Advertisement
ಹೌದು, ನಗರದ ಹೊರವಲಯದಲ್ಲಿರುವ ಜನವಸತಿ ಪ್ರದೇಶದಲ್ಲಿರುವ ಜನರು ನಿತ್ಯವೂ, ಅನುಭವಿಸುತ್ತಿರುವ ತೊಂದರೆ ಇದಾಗಿದೆ. ತ್ಯಾಜ್ಯ ಸುಟ್ಟ ಕೆಟ್ಟ ವಾಸನೆ, ಮನೆಗೆ ಬೇಡವಾಗಿರುವ ವಸ್ತುಗಳನ್ನು ತಂದು ಬಿಸಾಡುವ ಜಾಗ, ಗಿಡ ಗಂಟಿ ಬೆಳೆದು ವಿಷ ಜಂತುಗಳು ವಾಸಿಸುವ ತಾಣ. ಹೀಗೆ ನಗರದ ತುಂಬಾ ಇರುವ ಸಾವಿರಾರು ಖಾಸಗಿ ಖಾಲಿ ನಿವೇಶನದಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ಒಂದು ಎರಡಲ್ಲ. ಹತ್ತಾರು ಸಮಸ್ಯೆ ಜನರನ್ನು ನಿತ್ಯ ಕಾಡುತ್ತಲೇ ಇದೆ.
Related Articles
Advertisement
ನಗರದ ಸರಸ್ಪತಿ ಪುರಂ 2ನೇ ಹಂತದ ನೀಲಗಿರಿ ತೋಪಿನ ಪ್ರದೇಶ, ವಿದ್ಯಾನಿಕೇತನ ಶಾಲೆ ಸಮೀಪ, ಸಪ್ತಗಿರಿ ಬಡಾವಣೆ, ಜಯನಗರ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಶ್ರೀನಗರ,ಬಂಡೇಪಾಳ್ಯ, ಶಿರಾ ಗೇಟ್, ಅರಳಿಮರದ ಪಾಳ್ಯ, ಭೀಮಸಂದ್ರ, ಗಂಗಸಂದ್ರ,ರಾಜೀವ್ ಗಾಂಧಿನಗರ, ಕುರಿಪಾಳ್ಯ, ಸದಾಶಿವನಗರ, ಇಸ್ಮಾಯಲ್‌ನಗರ,ಮರಳೂರು ದಿಣ್ಣೆ, ಶೆಟ್ಟಿಹಳ್ಳಿ ಸೇರಿದಂತೆ ನಗರದ ಪ್ರಮುಖ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿಯಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
ನಗರದಲ್ಲಿ ಸಾವಿರಾರು ಖಾಲಿ ನಿವೇಶನಗಳಿವೆ.ಈ ನಿವೇಶನದಲ್ಲಿ ಗಿಡ ಗಂಟಿ ಬೆಳೆದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಯಾಗುತ್ತಿದೆ ಎನ್ನುವುದುಪಾಲಿಕೆ ಗಮನಕ್ಕೆ ಬಂದಿದೆ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ. ಮೈಸೂರುಮಾದರಿಯಂತೆ ಇಲ್ಲಿಯೂ ಕ್ರಮ ಕೈಗೊಳ್ಳುತ್ತೇವೆ. -ರೇಣುಕಾ, ಆಯುಕ್ತೆ, ಮಹಾನಗರ ಪಾಲಿಕೆ
35 ವಾರ್ಡ್‌ಗಳಲ್ಲಿಯೂ ಖಾಲಿ ನಿವೇಶನಗಳಿಂದ ಜನರಿಗೆತೊಂದರೆಯಾಗುತ್ತಿರು ವುದು ನನ್ನ ಗಮನದಲ್ಲಿದೆ. ಈ ಬಗ್ಗೆ ಚರ್ಚೆ ಆಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. – ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್
ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗಳಿಂದ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ನಿವೇಶನಗಳ ಮಾಲೀಕರಿಗೆ ಪಾಲಿಕೆಯಿಂದ ಜಾಗೃತಿ ಉಂಟು ಮಾಡಿ, ಸ್ವಚ್ಛತೆ ಕಾಪಾಡುವಂತೆ ಸೂಚಿಸಬೇಕು. ಪಾಲಿಕೆ ಪೌರ ಕಾರ್ಮಿಕರು ಖಾಲಿ ನಿವೇಶನ ಸ್ವತ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪಾಲಿಕೆಯಿಂದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ . –ಜೆ.ಕುಮಾರ್, ಪಾಲಿಕೆ ಸದಸ್ಯ
– ಚಿ.ನಿ.ಪುರುಷೋತ್ತಮ್