Advertisement

ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿ: ಸಾ.ರಾ. ಮಹೇಶ್‌

11:47 AM Jul 01, 2017 | Team Udayavani |

ಭೇರ್ಯ: ಸಂಘಗಳ ಹೆಸರಲ್ಲಿ ಯಾರಿಗೂ ನೋವುಂಟು ಮಾಡದೇ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜತೆಗೆ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಲು ಧೃಡಸಂಕಲ್ಪ ಮಾಡಿ ಎಂದು ಶಾಸಕ ಸಾ.ರಾ. ಮಹೇಶ್‌ ಕರೆ ನೀಡಿದರು.

Advertisement

ಸಮೀಪದ ಕುರುಬಳ್ಳಿಯಲ್ಲಿ ರಾಜ್ಯ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲೂಕು ಸಂಘ ಉದ್ಘಾಟಿಸಿ ಮಾತನಾಡಿ, ತಾಲೂಕು ಸಂಘವನ್ನು ತಾಲೂಕು ಮಟ್ಟದಲ್ಲಿ ಉದ್ಘಾಟಿಸದೇ ಗ್ರಾಮೀಣ ಪ್ರದೇಶದಲ್ಲಿ ಉದ್ಘಾಟಿಸುತ್ತಿರುವುದು ಶ್ಲಾಘನೀಯ. ರಾಜ್ಯ ಮಟ್ಟದಲ್ಲಿ ಯುವ ಪಡೆಗಳನ್ನು ಕಟ್ಟುವುದು ಬಹಳ ಕಷ್ಟ ಕೆಲಸ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇನ್ನೂ ಕಷ್ಟ ಕೆಲಸ ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರನ್ನು ಒಗ್ಗಟ್ಟಿನಿಂದ ಕರೆದು ಕೊಂಡು ಹೋಗುವ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಸಹಕರಿಸಿ: ನಿಮ್ಮೂರಿನ ರಸ್ತೆ, ಕಾಂಕ್ರೀಟ್‌ ರಸ್ತೆ, ಸಾರ್ವಜನಿಕರ ಆಸ್ತಿ ಹಾನಿ ಮಾಡುವವರನ್ನು ಕರೆದು ಮನವರಿಗೆ ಮಾಡಿ, ಹಳ್ಳಿಗಳಲ್ಲಿ ಗಲಾಟೆ, ಘರ್ಷಣೆಯಾದಂತೆ ತಡೆಗಟ್ಟಿ, ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿ, ಯಾರಿಗೂ ಸಂಘದ ಹೆಸರಿನಲ್ಲಿ ನೋವೂಂಟು ಮಾಡ ಬೇಡಿ ಎಂದರು.

ನಾನು ಯಾವುದೇ ಜಾತಿ ನೋಡಿ ಅಭಿವೃದ್ಧಿ ಕೆಲಸ ಮಡುತ್ತಿಲ್ಲ, ನನ್ನನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಅಂತಹ ಮನೆಯವರ ಜೀತ ಮಾಡುತ್ತೀದ್ದೇನೆ ಅಷ್ಟೇ, ತನ್ನ ಬಗ್ಗೆ ಪ್ರೀತಿ,  ವಿಶ್ವಾಸ ಇರಲಿ, ನಾನು ನಿಮ್ಮೂರಿನ ಮಗನಂತೆ ಹೆಚ್ಚು ಅಭಿವೃದ್ಧಿ ಮಾಡುತ್ತೇನೆ, ಮಹಿಳಾ ಸಂಘದವರು ಸಂಘ ನಡೆಸಲು 3 ಲಕ್ಷ ಅನುದಾನದಲ್ಲಿ ಮಹಿಳಾ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜಾÂಧ್ಯಕ್ಷ ಎಂ.ಎಸ್‌.ಸುನೀಲ್‌ ಮಾತನಾಡಿ, ವೇದಿಕೆ ನಾಡು, ನುಡಿ, ಜಲ, ರೈತರಪರ ಹಾಗೂ ನೊಂದವರ ಪರ ಹೋರಾಟವಾಗಿದ್ದು, ಹಳ್ಳಿಗಳಿಂದಲೇ ನಮ್ಮ ಹೋರಾಟ ಪ್ರಾರಂಭಿಸಲು ವೇದಿಕೆಯ ತಾಲೂಕು ಸಂಘವನ್ನು ಉದ್ಘಾಟನೆ ಮಾಡುತ್ತಿರುವುದಾಗಿ ತಿಳಿಸಿದರು.

Advertisement

ಮೈಮುಲ್‌ ನಿದೇರ್ಶಕ ಎ.ಟಿ.ಸೋಮಶೇಖರ್‌, ತಾ. ಶಸಾಪ ಅಧ್ಯಕ್ಷ ಸಿ.ಪಿ.ರಮೇಶ್‌, ಹಿರಿಯ ಮುಖಂಡ ಕುರುಬಳ್ಳಿ ಚನ್ನಪ್ಪಾಜಿ, ತಾಪಂ ಸದಸ್ಯೆ ಮಮತಾ ಮಹೇಶ್‌, ತಾ. ವೇದಿಕೆ ಅಧ್ಯಕ್ಷ ಕೆ.ನಂದೀಶ್‌, ದಾವಣಗೆರೆ ಜಿಲ್ಲಾ ಕರ್ನಾಟಕ ಯುವ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್‌, ಎಪಿಎಂಸಿ ನಿದೇರ್ಶಕರಾದ ಕುಪ್ಪಳ್ಳಿ ಸೋಮು,

-ಹಳೇಮಿರ್ಲೆ ಗೋವಿಂದೇಗೌಡ, ಪಿಎಲ್‌ಡಿ ಬ್ಯಾಂಕ್‌ ನಿದೇರ್ಶಕ ಬಾಚಹಳ್ಳಿ ಚಂದ್ರಹಾಸ, ತಾಪಂ ಮಾಜಿ ಅಧ್ಯಕ್ಷ ತಂದ್ರೆರವಿ, ಗ್ರಾಪಂ ಸದದ್ಯರಾದ ತುಳಸೀರಾಮೇಗೌಡ, ದೊಡ್ಡೇಗೌಡ, ಮಂಗಳಮ್ಮ, ಪಿಡಿಒ ಸ್ವಾಮಿನಾಯಕ, ಗ್ರಾಮದ ಮುಖಂಡರಾದ ಕುಮಾರ್‌, ಶಿಕ್ಷಕ ಪ್ರಸನ್ನಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next