Advertisement

ಅಧಿಕಾರ ಯಂತ್ರ ದುರುಪಯೋಗ: ಲಿಂಬಾವಳಿ

12:52 AM Apr 08, 2019 | Sriram |

ಬೆಂಗಳೂರು: ಜೆಡಿಎಸ್‌ ಪಕ್ಷ ಮಂಡ್ಯ,ತುಮಕೂರು ಮತ್ತು ಹಾಸನಕ್ಕೆ ಸೀಮಿತವಾಗಿದ್ದು,ಈ ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಚುನಾವಣಾ
ಆಯೋಗವನ್ನು ಒತ್ತಾಯಿಸಿದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರಿಗೆ ಬಿಜೆಪಿ ನೈತಿಕ ಬೆಂಬಲನೀಡಿದೆ. ಸುಮಲತಾ ಪರವಾಗಿ ಪ್ರಚಾರದಲ್ಲಿ ತೊಡಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಬಿಜೆಪಿ ಹಿರಿಯ ನಾಯಕರ ಪ್ರವಾಸ ಇತರ ಕ್ಷೇತ್ರಗಳಲ್ಲಿ ನಿಗದಿಯಾಗಿರುವುದರಿಂದ ಮಂಡ್ಯದಲ್ಲಿ ಪ್ರಚಾರ ನಡೆಸುವುದಿಲ್ಲ ಎಂದರು. ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ.
ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಒಳಜಗಳ, ಕಿತ್ತಾಟ ಹೆಚ್ಚಾಗಲಿದೆ. ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸುತ್ತಿದ್ದಾರೆ ಎಂದರು.

ವಯನಾಡಿನಲ್ಲಿ ರಾಹುಲ್‌ ಗಾಂಧಿಯವರು ನಾಮಪತ್ರ ಸಲ್ಲಿಸಲು ತೆರಳಿದಾಗ ಕಂಡ ದೃಶ್ಯ ಹೇಗಿತ್ತೆಂದರೆ ಕಾಂಗ್ರೆಸ್‌ ಪಕ್ಷ ಚಿಹ್ನೆ ಬದಲಾಯಿಸಿಕೊಂಡು ಮುಸ್ಲಿಂ ಲೀಗ್‌ ಚಿಹ್ನೆ
ಪಡೆದುಕೊಂಡಿರುವಂತಿತ್ತು. ಇಡೀಮೆರವಣಿಗೆಯಲ್ಲಿ ಕಾಂಗ್ರೆಸ್‌ ಬಾವುಟ ಇಲ್ಲದೆ ಮುಸ್ಲಿಂ ಲೀಗ್‌ ಬಾವುಟದ ಭರಾಟೆ ಹೆಚ್ಚಾಗಿತ್ತು.

ಅಮೇಥಿಯಲ್ಲಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೇಸರಿ ವಾತಾವರಣ ಬೇಕಾಗಿತ್ತು. ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವಾಗ ಕೇಸರಿ ಹೋಗಿ ಹಸಿರಾಗಿದೆ.
ಅವಕಾಶಕ್ಕೆ ತಕ್ಕ ಹಾಗೆ ಬಣ್ಣ ಬದಲಾಯಿಸುವ ಗೋಸುಂಬೆ ರಾಜಕಾರಣವನ್ನು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next