Advertisement

ನೌಕರರ ವೇತನ ಹೆಚ್ಚಳ: ಸಂಪುಟದಲ್ಲಿ ತೀರ್ಮಾನ

06:25 AM Feb 09, 2018 | |

ವಿಧಾನ ಪರಿಷತ್‌: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಕುರಿತಂತೆ 6 ನೇ ವೇತನ ಆಯೋಗದ ಶಿಫಾರಸುಗಳ ಕುರಿತು ಶೀಘ್ರವೇ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗ ಈಗಾಗಲೇ ಮೊದಲ ವರದಿ ನೀಡಿದೆ. ಅದರಲ್ಲಿ ನೌಕರರ ಮೂಲ ವೇತನದ ಶೇ.30 ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವೇತನ ಹೆಚ್ಚಳ ಸೇರಿ ಇತರೆ ವಿಚಾರಗಳ ಬಗ್ಗೆ ವೇತನ ಆಯೋಗದ ಶಿಫಾರಸಿನಿಂದ ಶೇ.99.99 ಸರ್ಕಾರಿ ನೌಕರರು ಖುಷಿಯಾಗಿದ್ದಾರೆ. ಕೇಂದ್ರ ಸರ್ಕಾರ 10 ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡಿ ವೇತನ ಹೆಚ್ಚಳ ಮಾಡುತ್ತದೆ. ಆದರೆ, ರಾಜ್ಯ ಸರ್ಕಾರ ಆರೇಳು ವರ್ಷಗಳಿಗೊಮ್ಮೆ ಆಯೋಗ ರಚನೆ ಮಾಡುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next