Advertisement

ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ನೌಕರರ ಪ್ರತಿಭಟನೆ

06:29 AM Jun 03, 2020 | Lakshmi GovindaRaj |

ಮಾಲೂರು: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಬೆಸ್ಕಾಂ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ, ಕರ್ತವ್ಯ ನಿರ್ವಹಿಸಿದರು. ಇಲ್ಲಿನ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂ ತರರ  ಕಚೇರಿ ಮುಂದೆ ಸಂಘಟಿತರಾದ ನೌಕರರು, ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸಿ, ಕರ್ತವ್ಯ ನಿರ್ವಹಿಸಿದರು.

Advertisement

ಸಾರ್ವಜನಿಕ ವಲಯದಲ್ಲಿ ಶ್ರಮಿಕ ವರ್ಗವಾಗಿರುವ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ  ನೀತಿಯಿಂದ ಅನೇಕ ನೌಕರರು ಬೀದಿ ಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ದೇಶದಲ್ಲಿ ಬಿಎಸ್‌ಎನ್‌ಎಲ್‌ನ ಖಾಸಗಿ àಕರಣ ಮಾಡಿರುವುದರಿಂದ ಅನೇಕ  ನೌಕರರು ಸ್ವಯಂ ನಿವೃತ್ತಿ ಆಗಿ ಮೂಲೆ ಗುಂಪಾಗಿದ್ದಾರೆ.

ಅದೇರೀತಿ ವಿದ್ಯುತ್‌ ಸರಬರಾಜು ಕಂಪನಿಗಳ ಮೇಲೆಯೂ ಖಾಸ ಗೀಕರಣದ ಬ್ರಹ್ಮಾಸOಉವನ್ನು ಪ್ರಯೋಗ ಮಾಡಿ ರುವುದ ರಿಂದ ನೌಕರರ ಜೊತೆಗೆ ಸಾರ್ವಜನಿಕರು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ನೌಕರರು ಆರೋಪಿ  ಸಿದರು. ಖಾಸಗೀಕರಣದಿಂದ ವಿದೇಶಿ ಹೂಡಿಕೆಗಳು ಹೆಚ್ಚಾ ಗುವ ಆತಂಕವಿದ್ದು, ಇದರಿಂದ ಶ್ರಮಿಕ ವರ್ಗದ ಮೇಲೆ ಗಂಭೀರ ಪರಿಣಾಮವಾಗಲಿದೆ.

ದೇಶೀಯ ಸಂಸ್ಥೆ ಗಳ  ಜನಮಾನಸದಿಂದ ದೂರ ಸರಿಯುವ ಸಾಧ್ಯತೆಗಳಿವೆ. ಇಂತಹ ಅನೇಕ ಕಾರಣಗಳಿಂದ ಕೇಂದ್ರ ಸರ್ಕಾರ ಜನ, ನೌಕರರ ವಿರೋಧಿಗಳ ನಡುವೆ ಖಾಸಗೀಕರಣ ನೀತಿ ಹೇರುವುದು ಬೇಡ ಎಂದು ಆಗ್ರಹಿಸಿದರು. ಬೆಸ್ಕಾಂ ಎಇಇ ಅನ್ಸರ್‌ ಪಾಷಾ,  ಎಇ ದಿವ್ಯಾ, ವೆಂಕಟೇಶ್‌, ಆನಂದ್‌ಕುಮಾರ್‌, ಶಾಖಾಧಿಕಾರಿಗಳಾದ ಬಾಲಸುಬ್ರಮಣಿ, ಶ್ರೀನಾಥ್‌, ಚಂದ್ರಪ್ಪ, ಲೈನ್‌ಮೆನ್‌ ಗಳು, ಬೆಸ್ಕಾಂ ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next