Advertisement

ದುಗ್ಗಹಟ್ಟಿಯಲ್ಲಿ ಉದ್ಯೋಗ ಖಾತ್ರಿ ಸ್ಥಗಿತ

03:36 PM Dec 02, 2019 | Suhan S |

ಯಳಂದೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯ ಕೆಲಸಗಳು ಕಳೆದ ಎರಡು ತಿಂಗಳಿಂದಲೂ ದುಗ್ಗಹಟ್ಟಿಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದೆ. ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ಇಲ್ಲದೇಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.ಕೇಂದ್ರ ಸರ್ಕಾರವು ಗ್ರಾಮೀಣ ಅಭಿವೃದ್ಧಿಗಾಗಿಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯನ್ನು ಜಾರಿಗೊಳಿಸಿದೆ.

Advertisement

ಈ ಯೋಜನೆಯ ಮೂಲಕ ಕೋಟಿಗಟ್ಟಲೆ ಹಣವನ್ನು ಖರ್ಚುಮಾಡಲು ಅವಕಾಶವಿದೆ. ಆದರೆ, ಪಂಚಾಯ್ತಿವ್ಯಾಪ್ತಿಯ ದುಗ್ಗಹಟ್ಟಿ, ಮೆಳ್ಳಹಳ್ಳಿ, ಕಂದಹಳ್ಳಿ, ವೈ.ಕೆ.ಮೋಳೆ ವ್ಯಾಪ್ತಿಯಲ್ಲಿ ಅನುದಾನವನ್ನು ಬಳಸಿಕೊಳ್ಳುವಲ್ಲಿ ಪಂಚಾಯ್ತಿ ವಿಫ‌ಲವಾಗಿದೆ. ಈ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ 22 ಲಕ್ಷ ರೂ.ಗಳನ್ನು ಮಾತ್ರ ಬಳಸಲಾಗಿದೆ. ಹೀಗಾಗಿ ತಾಲೂಕಿನ 12 ಗ್ರಾಮ ಪಂಚಾಯ್ತಿಯಲ್ಲಿ ಅತಿ ಕಡಿಮೆಸಾಧನೆ ಮಾಡಿದ ಅಪಕೀರ್ತಿಯನ್ನು ಪಡೆದುಕೊಂಡಿದೆ.

ಪ್ರಗತಿಗೆ ಕ್ರಮ ಕೈಗೊಳ್ಳಿ: ಕಳೆದ ಎರಡು ತಿಂಗಳಿಂದಎನ್‌ಎಂಆರ್‌ ತೆಗೆಯುವುದನ್ನೇ ನಿಲ್ಲಿಸಲಾಗಿದೆ.ಆದ್ದರಿಂದ ಮುಂದಿನ ದಿನಗಳಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಯೋಜನೆಯ ಮೂಲಕ ಪ್ರಗತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಪಂಚಾಯ್ತಿ ಪಿಡಿಒ ಹಾಗೂ ಇಒ ಸೇರಿದಂತೆ ಇತರೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

ನಗರ ಪ್ರದೇಶಕ್ಕೆ ವಲಸೆ: ನರೇಗಾ ಯೋಜನೆಯಲ್ಲಿಕೂಲಿ ಮಾಡಿದ 15 ದಿನದೊಳಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯ ಕೆಲಸಗಳಿಗೆ ಕೂಲಿ ಪಾವತಿಯಾಗದ ಕಾರಣ ಕಾರ್ಮಿಕರು ನರೇಗಾಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಏಕಾಏಕಿ ಕೆಲಸವನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತಷ್ಟು ಹಿನ್ನಡೆಯಾಗಿದೆ. ಫ‌ಲಾನುಭವಿಗಳು ಕೂಲಿ ಕೆಲಸಕ್ಕಾಗಿ ನಗರಪ್ರದೇಶಗಳಗೆ ವಲಸೆ ಹೋಗುವ ಸನ್ನಿವೇಶಗಳು ನಿರ್ಮಾಣಗೊಂಡಿದೆ. ಈ ಬಗ್ಗೆ ಸಂಬಂದಪಟ್ಟ ಮೇಲಾಧಿಕಾರಿಗಳು ಕೂಲಿ ಕಾರ್ಮಿಕರಿಗೆ ನಿಗದಿತಸಮಯದಲ್ಲಿ ಹಣವನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ.

ನರೇಗಾ ಯೋಜನೆಯ ಕೆಲಸಗಳು: ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುವ ಒಂದು ಕುಟುಂಬಕ್ಕೆ ಕನಿಷ್ಠ100 ದಿನಗಳಿಗೆ ಕೂಲಿ ನೀಡುವ ಯೋಜನೆಯಾಗಿದೆ.ಈ ಯೋಜನೆಯಲ್ಲಿ ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಕರೆ, ಕಟ್ಟೆ ಹಾಗೂ ಕಾಲುವೆ, ಕಲ್ಯಾಣಿಗಳು, ಶಾಲೆಯ ಆಟದ ಮೈದಾನ, ಕಾಂಪೌಂಡ್‌, ಶೌಚಗೃಹ, ಸ್ಮಶಾನ ಅಭಿವೃದ್ಧಿ, ಕೊಳವೆ ಬಾವಿ ಮರುನಿರ್ಮಾಣ, ಒಕ್ಕಣೆಕಣ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಧನದ ಕೊಟ್ಟಿಗೆ ನಿರ್ಮಾಣ, ಸಸಿ ನಡುವೆ ಕಾಮಗಾರಿ ಸೇರಿದಂತೆ ಹಲವು ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಬಹುದು.

Advertisement

ಜೊತೆಗೆ ಈ 2019-20ರ ಸಾಲಿನ ಪ್ರಸ್ತುತ ವರ್ಷವನ್ನು ನೀರು ಮತ್ತು ಮಣ್ಣಿನ ಸಂರಕ್ಷಣೆಯನೀಡುವ ನಿಟ್ಟಿನಲ್ಲಿ ಜಲಮೂಲಗಳ ಪುನಶ್ಚೇತನ ಹಾಗೂ ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂದು ಘೋಷಿಸಿದೆ. ಆದರೆ, ಪಂಚಾಯಿತಿ ವ್ಯಾಪ್ತಿ ಸಸಿ ನೆಡುವುದು ಹಾಗೂ ಕಾಲುವೆ ಅಭಿವೃದ್ಧಿಗೆ ಆದ್ಯತೆಯೇ ನೀಡಿಲ್ಲ. ಕೆಲಸಗಳನ್ನು ಮಾಡಲು ಅವಕಾಶವಿದ್ದರೂ ಇದಕ್ಕೆ ಪಂಚಾಯ್ತಿ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಪಂಚಾಯ್ತಿ ಉಪಾಧ್ಯಕ್ಷ ಮಹೇಶ್‌ ಆರೋಪಿಸಿದ್ದಾರೆ.

 

-ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next