Advertisement

ಕ್ರಿಯಾಶೀಲ ರಂಗಭೂಮಿಯಿಂದ ಸಶಕ್ತ ಸಮಾಜ ನಿರ್ಮಾಣ

06:28 PM May 18, 2022 | Team Udayavani |

ಹಾನಗಲ್ಲ: ಮಕ್ಕಳ ರಂಗಭೂಮಿ ಕ್ರಿಯಾಶೀಲವಾದರೆ ಶಾಲಾ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಶಿಕ್ಷಣವೂ ಲಭಿಸಿ ಸಶಕ್ತ ಸಾಮಾಜಿಕ ಪರಿಸರ ನಿರ್ಮಾಣ ಸಾಧ್ಯ ಎಂದು ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ ಹೇಳಿದರು.

Advertisement

ಶ್ರೀ ಕುಮಾರೇಶ್ವರ ಬಯಲು ರಂಗಮಂದಿರಲ್ಲಿ ರಂಗಸಂಗಮ ಕಲಾ ಸಂಘ ಆಯೋಜಿಸಿದ್ದ ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಸಮಾರೋಪ ಹಾಗೂ ಶಿಬಿರಾರ್ಥಿಗಳಿಂದ ಪಂಜರ ಶಾಲೆ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಸದುಪಯೋಗಕ್ಕೆ ಲಕ್ಷ್ಯ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್‌ ನೀಡುತ್ತಿರುವುದೇ ಬಹುತೇಕ ಮಕ್ಕಳನ್ನು ಒಳ್ಳೆಯ ಶಿಕ್ಷಣದಿಂದ ದೂರ ಮಾಡುತ್ತಿದೆ. ಸಾಂಸ್ಕೃತಿಕ ವಾತಾವರಣಕ್ಕಾಗಿ ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಪರಿಸರ ಒದಗಿಸುವುದು ಈಗಿನ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿ, ಹಾನಗಲ್ಲ ತಾಲೂಕಿನ ಶೇಷಗಿರಿ ಈಗ ರಾಜ್ಯದಲ್ಲಿಯೇ ರಂಗ ಸಂಭ್ರಮದ ಕ್ರಿಯಾಶೀಲ ಕೇಂದ್ರವಾಗಿ ಮಕ್ಕಳ ರಂಗಭೂಮಿಯನ್ನೂ ಒಳಗೊಂಡು ರಂಗ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ದಿ| ಸಿ.ಎಂ. ಉದಾಸಿ ಅವರ ದೂರದೃಷ್ಟಿಯ ಶ್ರೀ ಕುಮಾರೇಶ್ವರ ಬಯಲು ರಂಗಮಂದಿರದಲ್ಲಿ ವರ್ಷವಿಡೀ ರಂಗ ಪ್ರದರ್ಶನಗಳು ನಡೆಯಲು ಸಂಘಟಿತವಾಗಿ ರಂಗಪ್ರಿಯರು ಕೆಲಸ ಮಾಡಬೇಕೆಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜಶೇಖರಗೌಡ್ರು ಕಟ್ಟೇಗೌಡ್ರ, ಸಾಹಿತಿ ಶಿವಾನಂದ ಕ್ಯಾಲಕೊಂಡ, ನಿರಂಜನ ಗುಡಿ, ಸಿಪಿಐ ಶಿವಶಂಕರ ಗಣಾಚಾರಿ, ತಾಲೂಕು ವೈದ್ಯಾಧಿಕಾರಿ ಡಾ| ಕೆ.ಲಿಂಗರಾಜ, ವೈದ್ಯಾಧಿಕಾರಿ ಡಾ| ಉಮಾದೇವಿ ಹಿರೇಮಠ, ಗಂಗಾಧರ ಚಿಕ್ಕಣ್ಣನವರ, ಉಮೇಶ ಮಾಳಗಿ, ಉದ್ಯಮಿ ಇಷ್ಟಲಿಂಗ ಸಾಲವಟಗಿ, ಕಲಾವಿದರಾದ ಸಿದ್ದಪ್ಪ ರೊಟ್ಟಿ, ದೇವಿಪ್ರಸಾದ, ರಾಮಕೃಷ್ಣ , ಮುಖ್ಯೋಪಾಧ್ಯಾಯ ಎಸ್‌.ಎ. ಮುಲ್ಲಾ, ಕರಬಸಪ್ಪ ಗೊಂದಿ, ಸಂಗೀತ ಕಲಾವಿದ ಜಗದೀಶ ಮಡಿವಾಳರ ಅತಿಥಿಗಳಾಗಿ ಭಾಗವಹಿಸಿದ್ದರು.

Advertisement

ರವಿಂದ್ರನಾಥ ಟ್ಯಾಗೋರ್‌ ಅವರ ಕಥೆ ಆಧರಿಸಿದ ಬಿ.ವಿ.ಕಾರಂತ ಅವರ ಪಂಜರಶಾಲೆ ನಾಟಕವು ಜಗದೀಶ ಕಟ್ಟಿಮನಿ ನಿರ್ದೇಶನ, ಹರೀಶ ಗುರಪ್ಪನವರ ಬೆಳಕಿನ ನಿರ್ವಹಣೆ, ಜಗದೀಶ ಮಡಿವಾಳರ ತಂಡದ ಸಂಗೀತ ಸಂಯೋಜನೆ, ಬಸವರಾಜ ವಾಲ್ಮೀಕಿ, ಜ್ಞಾನೇಶ ಕಲಾಲ, ಹರ್ಷ, ಕಾರ್ತಿಕ ಆವರ ನಿರ್ವಹಣೆಯಲ್ಲಿ ಪ್ರದರ್ಶನಗೊಂಡಿತು.

ಬದುಕೇ ಒಂದು ನಾಟಕ. ನಾಟಕಗಳಲ್ಲೂ ಕೂಡ ಬದುಕನ್ನೇ ಬಿಂಬಿಸಲಾಗುತ್ತದೆ. ಇಂದು ಸಾಂಸ್ಕೃತಿಕ ಪರಿಸರ ಹಾಳಾಗುತ್ತಿದೆ ಎಂದು ಕೊರಗುವ ಬದಲು ರಂಗಭೂಮಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ. ಮಕ್ಕಳಿಗೆ ಕಲಿಯುವಿಕೆ ಸಹಜವಾಗಿರುತ್ತದೆ.ಅವರಲ್ಲಿ ರಂಗ ಪ್ರೀತಿ ಬೆಳೆಸಬೇಕು. ನಾಟಕ ಕಲೆಗಳ ರಾಜ. ಇದೇ ನಿಜವಾದ ಬದುಕಿನ ಶಿಕ್ಷಣ.
ದೀಪಾ ಗೋನಾಳ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next