Advertisement

Fraud Case ಉದ್ಯೋಗ ಕೊಡಿಸುವುದಾಗಿ ವಂಚನೆ: ಮೂವರು ಆರೋಪಿಗಳ ಸೆರೆ

12:06 AM Feb 10, 2024 | Team Udayavani |

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಪ್ರಕರಣವನ್ನು ಬೆೇಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ತುಮಕೂರಿನ ಚಿಕ್ಕನಾಯಕನ‌ ಹಳ್ಳಿಯ ಸುಮಿತ್ರಾ ಬಾಯಿ ಸಿ.ಆರ್‌. (23), ಹಾಸನದ ಹಳಸಿನಹಳ್ಳಿಯ ಸೌಂದರ್ಯಾ ಎಂ.ಎಸ್‌ (21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್‌ ಕುಮಾರ್‌ ನಾಯ್ಕ (19) ಬಂಧಿತರು.

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದ್ದು, ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಜಾಹೀರಾತು ನೀಡಿ, ಅಮಾಯಕರನ್ನು ವಂಚಿಸಲಾಗುತ್ತಿತ್ತು. ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ಯುವತಿಯೊಬ್ಬರು ಇವರಿಂದ ವಂಚನೆಗೆ ಒಳಗಾಗಿದ್ದು 2,25,001 ರೂ.
ಕಳೆದುಕೊಂಡಿದ್ದಾರೆ.

ಜಾಹೀರಾತು ನೋಡಿ ಅದರಲ್ಲಿ ನಮೂದಿಸಿದ ಫೋನ್‌ ನಂಬರ್‌ಗೆ ಕರೆ ಮಾಡಿದಾಗ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ನೀಡಿ, ಕೆಲಸಕ್ಕೆ ಸೇರಬಯಸುವುದಾದರೆ ಹಣ ಕೊಡುವಂತೆ ತಿಳಿಸಿ ಸುಮಾರು 7 ತಿಂಗಳಿನಿಂದ ಆನ್‌ಲೈನ್‌ ಮೂಲಕ ಹಣವನ್ನು ವರ್ಗಾಯಿಸಿ ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಯುವತಿಯಿಂದ ಗೂಗಲ್‌ ಪೇ ಮುಖಾಂತರ ಇದುವರೆಗೆ 2,25,001 ರೂ. ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಪಾವತಿ ಮಾಡಿಸಿಕೊಂಡಿದ್ದರು. ಪದೇಪದೆ ಕರೆ ಮಾಡಿ ಇನ್ನಷ್ಟು ಹಣಕ್ಕೆ ಬೇಡಿಕೆ ಸಲ್ಲಿಸಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೆ ಇದ್ದಾಗ ಯುವತಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ದ.ಕ. ಎಸ್ಪಿ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಎಸ್ಪಿ ಧರ್ಮಪ್ಪ ಎಂ.ಎನ್‌. ಮತ್ತು ರಾಜೇಂದ್ರ ಡಿ.ಎನ್‌. ಅವರ ನಿರ್ದೇಶನದಲ್ಲಿ ಪುತ್ತೂರು ಡಿವೈಎಸ್‌ಪಿ ಡಾ| ಅರುಣ್‌ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ನಿರೀಕ್ಷಕ ರವಿ ಬಿ.ಎಸ್‌. ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಉಪ ನಿರೀಕ್ಷಕ ಜಂಬುರಾಜ್‌ ಬಿ. ಮಹಾಜನ್‌ ನೇತೃತ್ವದಲ್ಲಿ ಎಎಸ್‌ಐ ಶ್ರೀಧರ್‌ ರೈ, ಸಿಬಂದಿ ಮಧು ಕೆ.ಎನ್‌., ಸತೀಶ್‌ ಎನ್‌. ಗಿರೀಶ ಕೆ., ಶಿವಪುತ್ರಮ್ಮ, ಎಚ್‌.ಜಿ. ಹಕೀಂ ಮತ್ತು ಗಣಕಯಂತ್ರ ವಿಭಾಗದ ದಿವಾಕರ್‌, ಸಂಪತ್‌ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next