ಮೊದಲೇ 5 ಪೆಟ್ಟಿಗೆ ಅಂಗಡಿಗಳಿದ್ದು 3ನ್ನು ಮಾತ್ರ ತೆರವುಗೊಳಿಸಿದ ಅಧಿಕಾರಿಗಳು ಉಳಿದ ಎರಡನ್ನು ಹಾಗೆಯೇ ಬಿಟ್ಟಿದ್ದಾರೆ. 

ಸ್ಮಶಾನದ ಪ್ರವೇಶಕ್ಕೆ ಅಡ್ಡಿಯಾಗಿರುವ ಅಕ್ರಮ ಪೆಟ್ಟಿಗೆ ಅಂಗಡಿ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆಂದು ಸ್ಥಳೀಯರು ದೂರಿದ್ದಾರೆ. 

ಖಂಡನೀಯ : ಪಟ್ಟಣದ ಗಾಣಿಗರಪೇಟೆ ವೆಂಕಟಸ್ವಾಮಿ ಪ್ರತಿಕ್ರಿಯಿಸಿ, ಸರ್ಕಾರಿ ಸ್ವತ್ತು ರಕ್ಷಿಸುವ ಜವಾಬ್ದಾರಿ ಯುಳ್ಳ ಜನಪ್ರತಿನಿಧಿಗಳೇ ಪರೋಕ್ಷವಾಗಿ ಇಂತಹ ಅತಿಕ್ರಮಗಳಿಗೆ ಬೆಂಬಲಿಸುತ್ತಿರುವುದು ಖಂಡನೀ ಯ. ಅಧಿಕಾರಿಗಳು ತೆರವುಗೊಳಿಸಿ ಸ್ಮಶಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯ ವಾಗಲಿದೆ ಎಂದು ಎಚ್ಚರಿಸಿದ್ದಾರೆ. ಸ್ಮಶಾನ ಹಳೆ ಪಟ್ಟಣದ ಚಿಕ್ಕತಿಗಳರಪೇಟೆ, ಕಿಲಾರಿ ಪೇಟೆ, ಗಾಣಿಗರಪೇಟೆ, ಪಾರ್ವತಿಪುರದ ನಿವಾಸಿಗಳಿಗೆ ಬಹಳಷ್ಟು ವರ್ಷಗಳಿಂದ ಬಳಕೆಯಾಗುತ್ತಿದೆ. 4-5 ವರ್ಷಗಳ ಹಿಂದೆ ಅಳತೆ ಮಾಡಿ ಕಾಂಪೌಂಡ್‌ ನಿರ್ಮಿಸಿ ರಕ್ಷಿಸಲಾಗಿತ್ತು. ಕೊರೆದಿದ್ದ ಕೊಳವೆಬಾವಿ ವಿಫ‌ಲವಾಗಿರುವ ಕಾರಣ ಸ್ಮಶಾನಕ್ಕೆ ಬರುವವರಿಗೆ ನೀರಿನ ಸೌಲಭ್ಯ ಕಲ್ಪಿಸಲು ಆವರಣ ದಲ್ಲಿ ಟ್ಯಾಂಕ್‌ ಅಳವಡಿಸಲಾಗಿದೆ. ಆದರೆ ಇದೀಗ ಪ್ರಭಾವಶಾಲಿಗಳ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು, ಪೆಟ್ಟಿಗೆ ಅಂಗಡಿ ತೆರವುಗೊಳಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಸ್ಮಶಾನದಲ್ಲಿ ಗಿಡ ಬೆಳೆದಿದ್ದು ತ್ಯಾಜ್ಯ ಸುರಿಯುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. 

Advertisement

ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸ್ವೀಕರಿಸಿರುವ ಮನವಿ ಆಧರಿಸಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ಸ್ಥಳ ಪರಿಶೀಲನೆ ಮಾಡಲು ಸೂಚಿಸಲಾಗುವುದು. ಇವರ ವರದಿ ಆಧರಿಸಿ ಸ್ಮಶಾನದ ವ್ಯಾಪ್ತಿಗೆ ಒಳಪಡುವ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗುವುದು.
ನಾರಾಯಣವಿಠಲ್‌, ತಹಶೀಲ್ದಾರ್‌

ಪ್ರಭುದೇವ

Advertisement

Udayavani is now on Telegram. Click here to join our channel and stay updated with the latest news.

Next