ಪಣಜಿ : ಕಾಶ್ಮೀರ ಪ್ರಶ್ನೆಯನ್ನು ಸುಲಭದಲ್ಲಿ ಬಗೆ ಹರಿಸಲಾಗದು; ಅದೊಂದು ಮಹಾ ಕಗ್ಗಂಟು. ಅದನ್ನು ದೀರ್ಘಾವಧಿಯ ಯೋಜನೆಯಿಂದ ಮಾತ್ರವೇ ಬಗೆ ಹರಿಸಲು ಸಾಧ್ಯ ಎಂದು ಗೋವೆಯ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ರಕ್ಷಣಾ ಮಂತ್ರಿಯಾಗಿ ದಿಲ್ಲಿಯಲ್ಲಿ ಇದ್ದಷ್ಟು ಕಾಲವೂ ತಾನು ಕಾಶ್ಮೀರ ಸಮಸ್ಯೆಯ ಮಹಾ ಒತ್ತಡಕ್ಕೆ ಗುರಿಯಾಗಿದ್ದೆ ಎಂದು ಪರ್ರೀಕರ್ ಹೇಳಿದರು.
ಪಾಕಿಸ್ಥಾನ ಒಂದು ಖಾಲಿ ಹಡಗು
ಪಾಕಿಸ್ಥಾನ ಒಂದು ಖಾಲಿ ಹಡಗು; ಹಾಗಾಗಿ ಅದು ಸದ್ದು ಮಾಡುತ್ತಲೇ ಇರುತ್ತದೆ. ಭಾರತದೊಂದಿಗೆ ಹೇಗಾದರೂ ಮಾಡಿ ತಾನು ಮಾತುಕತೆಯ ಪ್ರಕ್ರಿಯೆಯಲ್ಲಿ ಇರುವುದಕ್ಕೆ ಅದು ಏನನ್ನಾದರೂ ಮಾಡುತ್ತಲೇ ಇರುತ್ತದೆ ಎಂದು ಪರ್ರೀಕರ್ ಅವರು ಕೊಂಕಣಿ ಮತ್ತು ಹಿಂದಿ ಭಾಷೆಯಲ್ಲಿ ಬಹುವಾಗಿ ಚಾಲ್ತಿಯಲ್ಲಿರುವ “ಖಾಲಿ ಹಡಗು ಸದಾಸದ್ದು ಮಾಡುತ್ತಲೇ ಇರುತ್ತದೆ’ ಎಂಬ ಗಾದೆಯನ್ನು ಉಲ್ಲೇಖೀಸಿ ಹೇಳಿದರು.
ಪಾಕಿಸ್ಥಾನದ ಕುನೀತಿಗೆ ವ್ಯತಿರಿಕ್ತವಾಗಿ ಭಾರತ ಯಾವತ್ತೂ ನೆರೆಕರೆಯವರೊಂದಿಗೆ ಶಾಂತಿ ಸೌಹಾರ್ದವನ್ನು ಬಯಸುತ್ತದೆ. ತನ್ನೆಲ್ಲ ಷಡ್ಯಂತ್ರಗಳನ್ನು ಕಾಣದಂತೆ ಮಾಡಲು ಅದು ಭಾರತದೊಂದಿಗೆ ಸದಾ ಮಾತುಕತೆಯಲ್ಲಿರುವುದಕ್ಕೆ ಏನನ್ನಾದರೂ ಮಾಡುವ ಅತ್ಯಂತ ಅಪಾಯಕಾರಿ ಆಟದಲ್ಲಿ ತೊಡಗಿರುತ್ತದೆ. ಭಾರತ ಈ ಬಗ್ಗೆ ಜಾಗ್ರತೆ ವಹಿಸಬೇಕು’ ಎಂದು ಪರ್ರೀಕರ್ ಅವರು ಡಿಡಿ ನ್ಯೂಸ್‌ಗೆ ವಿಶೇಷ ಸಂದರ್ಶನದಲ್ಲಿ ಹೇಳಿದರು.
ಪಾಕ್ ಮಿಲಿಟರಿ ಕೋರ್ಟ್‌ನಿಂದ ಕುಲಭೂಷಣ್ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಬಗ್ಗೆ ಮಾತನಾಡಿದ ಪರ್ರೀಕರ್, ಈ ಬಗ್ಗೆ ಪಾಕಿಸ್ಥಾನಕ್ಕೆ ವಿದೇಶ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ನಾವು ಸುಮ್ಮನಿರುವುದಿಲ್ಲ; ಪಾಕಿಸ್ಥಾನಕ್ಕೆ ಉತ್ತರವಾಗಿ ಏನನ್ನು ಮಾಡಬೇಕೋ ಅದನ್ನು ದೇಶವೇ ಮಾಡುತ್ತದೆ. ಪಾಕಿಸ್ಥಾನ ಒಂದು ವೇಳೆ ದುಬೋìಧೆಯ ಪ್ರಕಾರ ಅನಪೇಕ್ಷಿತವಾದುದನ್ನು ಮಾಡಿದಲ್ಲಿ ಆಗ ನಾವು ಅದಕ್ಕೆ ತಕ್ಕುದಾದ ಪಾಠ ಕಲಿಸುತ್ತೇವೆ’ ಎಂದು ಪರ್ರೀಕರ್ ಹೇಳಿದರು.