Advertisement

ಬ್ಯಾಂಕಿಂಗ್‌ ಕ್ಷೇತ್ರದ ಸಶಕ್ತೀಕರಣಕ್ಕೆ ಆದ್ಯತೆ; ಠೇವಣಿ ವಿಮೆ ಇನ್ನು 5 ಲಕ್ಷ ರೂ.

10:03 AM Feb 03, 2020 | mahesh |

ದೇಶದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಡಾಲರ್‌ಗೆ ತಲುಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಉದಾತ್ತ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ಸಬಲೀಕರಣ ಮತ್ತು ಸುಧಾರಣೆಗೆ ಒತ್ತು ನೀಡಲಾಗಿದ್ದು, ಬ್ಯಾಂಕುಗಳಲ್ಲಿನ ಠೇವಣಿ ವಿಮೆ ಮೊತ್ತವನ್ನು ಈಗಿದ್ದ 1 ಲಕ್ಷ ರೂ.ಗಳಿಂದ 5 ಲಕ್ಷ ರೂ. ಏರಿಸಲಾಗಿದೆ.

Advertisement

ಭಾರತೀಯ ರಿಸರ್ವ್‌ ಬ್ಯಾಂಕಿನ ಅಂಗ ಸಂಸ್ಥೆಯಾಗಿರುವ “ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮವು (ಡಿಐಸಿಜಿಸಿ) ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ವಿಮೆ ರಕ್ಷಣೆ ಒದಗಿಸುತ್ತದೆ.  ಅದರಂತೆ, ನಷ್ಟದ ಸುಳಿಗೆ ಸಿಲುಕಿದ, ದಿವಾಳಿ ಎದ್ದ ಬ್ಯಾಂಕುಗಳಲ್ಲಿ ಇಡಲಾಗುವ ಠೇವಣಿಗಳಿಗೆ 1 ಲಕ್ಷ ರೂ.ವರೆಗೆ ವಿಮೆ ಸಿಗುತ್ತಿತ್ತು. ಈಗ ಆ ಮೊತ್ತವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಲು ಡಿಐಸಿಜಿಸಿ ಒಪ್ಪಿಗೆ ನೀಡಿದೆ.

50 ಲಕ್ಷಕ್ಕೆ ಇಳಿಕೆ: ಸಹಕಾರಿ ಬ್ಯಾಂಕುಗಳ ಬಲವರ್ಧನೆಗೆ “ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಎಸ್‌ಎಆರ್‌ಎಫ್ಎಇಎಸ್‌ಐ ಕಾಯ್ದೆ 2002ರನ್ವಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್ಸಿ) ಸಾಲ ವಸೂಲಾತಿ ಮಿತಿಯನ್ನು 1 ಕೋಟಿ ರೂ.ಗಳಿಂದ 50 ಲಕ್ಷ ರೂ.ಗೆ ಇಳಿಸಲಾಗಿದೆ. ಸರಕಾರಿ ನೌಕರರನ್ನು “ನೂತನ ಪಿಂಚಣಿ ಯೋಜನೆ’ (ಎನ್‌ಪಿಎಸ್‌) ಟ್ರಸ್ಟ್‌ನಿಂದ ಬೇರ್ಪಡಿಸಲು ಅನುಕೂಲವಾಗುವಂತೆ “ಪಿಂಚಣಿ ಮೊತ್ತ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್ಆರ್‌ಡಿಎಐ) ಕಾಯ್ದೆಗೆ ಕೆಲವೊಂದು ತಿದ್ದುಪಡಿಗಳನ್ನು ತರಲಾಗುತ್ತದೆ.

