Advertisement
ಸುದ್ದಿಗಾರರ ಜತೆ ಮಾತನಾಡಿ, ಈ ನಿಟ್ಟಿನಲ್ಲಿ ಮೊದಲಿಗೆ ಬ್ರಿಟನ್‌ಸರ್ಕಾರದಿಂದ ಒಂದು ಸಾವಿರನರ್ಸ್‌ಗಳಿಗೆ ಬೇಡಿಕೆ ಬಂದಿದೆ.ಅಷ್ಟೂ ಮಂದಿಶುಶ್ರೂಷಕಿಯರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ರಾಮನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಶೂನ್ಯಕ್ಕೆ ಸೀಮಿತವಾಗಿದ್ದ ಬಿಜೆಪಿ ಸಂಖ್ಯಾಬಲ ಇದೀಗ ಮೂರಂಕಿ ದಾಟಿದ್ದು ಕಾಂಗ್ರೆಸ್-ಜೆಡಿಎಸ್ ಬುಡ ಅಲ್ಲಾಡಿಸಿದೆ ಎಂದು ಹೇಳಿದರು. ಬೆಂಗಳೂರು ನಗರಕ್ಕೆ ಅತಿ ಸನಿಹ ಇರುವ ಜಿಲ್ಲೆಯಲ್ಲಿ ಕಾಂಗ್ರೆಸ್,ಜೆಡಿಎಸ್ ಬಲಾಡ್ಯ ನಾಯಕರಿದ್ದರೂ ಬಿಜೆಪಿ ಬೆಂಬಲಿತರು ಛಲದಿಂದ ಹೋರಾಟ ಮಾಡಿದ್ದಾರೆ. ಜಿಲ್ಲೆಯ 4 ತಾಲೂಕುಗಳಲ್ಲಿ 234 ಕಡೆ ಬಿಜೆಪಿ ಸಾಧಿಸಿದ್ದಾರೆ ಎಂದು ತಿಳಿಸಿದರು.
ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತ್ತೂಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಶಕ್ತಿಗಳನ್ನು ಪಕ್ಕಾ ಕಾರ್ಯತಂತ್ರದ ಮೂಲಕ ನಮ್ಮ ಕಾರ್ಯಕರ್ತರು ಹಿಮ್ಮೆಟ್ಟಿಸಿ ಗೆಲವು ಪಡೆದಿದ್ದಾರೆಂದರು. ರಾಮನಗರ ಜಿಲ್ಲೆಯಲ್ಲಿ ಒಟ್ಟು 234 ಗ್ರಾಪಂ ಕ್ಷೇತ್ರಗಳಲ್ಲಿ ನಮಗೆ ಗೆಲುವು ಸಿಕ್ಕಿದೆ. ಕನಕಪುರದಲ್ಲೇ 52 ಕಡೆ ಗೆದ್ದಿದ್ದೇವೆ. ಅಲ್ಲಿ ಕನಕಪುರ ಬಂಡೆ ಸ್ಪಷ್ಟವಾಗಿ ಬಿರುಕು ಬಿಟ್ಟಂತೆ ಆಗಿದೆ. ಅಲ್ಲಿ ವಿಶೇಷ ಎಂದರೆ ಜೆಡಿಎಸ್‌ಗಿಂತ 45 ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಾಗಡಿಯಲ್ಲಿ 40ಕ್ಕೂ ಹೆಚ್ಚು ಸ್ಥಾನ, ರಾಮನಗರದಲ್ಲಿ 22. ಚನ್ನಪಟ್ಟಣದಲ್ಲಿ 142 ಕಡೆ ಗೆಲುವು ಪಡೆದಿದ್ದೇವೆಂದರು.
ಹೊಸ ವರ್ಷಕ್ಕೆ ಮುನ್ನ ಕಡತ ವಿಲೇವಾರಿ :
ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಮುನ್ನಾ ದಿನವಾದ ಗುರುವಾರ ತಮ್ಮ ಮುಂದೆ ಇದ್ದ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.
ಈ ಮೂಲಕ ಅವರು 2020 ವರ್ಷವನ್ನು ಮುಕ್ತಾಯಗೊಳಿಸಿ ಒಂದು ಅರ್ಥಪೂರ್ಣ ಸಂಪ್ರದಾಯಕ್ಕೆ ನಾಂದಿ ಹಾಡಿದರಲ್ಲದೆ, ರಾತ್ರಿ 9 ಗಂಟೆವರೆಗೂ ಗೃಹ ಕಚೇರಿಯಲ್ಲೇ ಕೂತು ಬಾಕಿ ಇದ್ದ ಸುಮಾರು 40 ಕಡತ ವಿಲೇವಾರಿ ಮಾಡುವುದರ ಮೂಲಕ ಹೊಸ ವರ್ಷಾಚರಿಸಿದರು. 2021 ವರ್ಷವನ್ನು ಇ-ಆಫೀಸ್ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ. ಇವತ್ತಿನವರೆಗೆ ಇದ್ದ ಎಲ್ಲಾ ಕಡತ ವಿಲೇವಾರಿ ಮಾಡಿದ್ದು, ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯವಹಾರಗಳು ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತವೆ. ಎಲ್ಲಾ ಕಡತ, ಪತ್ರಗಳು ಇ-ಆಫೀಸ್ ಮೂಲಕವೇ ನಡೆಯಲಿದೆ ಎಂದು ತಿಳಿಸಿದರು.