Advertisement

ಉದ್ಯೋಗ ಮೇಳ: 3,818 ಫ‌ಲಾನುಭವಿಗಳು

12:30 AM Jan 21, 2019 | Team Udayavani |

ಉಡುಪಿ: ಸಂಚಲನ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಉನ್ನತಿ ಕ್ಯಾರಿಯರ್‌ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ಎರಡು ದಿನ ನಡೆದ ಉಡುಪಿ ಉದ್ಯೋಗ ಮೇಳ ರವಿವಾರ ಸಮಾಪನಗೊಂಡಿತು. 

Advertisement

7,000ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಅವಕಾಶಕ್ಕಾಗಿ ಸಂದರ್ಶನಕ್ಕೆ ಹಾಜರಾದರು. ರವಿವಾರ ಪದವಿಗಿಂತ ಕಡಿಮೆ
ಶೈಕ್ಷಣಿಕ ಅರ್ಹತೆ ಹಾಗೂ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಎರಡು ದಿನಗಳ ಸಂದರ್ಶನದಲ್ಲಿ ಆಯ್ಕೆಯಾದ 2,709 ಅಭ್ಯರ್ಥಿಗಳು ಪರೀಕ್ಷೆ ಪೂರೈಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಸಲು ಸೂಚಿಸಲಾಯಿತು. ಸಂದರ್ಶನಕ್ಕೆ ಸೂಚಿತರಾದವರು ಮತ್ತು ಸ್ಥಳದಲ್ಲಿಯೆಆದೇಶಪತ್ರಗಳನ್ನು ಪಡೆದವರು 1,109 ಮಂದಿ. ಒಟ್ಟಾರೆ ಮೇಳದ ಫ‌ಲಾನುಭವಿಗಳು 3,818 ಅಭ್ಯರ್ಥಿಗಳು. 

ಸಮಾರೋಪ ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉದ್ಯಮಿಗಳಾದ ಪುರುಷೋತ್ತಮ್‌ ಶೆಟ್ಟಿ, ಗುರ್ಮೆ ಸುರೇಶ್‌ ಶೆಟ್ಟಿ, ಅಜ್ಜರಕಾಡು ಕಾಲೇಜಿನ ರಾಮಚಂದ್ರ ಅಡಿಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ಕುಮಾರ್‌ ಶೆಟ್ಟಿ, ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಉನ್ನತಿ ಕ್ಯಾರಿಯರ್‌ ಅಕಾಡೆಮಿಯ ಸುರೇಖಾ, ಸೃಷ್ಟಿ ಸ್ಕಿಲ್ಸ್‌ ನಿರ್ದೇಶಕರಾದ ಅಕ್ಷತಾ, ಸಂದೀಪ್‌ ಗೌಡ, ಪ್ರೊ| ಉಮೇಶ್‌ ಮಯ್ಯ,  ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ವಿಜಯಕೃಷ್ಣ ಸ್ವಾಗತಿಸಿ, ಸುಬ್ರಹ್ಮಣ್ಯ ಕಿಣಿ ವಂದಿಸಿದರು. ಶಾಸಕ ಲಾಲಾಜಿ ಮೆಂಡನ್‌ ಭೇಟಿ ನೀಡಿ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದರು.

“ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಬೃಹತ್‌ ಮಟ್ಟದ ಉದ್ಯೋಗ ಮೇಳ ಆಯೋಜಿಸಿ ಜಿಲ್ಲೆಯ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ಗಿಟ್ಟಿಸುವಲ್ಲಿ ತಮ್ಮ ಸಂಸ್ಥೆ ನಡೆಸಿದ ಶ್ರಮ ಇಂದು ಸಾರ್ಥಕಗೊಂಡಿದೆ. ಯುವಕರ ಭವಿಷ್ಯಕ್ಕೆ ಇದೊಂದು ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದೆ. ಮುಂದಿನ ಬಾರಿಯೂ ಇಂತಹ ಮೇಳಗಳ ಮೂಲಕ ಹಾಗೂ ಅಭ್ಯರ್ಥಿಗಳ ತರಬೇತಿಯ ಮೂಲಕ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ಮ ಸಂಸ್ಥೆ ಪ್ರಯತ್ನಿಸಲಿದೆ’.
 - ಪ್ರೇಮ್‌ ಪ್ರಸಾದ್‌ ಶೆಟ್ಟಿ,ಸಂಚಲನ ಸಂಸ್ಥೆ ಅಧ್ಯಕ್ಷ  

Advertisement
Advertisement

Udayavani is now on Telegram. Click here to join our channel and stay updated with the latest news.

Next