ಬೆಂಗಳೂರು: ಖಾತೆ ಬದಲಾವಣೆಗೆ 500 ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಪಿಡಿಒ ಒಬ್ಬರನ್ನು ಅಮಾನತುಗೊಳಿಸಿದ ಪ್ರಕರಣದಲ್ಲಿ ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಸರ್ಕಾರಿ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಾಗ ಆಯಾ ಇಲಾಖೆ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಪಾರದರ್ಶಕ ಮತ್ತು ಮಾನವೀಯತೆಯ ನಡೆ ಹೊಂದಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದೆ.
ಖಾತೆ ಬದಲಾವಣೆಗೆ 500 ರೂ. ಲಂಚ ಪಡೆದ ಆರೋಪದಡಿ ನನ್ನನ್ನು ಪಿಡಿಒ ಸ್ಥಾನದಿಂದ ತೆಗೆದುಹಾಕಿರುವ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆ ಆದೇಶವನ್ನು ರದ್ದು ಪಡಿಸಬೇಕು’ ಎಂದು ಕೋರಿ ಪಿ.ವಿ. ರುದ್ರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯ ಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ಜಿ.ಬಸವರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಬಳಿಕ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಸರ್ಕಾರದ ಆದೇಶವನ್ನು ರದ್ದುಪಡಿಸಿತು. ಅಲ್ಲದೆ, ಪಿ.ವಿ.ರುದ್ರಪ್ಪ ಅವರಿಗೆ ಕಾನೂನು ಪ್ರಕಾರ ಅವರ ಸೇವಾ ನಿವೃತ್ತಿಯ ತನಕ ಸಲ್ಲಬೇಕಾದ ಸಂಬಳ, ನಂತರದ ಪಿಂಚಣಿ ಸೇರಿ ಕಾನೂನು ಬದ್ಧವಾದ ಎಲ್ಲ ಸೌಲಭ್ಯಗಳನ್ನೂ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿತು.
ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ನೌಕರರು ಸರ್ಕಾರಗಳ ಗುಲಾಮರಲ್ಲ. ಅಷ್ಟಕ್ಕೂ ನಮ್ಮ ವ್ಯವಸ್ಥೆ ಈಸ್ಟ್ ಇಂಡಿಯಾ ಕಂಪನಿಯೂ ಅಲ್ಲ. ಹಾಗಾಗಿ, ಸರ್ಕಾರಿ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸು ವಾಗ ಆಯಾ ಇಲಾಖೆ ಮತ್ತು ಸಂಬಂಧ ಪಟ್ಟ ಸಂಸ್ಥೆಗಳು ಪಾರದರ್ಶಕ ಮತ್ತು ಮಾನ ವೀಯತೆಯ ನಡೆ ಹೊಂದಿರ ಬೇಕು ಎಂದು ಸೂಕ್ಷ್ಮವಾಗಿ ಹೇಳಿತು.
ಪಿ.ವಿ.ರುದ್ರಪ್ಪ ದಾವಣಗೆರೆ ತಾಲೂಕು ಮಾಯಕೊಂಡ ಹೋಬಳಿ ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಈ ವೇಳೆ ಖಾತೆ ಬದಲಾವಣೆಗೆ ಲಂಚ ಪಡೆದ ಆರೋಪದಡಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು.