Advertisement
ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನವಿದೆ. ಆದರೆ ಕೂಲಿ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಮತ್ತೆ ಕೆಲವೆಡೆ ಗುತ್ತಿಗೆದಾರರೇ ಮುಂಗಡವಾಗಿ ಕಾರ್ಮಿಕರಿಗೆ ಹಣ ನೀಡಿ ಕೆಲಸ ಮಾಡಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರು ತಮ್ಮ ಖಾತೆಗಳಿಗೆ ಸಂದಾಯವಾದ ಹಣವನ್ನು ಬಿಡಿಸಿಕೊಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಾರೆ.
Related Articles
Advertisement
ಬೆಳಗುತ್ತಿ ಗ್ರಾಮದ 13 ಹೆಕ್ಟೇರ್ ವಿಸ್ತೀರ್ಣದ ಇಸ್ರಾಪುರ ಬಾಳೆಕಟ್ಟೆ ಕೆರೆ ಹೂಳೆತ್ತುವುದು, ರಸ್ತೆ ಅಭಿವೃದ್ಧಿ, ಕೆರೆ ಏರಿ ದುರಸ್ತಿ, ಕೋಡಿ ದುರಸ್ತಿ, ತೂಬು ದುರಸ್ತಿ, ಕಾಲುವೆಗಳ ಲೆ„ನಿಂಗ್, ಕೆರೆ ಸುತ್ತ ಟ್ರೆಂಚ್ ಹೊಡೆಸಿ ಗಿಡಗಳನ್ನು ನೆಡುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ನಬಾಡ್ ìನಿಂದ 39 ಲಕ್ಷ ರೂ. ಬಿಡುಗಡೆಯಾಗಿದೆ. ಮಳೆಗಾಲ ಪಾರಂಭವಾಗುವುದರೊಳಗೆ ಹೂಳೆತ್ತುವ ಕೆಲಸ ಶೀಘ್ರ ಮುಗಿಸಬೇಕು ಎಂದು ಸೂಚಿಸಿದರು.
ಬೆಳಗುತ್ತಿ-ಹೊಸಕೊಪ್ಪ ಮಾರ್ಗದ 3ಕಿ.ಮೀ. ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೇ ಈ ಕಾಮಗಾರಿ ಪ್ರಾರಂಭವಾಗಲಿದೆ. ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ 72 ಕೋಟಿ ರೂ.ಗಳಷ್ಟು ಹಣ ಮೀಸಲಿಡಲಾಗಿದೆ. ಈ ವರ್ಷದ ಡಿಸೆಂಬರ್ ಕೊನೆಯ ಒಳಗೆ ಎಲ್ಲಾ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುವುದು.
ತಾಲೂಕಿನ ಕುಂದೂರು ಕೆರೆ ಅಭಿವೃದ್ಧಿಗೂ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಬೆಳಗುತ್ತಿ ಗ್ರಾಪಂ ಅಧ್ಯಕ್ಷೆ ರೇಖಾ ಪ್ರಕಾಶ್, ಉಪಾಧ್ಯಕ್ಷ ಮಲ್ಲಿಗೇನಹಳ್ಳಿ ಪರಮೇಶ್ವರಪ್ಪ ಗ್ರಾಪಂ ಸದಸ್ಯ ಬಿ.ಟಿ. ಕುಬೇರಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಂ.ಜಿ. ಬಸವರಾಜಪ್ಪ ಮಾತನಾಡಿದರು. ಗ್ರಾಪಂ ಸದಸ್ಯರಾದ ಎಸ್.ಟಿ. ಅಶೋಕ್,
ಎಸ್.ಕೆ. ತೀರ್ಥಲಿಂಗಪ್ಪ, ಎ.ಕೆ. ಕರಿಬಸಪ್ಪ, ಎಲ್. ನಾಗರಾಜ್, ನಾಗರತ್ನಮ್ಮ, ರಶ್ಮಿ, ಸಿದ್ಧಾರ್ಥಿನಿ ಅರಸ್, ಮಾಜಿ ಉಪಾಧ್ಯಕ್ಷ ಎ.ಕೆ. ಕಳ್ಳಿಹಾಲಪ್ಪ, ಮುಖಂಡರಾದ ಕೆ. ಮಹೇಶ್ವರಪ್ಪ, ಕೆ. ಶೇಖರಪ್ಪ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಂಜುನಾಥ್ ಕಪಾಲಿ, ಎಇಇ ಗಿರೀಶ್, ಗುತ್ತಿಗೆದಾರ ಎಂ.ಜಿ. ಸಿದ್ದೇಶ್ ಉಪಸ್ಥಿತರಿದ್ದರು.