Advertisement

ರಾಜ್ಯಗಳಿಗೆ ಸಿಮಿ ನಿಗ್ರಹದ ಅಧಿಕಾರ

12:30 AM Feb 20, 2019 | |

ಹೊಸದಿಲ್ಲಿ: ನಿಷೇಧಿತ “ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ)’ ಸಂಘಟನೆಗೆ ಸೇರಿದ ಹಣದ ವ್ಯವಹಾರಗಳು ಹಾಗೂ ಆ ಸಂಘಟನೆ ನಡೆಸುವಂಥ ಯಾವುದೇ ಚಟುವಟಿಕೆಗಳನ್ನು ನಿಗ್ರಹಿಸುವ ಅಧಿಕಾರವನ್ನು ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯ ಸರಕಾರಗಳಿಗೆ ನೀಡಿದೆ. ಅಲ್ಲದೇ, 1967ರ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ, ಜ. 31ರಿಂದ ಅನ್ವಯವಾಗುವಂತೆ, ಸಿಮಿ ಮೇಲಿನ ನಿಷೇಧವನ್ನು 5 ವರ್ಷ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ. 2014ರ ಫೆ. 1ರಂದು ಅಂದಿನ ಸರಕಾರ ಸಿಮಿ ಸಂಘ ಟನೆಗೆ 5 ವರ್ಷ ನಿಷೇಧ ಹೇರಿತ್ತು. 

Advertisement

ಈ ಆದೇಶಗಳ ಜತೆಗೆ, ಕೆಲವಾರು ತಿಳುವಳಿಕೆಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದ್ದು, ಸಿಮಿ ಸಂಘಟನೆಯ ಚಟುವಟಿಕೆಗಳನ್ನು ಆದಷ್ಟು ಬೇಗನೇ ಹತ್ತಿಕ್ಕದಿದ್ದರೆ ಆ ಸಂಘಟನೆ ದೇಶದಲ್ಲಿರುವ ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಜಾತ್ಯಾತೀತ ವ್ಯವಸ್ಥೆಯನ್ನೇ ಹಾಳುಗೆಡ ವುತ್ತದೆ ಎಂದು ಎಚ್ಚರಿಸಲಾಗಿದೆ. ಸಂಘಟನೆ ವಿರುದ್ಧದ 58 ಪ್ರಕರಣಗಳ ಪಟ್ಟಿಯನ್ನು ರಾಜ್ಯಗಳಿಗೆ ರವಾನಿಸಲಾಗಿದ್ದು ಇವುಗಳಲ್ಲಿ 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಸ್ಫೋಟ ಪ್ರಕರಣವೂ ಸೇರಿದೆ. 

Advertisement

Udayavani is now on Telegram. Click here to join our channel and stay updated with the latest news.

Next