Advertisement
ಬಾದಾಮಿ ತಾಲೂಕಿನ ತೋಗುಣಶಿ ಮತ್ತು ಕೋಟೆಕಲ್ಲ ಗ್ರಾಮದಲ್ಲಿ ಶುಕ್ರವಾರ ಉದ್ಯೋಗ ಖಾತರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಹಮ್ಮಿಕೊಂಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮದಅಂಗವಾಗಿ ಆಗಮಿಸಿದ ವೇಳೆ ಕೋಟೆಕಲ್ಲ ಗ್ರಾಮ ವ್ಯಾಪ್ತಿಯಲ್ಲಿ ನಾಲಾ ಸಂರಕ್ಷಣೆಗಾಗಿ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Related Articles
Advertisement
ವಿಕಲಚೇತನ ಕೂಲಿ ಕಾರ್ಮಿಕರಾದ ಯಮನವ್ವ ಪೂಜಾರಿ ಮಾತನಾಡಿ, ನರೇಗಾ ಯೋಜನೆಯಿಂದ ನಮಗೆ ವರದಾನವಾಗಿದೆ. ಉದ್ಯೋಗ ಅರಿಸಿ ವಲಸೆ ಹೋಗುವದನ್ನು ತಪ್ಪಿಸಿದೆ. ತಿಂಗಳು ಗಟ್ಟಲೇ ಬೇರೆ ರಾಜ್ಯಕ್ಕೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ಹೊಲದ ಕೆಲಸ ಇಲ್ಲದ ಸಮಯದಲ್ಲಿ ತುಂಬಾ ತೊಂದರೆಯಾಗುತ್ತಿತ್ತು. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಜೀವನ ನಡೆಸಲು ತೊಂದರೆಯಾಗುತ್ತಿತ್ತು. ವಿಕಲತೆ ಹೊಂದಿದರು ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿಕೊಂಡರು. ಕಾರ್ಮಿಕ ಯಲ್ಲಪ್ಪ ಉಪ್ಪಾರ ಮಾತನಾಡಿ, ನರೇಗಾ ಯೋಜನೆ ನಮಗೆ ಅನ್ನ ಹಾಕುತ್ತಿದೆ. ಕೆಲಸಕ್ಕೆಂದು ಬೇರೆಯವರ ಜಮೀನುಗಳಿಗೆ ಹೋಗಿಕೆಲವೇ ದಿನಗಳ ವರಗೆ ಕೂಲಿ ಮಾಡಬೇಕಾಗುವ ಸಂದರ್ಭ ಒದಗಿಬರುತ್ತಿತ್ತು. ಆದರೆ ನರೇಗಾದಿಂದ 150 ದಿನಗಳ ಕೆಲಸ ದೊರೆಯುತ್ತಿರುವುದು ಅನುಕೂಲವಾಗಿದೆ ಎಂದರು.
ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ: ಕೋಟಿಕಲ್ಲ ಗ್ರಾಮ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಸ್ಥಳದಲ್ಲಿ ಆರೋಗ್ಯ ಶಿಬಿರ ನಡೆಸಲಾಯಿತು. ಕೆಲಸದಲ್ಲಿ ತೊಡಗಿದ್ದ ಒಟ್ಟು 350 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಸ್ಥಳದಲ್ಲಿಯೇ ಔಷಧಿ ನೀಡಲಾಯಿತು. ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಸವರಾಜ ಕಾರ್ಮಿಕರ ತಪಾಸಣೆ ಮಾಡಿದರು.
ಈ ವೇಳೆ ಡಿಎಚ್‌ಒ ಡಾ| ಅನಂತ ದೇಸಾಯಿ, ಬಾದಾಮಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಡಾ| ಪುನಿತ್, ತೋಗುಣಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಲ್.ಜಿ. ಶಾಂತಗೇರಿ, ಎಡಿಪಿಸಿ ನಾಗರಾಜ ರಾಜನಾಳ, ಜಿಲ್ಲಾ ಐಇಸಿ ಸಂಯೋಜಕ ಪವನ ಕುಲಕರ್ಣಿ, ಜಿಲ್ಲಾ ಡಿಎಂಐಎಸ್ ಉಜ್ವಲ ಸಕ್ರಿ, ತಾಲೂಕು ಐಇಸಿ ಸಂಯೋಜಕ ಸಮೀರ ಉಮರ್ಜಿ, ಈರಣ್ಣ ಮಾಸ್ತಿ ಇದ್ದರು.