Advertisement
ಗುರು ಪೂರ್ಣಿಮೆ ನಿಮಿತ್ತ ತದ್ದೇವಾಡಿ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂತರು ಸಾಗರ ಸಮಾನವಿದ್ದಂತೆ. ಸಂತರಲ್ಲಿ ನಾವು ಭಕ್ತಿಯನ್ನು ಹಾಗೂ ಸಂಸ್ಕೃತಿಯನ್ನುಕಾಣುತ್ತೇವೆ ಎಂದರು.
Related Articles
Advertisement
ನಮ್ಮ ಮಕ್ಕಳ ಜೀವನವನ್ನು ನಾವೇ ನಾಶ ಮಾಡುತ್ತಿದ್ದೇವೆ. ತಾಯಿಯೇ ಮೊದಲ ಗುರು ನಂತರ ಶಿಕ್ಷಕ. ಮಕ್ಕಳನ್ನು ಸ್ವತಂತ್ರವಾಗಿ ಬದುಕಲು ಬಿಡಬೇಕು. ಒಳ್ಳೆ ಬದುಕಲು ಮಾರ್ಗದರ್ಶನ ಮಾಡಿರಿ. ಬದುಕನ್ನು ಧೈರ್ಯದಿಂದಎದುರಿಸುವುದೇ ಭಾರತೀಯ ಸಂಸ್ಕೃತಿ. ಮಕ್ಕಳಿಗೆ ಇಂಗ್ಲಿಷ್ ಭಾಷೆಯಿಂದ ದೂರವಿಡಬೇಕು. ಇದರೊಂದಿಗೆ ಧೈರ್ಯದ ನೀತಿಯ ಪಾಠ ಬೋಧನೆಯಾಗಬೇಕು ಎಂದರು.
ನಮ್ಮ ಭಾರತೀಯ ಸಂಸ್ಕೃತಿ ಎಲ್ಲದರಲ್ಲಿಯೂ ಶ್ರೇಷ್ಠವಾಗಿದೆ. ಅದನ್ನು ಉಳಿಸಿಕೊಂಡು ಹೋಗಬೇಕು. ನಮ್ಮ ಸಂಸ್ಕೃತಿಯಲ್ಲಿ ಗೌರವ ಪ್ರೀತಿ ಪ್ರೇಮ ಬಾಂಧವ್ಯ ಕಾಣಬಹುದು ಎಂದು ಹೇಳಿದರು.
ಶಿವಾನಂದ ಭೈರಗೊಂಡ ಉದ್ಘಾಟಿಸಿದರು. ಶಂಕರಗೌಡ ಪಾಟೀಲ, ಶಿಕ್ಷಕ ಎಸ್.ಎಸ್. ಪಾಟೀಲ, ಚಿದಾನಂದ ಬಿರಾದಾರ, ಸಾಹೇಬಗೌಡ ಬಿರಾದಾರ ಜ್ಯೋತಿ ಬೆಳಗಿದರು. ವಂದೇ ಮಾತರಂ ಗೀತೆಯನ್ನು ರಾಜಶೇಖರ ಪಾಟೀಲ ಹಾಡಿದರು.
ಕಾರ್ಯಕ್ರಮ ಸಾನ್ನಿಧ್ಯವನ್ನು ಉಜ್ಜಯಿನಿ ಪೀಠದ ಜಗದ್ಗರು ಸಿದ್ದಲಿಂಗ ರಾಜದೇಶಿ ಕೇಂದ್ರ ಭಗವತ್ಪಾದರು ವಹಿಸಿದ್ದರು. ಮಂದೃಪ ಮಠದ ರೇಣುಕಾ ಶಿವಯೋಗಿ ಮಹಾಸ್ವಾಮಿಗಳು, ಅಭಿನವ ಮುರುಘೇಂದ್ರ ಶಿರಶ್ಯಾಡ, ರೇಣುಕ ದೇವರು, ರಾಜುಗೌಡ ಝಳಕಿ, ಚಂದ್ರಶೇಖರ ನಿರಾಳೆ, ಮಹಾದೇವ ಕರ್ಲಮಳ ಇದ್ದರು. ಮಹಾಂತೇಶ ನಿರೂಪಿಸಿದರು.