Advertisement

ಗುರುಮಠಕಲ್‌ ಮತಕ್ಷೇತ್ರದ ತಾಂಡಾಗಳ ಅಭಿವೃದ್ಧಿಗೆ ಒತ್ತು: ಚಿಂಚನಸೂರ

05:42 PM Apr 17, 2018 | Team Udayavani |

ಯಾದಗಿರಿ: ಕಳೆದ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಗುರುಮಠಕಲ್‌ ಮತಕ್ಷೇತ್ರದ 70 ತಾಂಡಾಗಳಿಗೆ ಅಗತ್ಯ
ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಾಬುರಾವ ಚಿಂಚನಸೂರ ಹೇಳಿದರು.

Advertisement

ಗುರುಮಠಕಲ್‌ ಮತಕ್ಷೇತ್ರದ ಹೊಸಳ್ಳಿ ತಾಂಡಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ ಸರ್ಕಾರ ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಅನುಕೂಲಕರ ಯೋಜನೆ ಜಾರಿಗೆ ತಂದಿದೆ. ಅಲ್ಲದೇ ಬದ್ಧತೆಯಿಂದ ಅನುಷ್ಠಾನಗೊಳಿಸಿದೆ. ಅದರಲ್ಲಿ ವಿಶೇಷವಾಗಿ ಬಂಜಾರ ಸಮಾಜದ ಪ್ರಗತಿಗೆ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಳಿಸಿದೆ. ಕಾಂಗ್ರೆಸ್‌ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಿಂದ ಬರುವ ದಿನಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಂಜಾರ ಸಮಾಜದ ಧರ್ಮಗುರು ಸೇವಲಾಲರ ಜಯಂತಿಯನ್ನು ಸರ್ಕಾರದಿಂದಲೇ ನಾಡಿನಾದ್ಯಂತಹ ಆಚರಣೆಗೆ ನಿರ್ಧಾರ ಕೈಗೊಳ್ಳಲಾಯಿತು. ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನಪೀಠ ಸ್ಥಾಪನೆ ಮಾಡಿರುವುದರಿಂದ ಬಡವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮಾಡಲು ಅನುಕೂಲವಾಯಿತು. ಅರಣ್ಯ ಭಾಗಗಳಲ್ಲಿ ವಾಸಿಸುವ ಜನತೆಗೆ ಅಗತ್ಯ ಭೂಮಿ ಮಂಜೂರು
ಮಾಡುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಿದೆ. ಕಾರಣ ಮತದಾರರು ಇನ್ನು ಹೆಚ್ಚು ಸೇವೆ ಮಾಡಲು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್‌ ಪಕ್ಷದ ಮುಖಂಡ ನರೇಂದ್ರ ರಾಠೊಡ ಮಾತನಾಡಿ, ಸಮಾಜದ ಬಗ್ಗೆ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆ ಹೊಂದಿರುವ ಬಾಬುರಾವ ಚಿಂಚನಸೂರ ಅವರಿಗೆ ಎಲ್ಲರೂ
ಚುನಾವಣೆಯಲ್ಲಿ ಮತ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದು ಹೇಳಿದರು. ರಾಮುನಾಯಕ ತಾಂಡಾ, ಸೌದಾಗರ ತಾಂಡಾ, ಸಮಣಾಪುರ ತಾಂಡಾ, ಬಾಚವಾರ ತಾಂಡಾ ಹಾಗೂ ಕಂಚಗಾರಹಳ್ಳಿಗೆ ತೆರಳಿ ಮತಯಾಚಿಸಿದರು. ತಾಪಂ ಅಧ್ಯಕ್ಷ ಬಾಷು ರಾಠೊಡ, ಕಿಶನ ಚವ್ಹಾಣ, ಚಂದ್ರಕಾಂತ ಕವಲ್ದಾರ, ಪರಶುರಾಮ ಚವ್ಹಾಣ, ಅರ್ಜುನಪ್ಪ ಬಾಚವಾರ, ತಿಪ್ಪಣ್ಣ ಯಾದವ, ಶಾಂತಪ್ಪ ರಾಠೊಡ, ಮನ್ನು ಚವ್ಹಾಣ, ಜಯರಾಮ ದೇವಜೀ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next