Advertisement
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ತುಂಬ ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
Related Articles
Advertisement
ರೈತರಲ್ಲಿ ನಿರೀಕ್ಷೆ: ಲಕ್ಷಾಂತರ ರೈತರು ಡ್ಯಾಂ ನೀರನ್ನೇ ನೆಚ್ಚಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ 36 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಭತ್ತ ನಾಟಿಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಕಾಲುವೆಗೆ ನೀರು ಹರಿಸುವುದನ್ನೇ ಕಾಯುತ್ತಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಡ್ಯಾಂ ಭರ್ತಿಯಾಗಿ ನಮ್ಮ ಬದುಕು ಸಾಗಲಿ ಎಂದೆನ್ನುತ್ತಿದ್ದಾರೆ. ಕಳೆದ ವರ್ಷ ಡ್ಯಾಂ ಭರ್ತಿಯಾಗಿದ್ದರೂ ಎರಡನೇ ಬೆಳೆಗೆ ನೀರು ಸಂಪೂರ್ಣ ಲಭಿಸಲಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ನಿರ್ವಹಣೆಯಿಂದ ಹೀಗಾಗಿದೆ. ಈ ವರ್ಷವಾದರೂ ಎಚ್ಚರಿಕೆಯಿಂದ ನೀರು ನಿರ್ವಹಣೆ ಮಾಡಲಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ನೀರು ಹರಿಸಲು ಸೂಚನೆ: ಚಡ್ಯಾಂನಲ್ಲಿ 36 ಅಡಿ ನೀರು ಸಂಗ್ರಹವಾಗುತ್ತಿದ್ದಂತೆ ಈ ಭಾಗದ ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ, ಶಾಸಕ ಬಸವರಾಜ ದಢೇಸುಗೂರು ಸೇರಿ ಇತರೆ ಶಾಸಕರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿಎಂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಕಾಲುವೆಗಳಿಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಕಾಲುವೆಗೆ ಹಂತ ಹಂತವಾಗಿ ನೀರು ಹರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಏನೇ ಆಗಲಿ, ಎಲ್ಲ ಡ್ಯಾಂಗಳಂತೆ ತುಂಗಭದ್ರಾ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿ, ಡ್ಯಾಂ ಭರ್ತಿಯಾಗಲಿ. ಅನ್ನದಾತನ ಬಾಳು ಬೆಳಕಾಗಲಿ, ನೀರಾವರಿ ಅಧಿಕಾರಿಗಳು ಸರಿಯಾಗಿ ನೀರು ನಿರ್ವಹಣೆ ಮಾಡಲಿ ಎನ್ನುವ ಮಾತು ಅಚ್ಚುಕಟ್ಟು ಪ್ರದೇಶದ ರೈತಾಪಿ ವಲಯದಿಂದ ಕೇಳಿ ಬಂದಿದೆ.
ಐಸಿಸಿ ಇಲ್ಲದ ಕಾರಣ ಕಾಲುವೆಗೆ ನೀರು ಹರಿಸುವ ಕುರಿತಂತೆ ಕಾರ್ಯದರ್ಶಿಗಳಿಂದ ಅನುಮತಿ ಪಡೆಯುತ್ತಿದ್ದೇವೆ. ನಾನು ಬೆಂಗಳೂರಿನಲ್ಲಿಯೇ ಇದ್ದು ಅನುಮತಿಗಾಗಿ ಕಾಯುತ್ತಿದ್ದೇನೆ. ಇನ್ನೂ ಕಾಲುವೆಗೆ ನೀರು ಹರಿಸಿಲ್ಲ. ಸದ್ಯ ಡ್ಯಾಂನಲ್ಲಿ 36 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.•ಮಂಜಪ್ಪ, ಸಿಇ ತುಂಗಭದ್ರಾ ಡ್ಯಾಂ
•ದತ್ತು ಕಮ್ಮಾರ