ಚಿಕ್ಕಬಳ್ಳಾಪುರ: ಯುವತಿಗೆ ಆನ್‌ಲೈನ್ ವಂಚಕರು 11 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ನಾಯನಹಳ್ಳಿಯ ಬಿಇ ವಿದ್ಯಾರ್ಥಿನಿ ಕುಮಾರಿ ಬಿಂದು ಬಿ.ಬಿನ್ ಕೆ.ಶಶಿಕುಮಾರ್ (19) ವಂಚನೆಗೊಳಗಾದವರು.
ಮೇ 11ರಂದು ಬಿಂದು ಮೊಬೈಲ್‌ನಲ್ಲಿ ಗೂಗಲ್ ನಲ್ಲಿ ಬ್ರೌಸ್ ಮಾಡುತ್ತಿದ್ದಾಗ ಇಂಡಿಯಾ ಮಾರ್ಟ್ ಹೆಸರಿನ ಕಂಪನಿ ಪಾರ್ಟ್ ಟೈಂ ಜಾಬ್, ವರ್ಕ್ ಫ್ರಂ ಹೋಂ ಮತ್ತು ಮೊ.ನಂಬರ್ 9564078578 ನೋಡಿ ಈ ನಂಬರ್ ಅನ್ನು ಸೇವ್ ಮಾಡಿಕೊಂಡು ಅವರಿಗೆ ಸಂದೇಶದ ಮೂಲಕ ಜಾಬ್ ಬಗ್ಗೆ ವಿಚಾರ ಮಾಡಿದ್ದಾಳೆ. ಅವರು ಲಿಂಕ್ ಅನ್ನು ಕಳುಹಿಸಿ ಕೊಡುವುದಾಗಿ ತಿಳಿಸಿ, ಒಂದು ಲಿಂಕ್ ಅನ್ನು ಕಳುಹಿಸಿದರು. ಅದನ್ನು ಕ್ಲಿಕ್ ಮಾಡಿದಾಗ ಅದು ನೇರವಾಗಿ ಟೆಲಿಗ್ರಾಂಗೆ ಕರೆದುಕೊಂಡು ಹೋಯಿತು. ಅಲ್ಲಿ ಅಲೆನ್ ಎಂಬುವರು ಆಕೆಗೆ ಜಾಬ್ ಬಗ್ಗೆ ಗೈಡ್ ಮಾಡಿದರು. ನಂತರ ಆಗಿದ್ದೆ ಬೇರೆ ಕಥೆ.
11, 08611 ರೂ. ವಂಚನೆ: ಬಿಂದುಗೆ ವಿವಿಧ ಶುಲ್ಕಗಳ ಜತೆಗೆ ಕಷ್ಟದ ಟಾಸ್ಕ್ಗಳನ್ನು ನೀಡಿ ಆನ್‌ಲೈನ್ ವಂಚಕರು ಆಕೆಯ ಬಳಿ ಒಟ್ಟು 11,08,611 ರೂ. ಗಳನ್ನು ಆನ್ ಲೈನ್ ಮೂಲಕ ಪಡೆದು ವಂಚನೆ ಮಾಡಿದ್ದಾರೆ. ಸದ್ಯ ಸದರಿ ಸೈಬರ್ ವಂಚಕರ ವಿರುದ್ಧ ಬಿಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