ಎಮ್‌ಎಸ್‌ಎಂಇ: ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ “ಸಣ್ಣ ಮತ್ತು ಮಧ್ಯಮ ಕೈಗಾರಿಕೆ’ (ಎಂಎಸ್‌ಎಂಇ) ಕ್ಷೇತ್ರದ ಆರ್ಥಿ ಮತ್ತು ಹಣಕಾಸು ಸುಸ್ಥಿರತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಟಿಆರ್‌ಇಡಿಎಸ್‌ ಮೂಲಕ ಬ್ಯಾಂಕೇತರ ಹಣಕಾಸು ಸಂಸ್ಥೆಯಯ ಎಂಎಸ್‌ಎಂಇಗಳಿಗೆ ಆರ್ಥಿಕ ನೆರವು ಒದಗಿಸಲು ಅನುಕೂಲವಾಗಲು “ಅಪವರ್ತನ ನಿಯಂತ್ರಣ ಕಾಯ್ದೆ-2011’ಕ್ಕೆ ತಿದ್ದುಪಡಿಗೆ ಉದ್ದೇಶಿಸಲಾಗಿದೆ. ಸಣ್ಣ ಉದ್ದಿಮೆದಾರರ ಕಾರ್ಯವಾಹಿ ಬಂಡವಾಳ ಖಾತರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸಣ್ಣ ಉದ್ದಿಮೆಗಳ ಸಾಲ ಮರು ಹೊಂದಾಣಿಕೆ ಅವಧಿಯನ್ನು 2021ರ ಮಾ.31ರವರೆಗೆ ವಿಸ್ತರಿಸುವಂತೆ ಆರ್‌ಬಿಐಗೆ ಮನವಿ ಮಾಡಲಾಗಿದೆ. ಮಧ್ಯಮ ಗಾತ್ರದ ಕಂಪೆನಿಗಳ ರಫ್ತು ಮಾರುಕಟ್ಟೆ ಉತ್ತೇಜಿಸಲು ಸಾವಿರ ಕೋಟಿ ರೂ. ಮೊತ್ತದ ಯೋಜನೆ ಜಾರಿಗೆ ತರಲಾಗುವುದು.

ಮೂಲಸೌಕರ್ಯ ಹೂಡಿಕೆಗೆ ಯೋಜನೆ: ಮೂಲ ಸೌಕರ್ಯ ಹೂಡಿಕೆಗೆ ಸರಕಾರ ಬದ್ಧವಾಗಿದ್ದು, ಅದಕ್ಕಾಗಿ 103 ಲಕ್ಷ ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈಗಾಗಲೇ 22 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ.

Advertisement

ಆಮದಾದ ಪಾದರಕ್ಷೆ ಆಗುತ್ತೆ ದುಬಾರಿ
ದೇಶೀಯ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹಿಸಲು ಪಾದರಕ್ಷೆ ಹಾಗೂ ಪೀಠೊಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಿಸಲಾಗಿದೆ. ದೇಶಿಯ ವೈದ್ಯಕೀಯ ಉಪಕರಣಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಶೇ.5ರಷ್ಟು “ಹೆಲ್ತ್‌ ಸೆಸ್‌’ ಪ್ರಸ್ತಾಪಿಸಲಾಗಿದೆ. ಪಿಟಿಎ ಮೇಲಿನ ಸುಂಕ ರದ್ದುಗೊಳಿಸಲು ಉದ್ದೇಶಿಸಲಾಗಿದೆ. ನ್ಯೂಸ್‌ ಪ್ರಿಂಟ್‌ ಹಾಗೂ ಲೈಟ್‌ ವ್ಹೇಟ್‌ ಕೋಟೆಡ್‌ ಪೇಪರ್‌ಗಳ ಮೇಲಿನ ಆಮದು ಸುಂಕ ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿದೆ.

ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಮುಕ್ತ ವಾಣಿಜ್ಯ ಒಪ್ಪಂದಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಕಸ್ಟಮ್‌ ಕಾಯ್ದೆಯಲ್ಲಿ ಬರುವ ದಿನಗಲ್ಲಿ ಸೂಕ್ತ ನಿಬಂಧನೆಗಳನ್ನು ಸೇರಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಪ್ರಸ್ತುತ ಜಿಡಿಪಿಯ ತಾತ್ಕಾಲಿಕ ಕುಸಿತದ ಹೊರತಾಗಿಯೂ ದೇಶದ ಮೂಲ ಆರ್ಥಿಕ ತಳಪಾಯ ಭದ್ರವಾಗಿದ್ದು, 2020-21ರ ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಾಣಲಿದೆ. ಎಂಎಫ್ಎಸ್‌-2020-21 ಪ್ರಕಾರ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆಯಲ್ಲಿ ಶೇ.10ರಷ್ಟು ವೃದ್ಧಿ ಆಗಲಿದೆ. ಮಧ್ಯಮಾವಧಿಯಲ್ಲಿ ವಿತ್ತೀಯ ಬಲವರ್ಧನೆ “ಅವರೋಹಣ ಪಥಕ್ಕೆ’ ಬರಲಿದೆ ಎಂಬ ವಿಶ್ವಾಸವನ್ನು ಸರಕಾರ ವ್ಯಕ್ತಪಡಿಸಿದೆ. ವಿತ್ತೀಯ ಆಸ್ತಿ ಸೃಷ್ಟಿಸುವುದರ ಜತೆಗೆ
ಜೊತೆಗೆ ನೀರಿನ ಸಂರಕ್ಷಣೆ ಮತ್ತು ನೈರ್ಮಲೀಕರಣಕ್ಕೆ ಸರಕಾರದ ಆದ್ಯತೆಯಾಗಿರಲಿದೆ.

