Advertisement
ನರೇಗಾ ಯೋಜನೆ ಆರಂಭವಾದಾಗಿನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಒಂದೇ ಖಾತೆಯಿಂದ ಕೂಲಿ ಹಣ ಹಾಕಲಾಗುತ್ತಿತ್ತು. ಯಾವುದೇ ವರ್ಗ-ಭೇದ ಇಲ್ಲದೇ ಕೆಲಸ ಮಾಡಿದ ಎಲ್ಲ ಕಾರ್ಮಿಕರ ಖಾತೆಗೂ ಏಕಕಾಲಕ್ಕೆ ಹಣ ಜಮೆಯಾಗುತ್ತಿತ್ತು. ಆದರೆ, ಕಳೆದ ವರ್ಷ (2021-22ನೇ ಸಾಲಿನಲ್ಲಿ) ಕೇಂದ್ರ ಸರ್ಕಾರ ವರ್ಗವಾರು ಆದ್ಯತೆ ಮೇರೆಗೆ ಕೂಲಿ ಹಣ ನೀಡುವ ಉದ್ದೇಶದಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಕೂಲಿ ಕಾರ್ಮಿಕರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಂಬ ಮೂರು ವರ್ಗಗಳನ್ನು ಮಾಡಿತ್ತು. ಈ ವರ್ಗಗಳಿಗೆ ಪ್ರತ್ಯೇಕ ಮೂರು ಖಾತೆ ತೆರೆದು ಅನುದಾನ ಹಾಕುವ ಮೂಲಕ ಕೂಲಿ ವೇತನ ನೀಡುವ ವ್ಯವಸ್ಥೆ ಜಾರಿಗೆ ತಂದಿತ್ತು.
Related Articles
Advertisement
ನಾವು ಎಲ್ಲರೂ ಒಂದೇ ಗುಂಪಿನಲ್ಲಿದ್ದು ಒಂದೇ ಕಾಮಗಾರಿ ಮಾಡಿದರೂ ವೇತನ ಹಾಕುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಂಬ ವರ್ಗ ಮಾಡಲಾಗುತ್ತಿತ್ತು. ಇದರಿಂದ ಕಾರ್ಮಿಕರ ಒಂದೇ ಗುಂಪಿನಲ್ಲಿ ಒಬ್ಬರಿಗೆ ಕೂಲಿ ಹಣ ಬಂದರೆ ಇನ್ನೊಬ್ಬರಿಗೆ ಬರುತ್ತಿರಲಿಲ್ಲ. ಈಗ ಎಲ್ಲರಿಗೂ ಒಂದೇ ಖಾತೆಯಿಂದ ಕೂಲಿ ಹಣ ನೀಡುವಂತೆ ಮಾಡಿರುವುದು ಸ್ವಾಗತಾರ್ಹ. – ಸಿದ್ದೇಶ್, ಹುಲಿಕಟ್ಟೆ
ಕಳೆದ ವರ್ಷ ವರ್ಗವಾರು ಪ್ರತ್ಯೇಕವಾಗಿ ಕಾರ್ಮಿಕರಿಗೆ ಕೂಲಿ ಹಣ ನೀಡುವ ವ್ಯವಸ್ಥೆ ತರಲಾಗಿತ್ತು. ಈಗ ಸರ್ಕಾರ ಈ ವ್ಯವಸ್ಥೆ ಯನ್ನು ತೆಗೆದು ಒಂದೇ ಖಾತೆಯಿಂದ ಕೂಲಿ ಹಣ ಜಮೆ ಮಾಡಲು ಕ್ರಮವಹಿಸಿದೆ. –ಡಾ|ಎ.ಚನ್ನಪ್ಪ, ಸಿಇಒ, ಜಿಪಂ-ದಾವಣಗೆರೆ
ಎಚ್. ಕೆ. ನಟರಾಜ