Advertisement
ದಿ. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಸ್ಥಾಪಿತ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಕನಸಿನ ಯೋಜನೆ ಮತ್ತು ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು. ಕಾಲೇಜಿನ ಹಳೆಯ ವಿದ್ಯಾರ್ಥಿ ಎಂಬ ಕಾರಣಕ್ಕೆ ಕುಮಾರಸ್ವಾಮಿಯವರಿಗೆ ಈ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Related Articles
Advertisement
ಇನ್ನೂ ಅನೇಕ ವಿಷಯಗಳ ಬಗ್ಗೆ ಗಮನ ಕೊಡಬೇಕಿದೆ. ತೆರಿಗೆ ಹಣದ ಒಂದೊಂದು ಪೈಸೆಯೂ ಸದ್ಬಳಕೆ ಆಗಬೇಕು. ಒಂದು ಕ್ಷಣವೂ ವ್ಯರ್ಥ ಮಾಡದೇ ನಾನು ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಈ ವೇಳೆ ದಿ. ನ್ಯಾಷನಲ್ ಎಕುಕೇಷನ್ ಸೊಸೈಟಿ ಆಫ್ ಕರ್ನಾಟಕ ಇದರ ಅಧ್ಯಕ್ಷ ಡಾ. ಎ.ಎಚ್. ರಾಮರಾವ್, ಕಾರ್ಯದರ್ಶಿ ಪ್ರೊ. ಎನ್.ಎಸ್. ನಾಗರಾಜ ರೆಡ್ಡಿ, ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಮತ್ತಿತರರು ಇದ್ದರು.
ಪ್ರಶ್ನೆಗೆ ಹೆದರಿ ಕೊನೇ ಬೆಂಚಲ್ಲಿ ಕೂರ್ತಿದ್ದೆ!: ಇದೇ ವೇಳೆ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಎಚ್. ನರಸಿಂಹಯ್ಯ ಅವರ ಪರಿಶ್ರಮದ ಫಲವಾಗಿರುವ ಈ ಕಾಲೇಜಿನಲ್ಲಿ ನನಗೆ ಸೀಟು ಸಿಕ್ಕದ್ದೇ ಪುಣ್ಯ. ಅವರಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ಮೇಷ್ಟ್ರು ಎಲ್ಲಿ ಪ್ರಶ್ನೆ ಕೇಳ್ತಾರೊ ಎಂದು ಹೆದರಿ ಲಾಸ್ಟ್ ಬೆಂಚ್‌ನಲ್ಲಿ ಕೂರುತ್ತಿದೆ. ಆ ದಿನಗಳಲ್ಲಿ ಕಷ್ಟ ಪಟ್ಟು ಓದಿದ್ದರೆ ಐಎಎಸ್ ಆಫಿಸರೋ ಮತ್ತೇನೂ ಆಗುತ್ತಿದೆ.
ಆದರೆ, ಓದದೇ ಇದ್ದಿದ್ದಕ್ಕೆ ಅನುಕೂಲ ಆಯಿತೇನೂ ಎಂದು ಈಗ ಅನಿಸುತ್ತಿದೆ. ಕಾಲೇಜು ದಿನಗಳಲ್ಲಿ ಹುಡುಗಾಟಿಕೆ ಸಹಜ. ಆದರೆ, ಬರೀ ಹುಡುಕಾಟಿಗೆ ಮಾಡಿದರೆ ಜನ್ಮ ಕೊಟ್ಟ ತಂದೆ ತಾಯಿಗೆ ಮೋಸ ಮಾಡಿದಂತೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಪರಿಶ್ರಮದ ಮೂಲಕ ಅದನ್ನು ಸಾಬೀತುಪಡಿಸಬೇಕು. ದೇವರು ಮತ್ತು ಗುರುಗಳ ಬಗ್ಗೆ ಶ್ರದ್ಧೆ ಮತ್ತು ಭಕ್ತಿ ಇಟ್ಟುಕೊಳ್ಳಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.