ವಿತ್ತೀಯ ಮಾರುಕಟ್ಟೆ
ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ವಿತ್ತೀಯ ವ್ಯವಸ್ಥೆಯಲ್ಲಿ ಬಂಡವಾಳದ ಹರಿವು ಮುಖ್ಯ. ಇದಕ್ಕಾಗಿ ಆರ್‌ಬಿಐ ಜೊತೆಗೆ ಚರ್ಚಿಸಿ ಹಲವು ಚೆತೋಹಾರಿ ಹೆಜ್ಜೆಗಳನ್ನು ಇಡಲಾಗುವುದು. ಕಾರ್ಪೋರೇಟ್‌ ಬಾಂಡ್‌ಗಳಲ್ಲಿನ ಎಫ್ಪಿಐ ಮಿತಿಯನ್ನು ಶೇ.9ರಿಂದ 15ಕ್ಕೆ ಹೆಚ್ಚಿಸಲಾಗುವುದು. ದೇಶಿಯ ಹೂಡಿಕೆದಾರರ ಜೊತೆಗೆ ಅನಿವಾಸಿ ಹೂಡಿಕೆದಾರರಿಗೆ ಮುಕ್ತ ಅವಕಾಶಗಳನ್ನು ಮಾಡಿಕೊಡಲಾಗುವುದು. ವಿತ್ತೀಯ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಕಾನೂನು ತರಲಾಗುತ್ತದೆ.

ಆಮದಾದ ಪಾದರಕ್ಷೆ ಆಗುತ್ತೆ ದುಬಾರಿ
ದೇಶೀಯ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹಿಸಲು ಪಾದರಕ್ಷೆ ಹಾಗೂ ಪೀಠೊಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಿಸಲಾಗಿದೆ. ದೇಶಿಯ ವೈದ್ಯಕೀಯ ಉಪಕರಣಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಶೇ.5ರಷ್ಟು “ಹೆಲ್ತ್‌ ಸೆಸ್‌’ ಪ್ರಸ್ತಾಪಿಸಲಾಗಿದೆ. ಪಿಟಿಎ ಮೇಲಿನ ಸುಂಕ ರದ್ದುಗೊಳಿಸಲು ಉದ್ದೇಶಿಸಲಾಗಿದೆ. ನ್ಯೂಸ್‌ ಪ್ರಿಂಟ್‌ ಹಾಗೂ ಲೈಟ್‌ ವ್ಹೇಟ್‌ ಕೋಟೆಡ್‌ ಪೇಪರ್‌ಗಳ ಮೇಲಿನ ಆಮದು ಸುಂಕ ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿದೆ.

ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಮುಕ್ತ ವಾಣಿಜ್ಯ ಒಪ್ಪಂದಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಕಸ್ಟಮ್‌ ಕಾಯ್ದೆಯಲ್ಲಿ ಬರುವ ದಿನಗಲ್ಲಿ ಸೂಕ್ತ ನಿಬಂಧನೆಗಳನ್ನು ಸೇರಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಪ್ರಸ್ತುತ ಜಿಡಿಪಿಯ ತಾತ್ಕಾಲಿಕ ಕುಸಿತದ ಹೊರತಾಗಿಯೂ ದೇಶದ ಮೂಲ ಆರ್ಥಿಕ ತಳಪಾಯ ಭದ್ರವಾಗಿದ್ದು, 2020-21ರ ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಾಣಲಿದೆ. ಎಂಎಫ್ಎಸ್‌-2020-21 ಪ್ರಕಾರ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆಯಲ್ಲಿ ಶೇ.10ರಷ್ಟು ವೃದ್ಧಿ ಆಗಲಿದೆ. ಮಧ್ಯಮಾವಧಿಯಲ್ಲಿ ವಿತ್ತೀಯ ಬಲವರ್ಧನೆ “ಅವರೋಹಣ ಪಥಕ್ಕೆ’ ಬರಲಿದೆ ಎಂಬ ವಿಶ್ವಾಸವನ್ನು ಸರಕಾರ ವ್ಯಕ್ತಪಡಿಸಿದೆ. ವಿತ್ತೀಯ ಆಸ್ತಿ ಸೃಷ್ಟಿಸುವುದರ ಜತೆಗೆ
ಜೊತೆಗೆ ನೀರಿನ ಸಂರಕ್ಷಣೆ ಮತ್ತು ನೈರ್ಮಲೀಕರಣಕ್ಕೆ ಸರಕಾರದ ಆದ್ಯತೆಯಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next