ತುಮಕೂರು: ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ದಿನೇ ದಿನೆ ಅಶ್ಲೀಲತೆ ಎಲ್ಲಾ ಕಡೆ ಹರಡುತ್ತಿದ್ದು, ಅಶ್ಲೀಲ ಜಾಲತಾಣಗಳಿಗೆ ಕಡಿವಾಣ ಹಾಕುವ ಬದಲು ಬರಿ ಸಿಸಿಟೀವಿ ಅಳವಡಿಸಿ ಇದಕ್ಕೆ ಕಡಿವಾಣ ಹಾಕಿದ್ದೇವೆ. ಹೆಣ್ಣು ಮಕ್ಕಳ ರಕ್ಷಣೆಗೆ ಇಷ್ಟು ಸಾಕಾಗುತ್ತದೆ ಎಂದು ಹೇಳುತ್ತಿವೆ. ಆದರೆ, ವಿಕೃತ ಮನಸ್ಥಿತಿ ಬೆಳೆಯಲು ಅನುವು ಮಾಡಿಕೊಡುತ್ತಿದೆ ಎಂದು ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಕಲ್ಯಾಣಿ ತಿಳಿಸಿದರು.
ಜಸ್ಟೀಸ್ ವರ್ಮ ವರದಿ ಜಾರಿಗೆ ತನ್ನಿ: ರಾಯಚೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಹೇಯ ಕೃತ್ಯ ಮಾಡಿ ತಪ್ಪಿಸಿಕೊಳ್ಳುವುದು ಹೇಗೆ ಎಂದು ಈ ವಿಕೃತಗಾಮಿಗಳಿಗೆ ಕಲಿಸುವಂತೆ ನಮ್ಮ ಕಾನೂನುಗಳಿವೆ ಇವು. ಸಂಪೂರ್ಣವಾಗಿ ಬದಲಾಗಬೇಕು ಮತ್ತು ಜಸ್ಟೀಸ್ ವರ್ಮ ಅವರ ವರದಿ ಜಾರಿಗೆ ತರುವಂತಾಗಬೇಕೆಂದು ಒತ್ತಾಯಿಸಿದರು. ಎಐಡಿಎಸ್‌ಒ ಜಿಲ್ಲಾ ಸಂಘಟನಾಧಿಕಾರಿ ಅಶ್ವಿನಿ ಮಾತನಾಡಿ, ಮಧುಗೆ ನ್ಯಾಯ ಸಿಗುವವರೆಗೂ ನಾವುಗಳು ನಮ್ಮ ಹೋರಾಟವನ್ನು ಮುಂದುವರಿ ಸುತ್ತೇವೆ. ಮುಂದೆ ಯಾವ ಹೆಣ್ಣುಮಕ್ಕಳು ಇಂಥ ಕೃತ್ಯಕ್ಕೆ ಬಲಿಯಾಗಬಾರದು ಜನಗಳು ಈ ನಿಟ್ಟಿನಲ್ಲಿ ಒಂದಾಗಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಕೆಳಿಕೊಂಡರು.
ಮಧುಗೆ ನ್ಯಾಯ ಸಿಗಲಿ: ಆವಿಷ್ಕಾರ ಸಂಘಟನೆ ಶಾಂತಮೂರ್ತಿ ಮಾತನಾಡಿ, ನಮ್ಮ ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮ ನೀಡಲು ಸರ್ಕಾರಗಳು ಯಾವುದೇ ನೀತಿ ತರುತ್ತಿಲ್ಲ. ರಕ್ಷಣೆ ನೀಡದ ಸರ್ಕಾರ ಗಳು ಏಕೆ ಬೇಕು. ಉನ್ನತ ನೀತಿ ಸಂಸ್ಕೃತಿ ನಮ್ಮ ಗುರಿಯಾಗಬೇಕು ಅದಕ್ಕಾಗಿ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಹರಡುವ ಕಾರ್ಯಕ್ರಮಗಳು ಬೇಕು. ಶಿಕ್ಷಣ ವ್ಯವಸ್ಥೆ ಈ ನಿಟ್ಟಿನಲ್ಲಿ ವೈಜ್ಞಾನಿಕ ವಾಗಿರಬೇಕು. ಮಧುಗೆ ನ್ಯಾಯ ಸಿಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ರತ್ನಮ್ಮ, ಚೈತ್ರಾ, ಗಾಯತ್ರಿ, ತೇಜಶ್ವಿನಿ, ಬಸವರಾಜು, ವಿರೇಶ್, ಸಾಗರ್, ಶೋಭಾ ಮತ್ತಿತರರು ಪಾಲ್ಗೊಂಡಿದ್ದರು.
Advertisement
ನಗರದ ಅಮಾನಿಕೆರೆ ಮುಂಭಾಗದಲ್ಲಿ ಆಲ್ ಇಂಡಿಯಾ ಡೆಮೊಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಅಖೀಲ ಭಾರತ ಸಾಂಸ್ಕೃತಿಕ ಮಹಿಳಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಆತ್ಯಾಚಾರ ಮತ್ತು ಕೊಲೆ ಪ್ರಕರಣ ಶೀಘ್ರ ತನಿಖೆಯಾಗಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗ ಬೇಕೆಂದು ಎಂದು ಮಾತನಾಡಿದರು. ಮಹಿಳೆಯರಿಗೆ ರಕ್ಷಣೆಯಿಲ್ಲದ ಸ್ಥಿತಿ ಸಮಾಜದಲ್ಲಿ ಇದೆ. ಯುವತಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚು ತ್ತಿವೆ. ಅದರೂ ಸರ್ಕಾರಗಳು ಮಹಿಳೆ ಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲ ವಾಗಿವೆ ಎಂದು ಹೇಳಿದರು.