Advertisement

ಹೈನುಗಾರಿಕೆಯಿಂದ ಗ್ರಾಮೀಣ ಯುವಕರಿಗೆ ಉದ್ಯೋಗ: ರವಿ

04:13 PM Feb 10, 2020 | Suhan S |

ಕನಕಪುರ: ಹೈನುಗಾರಿಕೆಯಲ್ಲಿ ರೈತರು ಸಬಲತೆ ಸಾಧಿಸಲು ಬೆಂಗಳೂರು ಹಾಲು ಒಕ್ಕೂಟ ಬಹಳ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ತಿಳಿಸಿದರು.

Advertisement

ತಾಲೂಕಿನ ಮರಳವಾಡಿಯಲ್ಲಿ ರಾಜ್ಯ ಹಾಲು ಒಕ್ಕೂಟದ ಮಹಾ ಮಂಡಳಿ ಹಾಗೂ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸಹಯೋಗದೊಂದಿಗೆ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸಬ್ಸಿಡಿ ದರದಲ್ಲಿ ದೇಶಿ ತಳಿ ರಾಸುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಹಲವಾರು ನಿರುದ್ಯೋಗ ಯುವಕರು ಉದ್ಯೋಗ ಹರಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.ಅಂತಹ ನಿರುದ್ಯೋಗ ಯುಕರಿಗೆ ಸ್ಥಳಿಯವಾಗಿ ಉದ್ಯೋಗ ಒದಗಿಸಿ ಕೂಟ್ಟು ಹೈನುಗಾರಿಕೆ ಉದ್ಯಮಕ್ಕೆ ಉತ್ತೇಜನ ನೀಡಲು ಹಾಲು ಉತ್ಪಾದಕ ರೈತರಿಗೆ ಸಬ್ಸಿಡಿ ದರದಲ್ಲಿ ದೇಶಿ ತಳಿ ರಾಸುಗಳನ್ನು ವಿತರಿಸಲಾಗುತ್ತಿದೆ ಎಂದರು. ಮೊದಲ ಹಂತವಾಗಿ ಮರಳವಾಡಿಯಲ್ಲಿ 200 ರಾಸುಗಳನ್ನು ವಿತರಿಸಲಾಗುತ್ತಿದ್ದು, 80 ಸಾವಿರದ ರಾಸುಗಳನ್ನು 50 ರಷ್ಟು ಸಬ್ಸಿಡಿ ದರದಲ್ಲಿ ಅಂದರೆ ರೈತರು 40 ಸಾವಿರ ಪಾವತಿಸಿದರೆ, ಸಂಘದ ವತಿಯಿಂದ 40 ಸಾವಿರ ಕೋಟ್ಟು ಉತ್ತಮ ತಳಿಯ ರಾಸುಗಳನ್ನು ನೀಡಲಾಗುತ್ತಿದೆ. ಅಲ್ಲದೆ ರೈತರು ರಾಸು ಖರೀದಿಸಲು ಸಂಘದ ವತಿಯಿಂದ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಸಪ್ಪ, ಇಕ್ಬಾಲ್‌ ಹುಸೇನ್‌,ನಾಗರಾಜು, ಮುನಿ ಹುಚ್ಚೇಗೌಡ, ರಾಮಕೃಷ್ಣ, ಯದುನಂದನ್‌ಗೌಡ,ಗೌತಮ್‌ಗೌಡ, ಅಶೋಕ್‌, ಜಗದೀಶ್‌, ವೆಂಕಟಸ್ವಾಮಿ, ವರದರಾಜು ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next