Advertisement

ಬರಲಿದೆ ಇಎಂವಿ ಆಧರಿತ ಡೆಬಿಟ್‌ ಕಾರ್ಡ್‌

03:45 AM Jul 03, 2017 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮಾಸ್ಟ್ರೋ ಡೆಬಿಟ್‌ ಕಾರ್ಡ್‌ ಹೊಂದಿದ್ದವರು ಗಮನಿಸಿ. ಹೆಚ್ಚಿನ ಸುರಕ್ಷತೆಗಾಗಿ ಇಎಂವಿ ಚಿಪ್‌ ಆಧಾರಿತ ಡೆಬಿಟ್‌ ಕಾರ್ಡ್‌ ಅನ್ನು ಮಾಸಾಂತ್ಯದ ಒಳಗಾಗಿ ಪಡೆದುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಹಾಲಿ ಇರುವ ಕಾರ್ಡ್‌ ನಿಷ್ಕ್ರಿಯಗೊಳ್ಳಲಿದೆ.

Advertisement

ಅದಕ್ಕಾಗಿ ಬ್ಯಾಂಕ್‌ ವತಿಯಿಂದ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಈ ಬಗ್ಗೆ ಬ್ಯಾಂಕ್‌ ಗ್ರಾಹಕರಿಗೆ ಈಗಾಗಲೇ ಸಂದೇಶ ಕಳುಹಿಸಿದೆ. 2015ರಲ್ಲಿ ಆರ್‌ಬಿಐ ನೀಡಿದ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಡೆಬಿಟ್‌ ಕಾರ್ಡ್‌ ಹೊಂದಿದ 5.65 ಕೋಟಿ ಮಂದಿ ಇದ್ದಾರೆ. 

ಹೀಗಾಗಿ, ಮುಂದಿನ ದಿನಗಳಲ್ಲಿ ಇತರ ಬ್ಯಾಂಕ್‌ಗಳೂ ಇದೇ ಮಾದರಿ ಅನುಸರಿಸುವ ಸಾಧ್ಯತೆಗಳಿವೆ. ಸದ್ಯ ದೇಶದಲ್ಲಿ ಬ್ಯಾಂಕ್‌ಗಳು ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಇರುವ ಕಾರ್ಡ್‌ ಗಳಿಗೆ ಸುರಕ್ಷಿತವಾಗಿರುವ ಇಎಂವಿ ಚಿಪ್‌ ಆಧಾರಿತ ಕಾರ್ಡ್‌ ಗಳನ್ನು 2018ರ ಡಿ. ಒಳಗಾಗಿ ಎಲ್ಲರೂ ಹೊಂದಬೇಕು. 2016ರ ಜ.1ರಿಂದ ಹೊಸತಾಗಿ ಡೆಬಿಟ್‌ ಕಾರ್ಡ್‌ ನೀಡುವವರಿಗೆ ಹೊಸ ಮಾದರಿಯದ್ದನ್ನೇ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next